Monthly Archive: January 2018
ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ ಬದಿಯ ಸೀಟಿನ ಮೇಲೆ ಏನೋ ಆಕರ್ಷಣೆ . ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು “ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ” ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ....
ಎಚ್ ಬಿ ಎಲ್ ರಾವ್ ಸಂಪಾದಿಸಿ ಪ್ರಕಟಿಸಿದ ಅಣಿ ಅರದಳ ಸಿರಿ ಸಿಂಗಾರ ಗ್ರಂಥಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡುವ 2016ನೇ ಸಾಲಿನ ಪುಸ್ತಕ ಸೊಗಸು ಪ್ರಶಸ್ತಿ ಬಂದಿದೆ. ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು...
ವೈಷ್ಣೋದೇವಿ ನಮ್ಮನ್ನು ಕರೆದಳು! ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಸಂದರ್ಭ ತಾನಾಗಿ ಬರುವುದಿಲ್ಲ, ಆ ಸ್ಥಳದಲ್ಲಿ ಆರಾಧಿಸಲ್ಪಡುವ ದೈವೀಶಕ್ತಿ ಕರೆದರೆ ಮಾತ್ರ ನಮಗೆ ದರ್ಶನದ ಅವಕಾಶ ಸಿಗುತ್ತದೆ ಎಂಬ ಪ್ರತೀತಿಯಿದೆ. ಇದೇ ರೀತಿ, ಭಾರತದ ಉತ್ತರ ತುದಿಯಲ್ಲಿರುವ ಜಮ್ಮು-ಕಾಶ್ಮೀರ ರಾಜ್ಯದ ‘ಕಟ್ರಾ’ ಪ್ರದೇಶದ ತ್ರಿಕೂಟ...
“ಮಿಸ್ಟರ್ ವಾಟ್ಸನ್, ಇಲ್ಲಿಗೆ ಬನ್ನಿ, ನಿಮ್ಮನ್ನೊಮ್ಮೆ ನೋಡಬೇಕಿದೆ!”. ಜಗತ್ತಿನ ಮೊತ್ತಮೊದಲಿನ ದೂರವಾಣಿ ಕರೆಯಲ್ಲಿನ ಮೊದಲ ಸಂದೇಶ. ಗ್ರಹಾಂ ಬೆಲ್ ಪಕ್ಕದ ಕೋಣೆಯಲ್ಲಿದ್ದ ತನ್ನ ಆತ್ಮೀಯ ಸಹಯೋಗಿ ಥೋಮಸ್ ವಾಟ್ಸನ್ ನೊಡನೆ ಮಾತನಾಡಿದ ಈ ಪ್ರಸಿದ್ಧ ವಾಕ್ಯ ಚರಿತ್ರೆಯನ್ನು ಸೇರಿ ಅಚ್ಚಳಿಯದೇ ಉಳಿದಿದೆ. ವಾಟ್ಸನ್ ಮುಖದಲ್ಲಿ ಸಂತೃಪ್ತಿಯ ನಗೆ...
ನಾನು ಭೇಟಿ ನೀಡಿದ ಚೆಂದದ ಸ್ಥಳಗಳಲ್ಲೊಂದು ಕೋಲ್ಕತಾದಲ್ಲಿರುವ ಬೇಲೂರು ಮಠ. ಕೋಲ್ಕತಾದಲ್ಲಿನ ಹೆಚ್ಚಿನ ಎಲ್ಲಾ ಪ್ರವಾಸೀ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಕಡೆಯದಾಗಿ ಬೇಲೂರು ಮಠಕ್ಕೆ ಹೋದಾಗ ನಿಜಕ್ಕೂ ಆ ಪ್ರಯಾಣ ಸಾರ್ಥಕವಾದ ಅನುಭವ. ಮಠದ ಗೇಟು ದಾಟಿ ಆವರಣ ಪ್ರವೇಶಿಸುತ್ತಿದ್ದಂತೆ, ಕೋಲ್ಕತಾದ ಧಗೆಯಲ್ಲೂ ತಂಪು ಗಾಳಿ...
ಹೂವು ಅರಳುತ್ತಿಲ್ಲ ದುಂಬಿ ಗುಂಜನವಿಲ್ಲ ಕುಕಿಲು ಕೇಕೆಗಳೆಲ್ಲಿ ಮರೆಯಾದವೋ ಬಳೆ ಗೆಜ್ಜೆ ಕಿಂಕಿಣಿಯದೀಗ ಘನಮೌನ ಯಮುನಾತೀರದಲಿ ಸೂತಕದ ಛಾಯೆ ಪ್ರಭೂ, ಕಂಡೆ ನೀ ತೆರಳಿದ್ದನ್ನ ಬೃಂದಾವನದ ಎದೆ ಬಿರಿದಿದ್ದನ್ನ ಅನಾಥ ಮುರಳಿ ತಲೆಮರೆಸಿ ಕೊಂಡಿಹನು ಸ್ತಬ್ದವಾಗಿದೆ ಈಗ ವೇಣುಗಾನ ಗೋಪಿಯರೆಲ್ಲ ಗುಳೆ ಹೋಗಿದ್ದಾರೆ ಸೇರಿದ್ದಿರಬೇಕು ನಗರ ತೀರ...
“ಗಣಿತದ ಒಂದು ಸಮೀಕರಣದಲ್ಲಿ ದೇವರ ಕಲ್ಪನೆ ಬರದಿದ್ದರೆ, ಅದಕ್ಕೆ ಅರ್ಥವೇ ಇಲ್ಲ ಎಂದು ನನಗನಿಸುತ್ತದೆ”. ಈ ಮಾತುಗಳನ್ನು ಹೇಳಿದವರು ಗಣಿತ ವಿಜ್ಞಾನಲೋಕಕ್ಕೇ ಶ್ರೇಷ್ಠ ಕೊಡುಗೆಗಳನ್ನಿತ್ತ ಭಾರತೀಯ ಪ್ರತಿಭೆ ಶ್ರೀನಿವಾಸ ರಾಮಾನುಜಂ. ತನ್ನ 32 ರ ಎಳೆಯ ಪ್ರಾಯದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ ರಾಮಾನುಜಂ, ಜೀವಿತಾವಧಿಯಲ್ಲಿ ಪೂರ್ತಿಯಾಗಿ ಅಂಕೆಗಳು,...
ಕ್ರಿಸ್ ಮಸ್ ರಜೆಯೆಂದು ತುಮಕೂರಿನಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ. ನಂತರ ಅಲ್ಲಿಯ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿದೆವು. ಎಲ್ಲವೂ ಸುಂದರವಾಗಿತ್ತು, ಲೆಕ್ಕವಿಲ್ಲದಷ್ಟು ಫೋಟೋ ಕ್ಲಿಕ್ಕಿಸಿದ್ದೂ ಆಯಿತು. ಎಲ್ಲ ಸ್ಥಳಗಳಲ್ಲಿ ನನಗೆ ವೈಯಕ್ತಿಕವಾಗಿ ಹಿಡಿಸಿದ ಸ್ಥಳ ಸುಮಾರು ೧೨೦೦ ವರ್ಷದ ಹಿಂದಿನ ಐತಿಹ್ಯ ಹೊಂದಿದ ಕೈದಳದ ಚೆನ್ನಕೇಶವ...
ಭೋರ್ಗರೆವ ಕಡಲತಡಿಯು ಬಿಳಿಹಾಲ ನೊರೆ ಅಲೆಯು! ರವಿಕಿರಣದಲಿ ತೊಯ್ದು ಸಮುದ್ರರಾಜಗೆ ವಸನ ತಾನೆ ನೇಯ್ದು! ಶಕ್ತಿಯುತ ತೆರೆಗಳ ಹೊಡೆತ ಕಠಿಣ ಕರಿಬಂಡೆ ಸಹಿಸಲದು ಸತತ! ಜೀವನದೆ ಕಷ್ಟಗಳ ಅಲೆಯ ಬಡಿತ ತಡೆವ ಶಕ್ತಿಯ ನೀಡು ದೇವ ಅನವರತ! . – ಶಂಕರಿ ಶರ್ಮಾ, ಪುತ್ತೂರು +5
ಮೈಸೂರಿನ ಮಾನಸ ಗಂಗೋತ್ರಿಗೆ ಕಾರ್ಯ ನಿಮಿತ್ತ ಹೋದಾಗೆಲ್ಲ ನಮ್ಮ ಆಪದ್ಭಾಂದವ ಎಂದರೆ ಕ್ಯಾಂಪಸ್ ನಲ್ಲಿರುವ ರೌಂಡ್ ಕ್ಯಾಂಟೀನ್. ಇಪ್ಪತ್ತು ವರ್ಷಗಳ ನಂತರ ಭೇಟಿ ಕೊಟ್ಟಾಗಲೂ ಅದೇ ಬೆರಗು, ಉಲ್ಲಾಸ, ಯೌವನದ ಸಂಭ್ರಮದೊಂದಿಗೆ ಈ ಕ್ಯಾಂಟೀನ್ ತಂಪು ಸುರಿಯುತ್ತಿರುತ್ತಿದೆ. ಇಲ್ಲಿ ಸಿಗುವ ಅದ್ಭುತವಾದ ಕಾಫ಼ಿ ನನಗೆ ಅಚ್ಚುಮೆಚ್ಚು. ಕಾಫ಼ಿಯೆಂದರೆ...
ನಿಮ್ಮ ಅನಿಸಿಕೆಗಳು…