Monthly Archive: January 2018
ಹೊಸದಾಗಿ ಬಿಡುಗಡೆಯಾಗಲಿರುವ ಬಹುಚರ್ಚಿತ ಸೂಪರ್ ಹಿಟ್ ಚಲನಚಿತ್ರವು ಪ್ರದರ್ಶಿಸಲ್ಪಡುವ ದಿನಾಂಕವನ್ನು ಮುಂಚಿತವಾಗಿ ಗಮನಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿ, ಪ್ರಥಮ ಪ್ರದರ್ಶನದಲ್ಲಿಯೇ ಸಿನೆಮಾ ನೋಡಿ ಗೆದ್ದೆವೆಂಬಂತೆ ಬೀಗುವವರಿರುತ್ತಾರೆ. ಆಸಕ್ತರಿಗೆ ಅದೊಂದು ಸಂಭ್ರಮ ಹಾಗೂ ಸಿನೆಮಾದ ಯಶಸ್ಸಿನ ಮಾನದಂಡವೂ ಹೌದು. ಆದರೆ ಸರ್ವವೂ ಆಂಗ್ಲಮಯವಾಗುತ್ತಿರುವ ಈಗಿನ ದಿನಗಳಲ್ಲೂ, ಕನ್ನಡ ಸಾಹಿತ್ಯ...
ಕನ್ನಡದ ಕಂಪನ್ನು ಹರಡಿಸುವ ಸಂಭ್ರಮ, ಇದುವೆ ಇದುವೆ ಸಾಹಿತ್ಯ ಸಂಭ್ರಮಾ, ಧಾರವಾಡ ಸಂಭ್ರಮಾ. ಸಾಹಿತ್ಯ ಸಂಭ್ರಮಾ… ಮನೋಹರ ಗ್ರಂಥಮಾಲೆ ಪ್ರಾರಂಭಿಸಿರುವ ಸಂಭ್ರಮಾ, ಗಿರಡ್ಡಿಯವರ ಸಾರಥ್ಯದಲಿ ಮೂಡಿಬರುವ ಸಂಭ್ರಮಾ. ಈ ಸಂಭ್ರಮಾ ಎಲ್ಲರಾ ಮನವನೂ ಗೆದ್ದು ಮುನ್ನಡೆದಿದೆ.. ನಿಲ್ಲದಿರಲಿ ಈ ಸಂಭ್ರಮಾ.. ಗುಣಮಟ್ಟದ ವಿಷಯಗಳಿರುವಾ ಗೋಷ್ಠಿಗಳ ಸಂಭ್ರಮಾ, ಸಾಹಿತ್ಯ...
ಚುಮು ಚುಮು ಚಳಿಯ ಹಿತ-ಅಹಿತಗಳು ಇನ್ನೇನು ಮುಗಿಯುತಲಿಹುದು. ಈ ಋತುಗಳೊಂದಿಗೆ ನಮ್ಮ ನಂಟು ಸರ್ವಕಾಲಕ್ಕು ಜೊತೆಯಾಗಿ ಇರುವಂತದ್ದು. ಚಳಿಯೆಂದರೆ ದೂರ ಮಾಡುವ ಮಾತೇ ಇಲ್ಲದ ಬೆಸೆಯುವ ಬೆಸುಗೆ. ಎರಡು ಅಂಗೈಗಳನ್ನು ಬಗಬಗನೆ ಉಜ್ಜಿ ಬಿಸಿಮಾಡಿ ಮುಖಕ್ಕೆ ಆನಿಸಿಕೊಳ್ಳುವ ಆಪ್ತ ಹೊತ್ತು. ಒಟ್ಟಿನಲ್ಲಿ ಒಗ್ಗೂಡಿಸುವ, ಸನಿಹಕ್ಕೆ ತರುವ, ಬಳಿ...
ದಿಲ್ಲಿಯಲ್ಲಿರುವ ‘ಸಾರಸ್ವತ ಸಾಂಸ್ಕೃತಿಕ ಮಂದಿರ’ 08 ಅಕ್ಟೋಬರ್ 2017 ರಂದು ಬೆಳಗ್ಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇಸ್ಟೇಷನ್ ತಲಪಿದ ನಮ್ಮನ್ನು ತಂಡದ ನಾಯಕರಾಗಿದ್ದ ಮಾರ್ತೇಶ್ ಪ್ರಭು ಅವರು ‘ಸಾರಸ್ವತ ಸಂಸ್ಕೃತಿ ಮಂದಿರ’ಕ್ಕೆ ಕರೆದೊಯ್ದರು. ಅಲ್ಲಿ ಸುಂದರವಾದ ಕೃಷ್ಣನ ಮಂದಿರವಿದೆ. ಯಾತ್ರಿಗಳಿಗೆ ಸ್ನಾನ, ವಿಶ್ರಾಂತಿಗೆ ಅನುಕೂಲಕರವಾದ ವ್ಯವಸ್ಥೆಯಿದೆ. ಈ ಮಂದಿರದಲ್ಲಿ...
ಬೆಂಗಳೂರಿನ ಮಧ್ಯಭಾಗದ ಹಾಗೂ ಸುತ್ತಮುತ್ತಲ ನಿವಾಸಿಗಳಲ್ಲಿ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ಗೆ ಹೋಗದವರು ವಿರಳ. ತಿಂಡಿ ಪ್ರಿಯರು, ಶಾಪಿಂಗ್ ಪ್ರಿಯರು, ಭಕ್ತರು, ಕಲಾರಾಧಕರು ಎಲ್ಲರಿಗೂ ಮಲ್ಲೇಶ್ವರಂ ಎಂಬ ಸ್ಥಳದ ಜೊತೆ ಅದೇನೋ ಒಂದು ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಹೀಗೆ ಮಲ್ಲೇಶ್ವರಂ ಎಂಟನೇ ಕ್ರಾಸ್ ನಲ್ಲಿ...
ಅಮ್ಮನ ತೋಳ ಬಿಸಿಯಪ್ಪುಗೆಯಲಿ ಬೆಚ್ಚಗಿಹನೀ ಕಂದ, ಪದಪುಂಜಗಳಾಡಂಬರದಲೂ ಬರೆಯಲಾಗದೀ ಬಂಧ. ಹೊತ್ತು ಹೆತ್ತವಳವಳು ಕೆಳಗಿಳಸಲಿಚ್ಚಿಸಳು ಮಗುವ. ಕೂಸ ಲಾಲನೆ ಪಾಲನೆಯಲೇ ಕಾಣುವಳೆಲ್ಲಾ ಸುಖವ. ಎದೆಗಪ್ಪಿ ಸುಖಿಸುವ ಮುಗ್ದ ಮಗುವಿನ ಅವ್ಯಕ್ತ ಮಾತುಗಳ ಮಧುರ ಆಲಿಕೆ ಅಲ್ಲಿ. ಅಮ್ಮನಾದ ಸವಿ ಗಳಿಗೆ ಮತ್ತೆ ಮತ್ತೆ ಹರ್ಷ ಉಕ್ಕಿಸೊ ಮೊಗವದವಳ...
ನೀ ಮೂಗ ಬಸವಣ್ಣ ನಾ ಸಜೀವ ಹಸುವಣ್ಣ ನಿನಗೊ ನಿತ್ಯ ದಸರಾ ವೈಭವ ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! || ನೋಡು ಕುತ್ತಿಗೆಗೆ ಹಾರ ಮಿರಮಿರ ಮಿಂಚುವ ಸಾರ ಕಪ್ಪಿದ್ದರು ನೆತ್ತಿಗೆ ಹೂವು ದವನ ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? || ನಿನಗೊ...
ಪ್ರಯಾಣಕ್ಕೆ ಪೂರ್ವ ತಯಾರಿ ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ ಪ್ರವಾಸ ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ, ವೈಷ್ಣೋದೇವಿ ಯಾತ್ರೆಯ ಬಗ್ಗೆ ಕೇಳಿ ಸಂತಸವಾಯಿತು. ಸಾಮಾನ್ಯವಾಗಿ ಪ್ರಯಾಣವನ್ನು ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ...
ಒಂದು ವೇಳೆ ಲಿಯೊನಾರ್ಡೋ ಡ ವಿನ್ಚಿಯವರು ತಮ್ಮ ‘ಮೊನಾಲಿಸ’ ಕಲಾಕೃತಿಯ ಕೆಳಗೆ ಕ್ಯಾನ್ವಾಸ್ ನಲ್ಲಿ, “ಈ ಮಹಿಳೆ ತನ್ನ ಪ್ರಿಯಕರನಿಂದ ಏನನ್ನೋ ಮುಚ್ಚಿಡಲು ಮುಗುಳ್ನಗುತ್ತಿದ್ದಾಳೆ” ಎಂದು ಬರೆದಿದ್ದರೆ, ಪ್ರಾಯಶಃ ಈ ನಿಗೂಢ ನಗೆಯ ಕುರಿತು ನೋಡುಗನ ಕಲ್ಪನೆಗಳು ಒಂದು ಕಡೆಯಲ್ಲಿ ಬಂಧಿತವಾಗುತ್ತಿತ್ತು. ಇದು ಒಬ್ಬ ವಿಮರ್ಶಕನ...
ಹತ್ತಾರು ವರ್ಷಗಳು ಮಹಾನಗರಿಗಳಲ್ಲಿಯೇ ಪ್ರಾಯೋಗಿಕ ಹಾಗೂ ಎತ್ತಂಗಡಿ ಯೋಜನೆಗಳಡಿಯಲ್ಲಿ(!) ವಲಸೆ ಹಕ್ಕಿಯಂತೆ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ಬಡಪಾಯಿಗೆ ದಾರಿ ತಪ್ಪಿದ ಊರಿನಲ್ಲಿ ಸಿಕ್ಕ ಅರ್ಧರಾತ್ರಿಯ ಕಡೇ ಬಸ್ಸಿನಂತೆ ಮೂವತ್ನಾಲ್ಕನೇ ಹರೆಯದಲ್ಲಿ ಸರ್ಕಾರೀ ನೌಕರಿ ಸಿಕ್ಕಿಬಿಟ್ಟಿತು. ಆನಂದಕ್ಕೆ ಪಾರವಿಲ್ಲದ ಹುಚ್ಚುಖೋಡಿ ಮನಸು ನಲಿದಾಡಿಹೋಗಿತ್ತು. ಕಂಪ್ಯೂಟರಿನಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದ ಬಗೆಬಗೆಯ...
ನಿಮ್ಮ ಅನಿಸಿಕೆಗಳು…