ಪುಸ್ತಕನೋಟ : ಅಣಿ ಅರದಲ-ಸಿರಿ ಸಿಂಗಾರ
ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ , ಗೋವಿಂದ ಪೈ ಸಂಶೋಧನಾ ಕೇಂದ್ರ – ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರಘಟಕ, ಜಂಟಿಯಾಗಿ ಆಯೋಜಿಸಿದ್ದ ಭೂತಾರಾಧನೆಯ ಕೋಲ ,ನೇಮ ಮುಂತಾದ ಸಂದರ್ಭಗಳಲ್ಲಿ ವೈಭವದ ಸಂಕೇತವಾಗಿ ಬಳಸುವ ” ಅಣಿ “ಗಳ ನಿರ್ಮಾಣ ಮತ್ತು ಬಣ್ಣಗಾರಿಕೆಯ ಕುರಿತು ಮೂರು ದಿನ ನಡೆದ ಅಧ್ಯಯನ ಕಮ್ಮಟದ ಹುಟ್ಟುವಳಿಯನ್ನು ಪ್ರಧಾನವಾಗಿ ಇರಿಸಿಕೊಂಡು ಪ್ರಕಟವಾಗಿದೆ .
ಸುಮಾರು ಐವತ್ತು ಮಂದಿ ಕಲಾವಿದರು(ಪಂಬದರು ಮತ್ತು ಪಾಣರು), ವಿಷಯ ತಜ್ಞರು , ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೈ.ಎನ್. ಶೆಟ್ಟಿ , ಡಾ.ಅಶೋಕ ಆಳ್ವ , ಕೆ.ಎಲ್ ಕುಂಡಂತಾಯ ಅವರು ಕಲಾವಿದರ ತಂಡವನ್ನು ನಿರ್ಧರಿಸಿ ಕಮ್ಮಟವನ್ನು ನೇರ್ಪುಗೊಳಿಸಿದ್ದರು . ಎಂ .ಜಿ .ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು , ಲಚ್ಚೇಂದ್ರ ದಾಖಲೀಕರಣದ ಜವಾಬ್ದಾರಿವಹಿಸಿದ್ದರು .ಯಜ್ಞ , ಆಸ್ಟ್ರೋಮೋಹನ್ , ಹರ್ಷ ಅವರ ಫೋಟೋಗಳು ಗ್ರಂಥದಲ್ಲಿದೆ.
ಪ್ರಧಾನ ಸಂಪಾದಕನಾಗಿ ಮತ್ತು ಪ್ರಕಾಶಕರಾದ ಸಾಹಿತ್ಯ ಬಳಗದ ಪರವಾಗಿ ಎಚ್. ಬಿ.ಎಲ್ .ರಾವ್ ಅವರು ಪ್ರಾರಂಭದಲ್ಲಿ ”ಅಣಿ ಅರದಲ – ಸಿರಿ ಸಿಂಗಾರ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಮ್ಮಟವನ್ನು ಸಂಘಟಿಸಿದ್ದ ಹೆರಿಂಜೆ ಕೃಷ್ಣ ಭಟ್ಟ ಅವರು ‘ ಅಣಿ ಅರದಲ – ಸಿರಿ ಸಿಂಗಾರ : ಮೈದಾಳಿದ ವೈಭವ ‘ ಎಂದು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ.
ಈ ಅಧ್ಯಯನ ಕಮ್ಮಟವನ್ನು ಹಿರಿಯ ವಿದ್ವಾಂಸ ಏರ್ಯ ಲಕ್ಷೀನಾರಾಯಣ ಆಳ್ವ ಉದ್ಘಾಟಿಸಿದ್ದರು . ಡಾ.ಯು . ಪಿ.ಉಪಾಧ್ಯಾಯ ಉಪಸ್ಥಿತರಿದ್ದರು , ಡಾ . ವಿವೇಕ ರೈ ಅವರು ಸಮಾರೋಪ ಭಾಷಣ ಮಾಡಿದ್ದು ಮೂವರ ಭಾಷಣಗಳನ್ನೂ ಗ್ರಂಥದಲ್ಲಿ ದಾಖಲಿಸಿಕೊಳ್ಳಲಾಗಿದೆ .ಅಣಿ , ಅರದಲ , ಪದ್ದೆಯಿ ,ಸಿರಿಸಿಂಗಾರ , ಕಟಿಬಯಿರೂಪಗಳು ಈ ಐದು ವಿಭಾಗಗಳ 400 ಪುಟಗಳ ಈ ಗ್ರಂಥದಲ್ಲಿ 200ಪುಟಗಳಷ್ಟು ಬಣ್ಣದ ಪೋಟೊಗಳಿವೆ . ಅಣಿ ನಿರ್ಮಾಣದ ವಿವಿಧ ಹಂತಗಳು , ಬಣ್ಣಗಾರಿಕೆ , ಪ್ರಾಚೀನ – ಅರ್ವಾಚೀನ ಆಭರಣಗಳ ಚಿತ್ರಗಳು , ಕಮ್ಮಟದಲ್ಲಿ ಸಿದ್ಧಗೊಂಡ ವೇಷಗಳು ಹಾಗೂ ಕೊಡಿಯಡಿಯ ನೈಜ ವೇಷಗಳು ಎಂಬ ಐದು ವಿಭಾಗಗಳಲ್ಲಿ ಪೋಟೋಗಳಿವೆ .
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ , ಏರ್ಯ ಲಕ್ಷೀನಾರಾಯಣ ಆಳ್ವ , ಡಾ.ಯು .ಪಿ .ಉಪಾಧ್ಯಾಯ , ಪ್ರೊ ಅಮೃತ ಸೋಮೇಶ್ವರ , ಡಾ ಅಶೋಕ ಆಳ್ವ , ಡಾ. ಜನಾರ್ದನ ಭಟ್( ಫೋಟೋಗಳಿಗೆ ಇಂಗ್ಲೀಷಿನಲ್ಲಿ ಅಡಿಬರಹ ಬರೆದಿದ್ದಾರೆ), ಡಾ.ವೈ ಎನ್. ಶೆಟ್ಟಿ , ಡಾ. ವೆಂಕಟರಾಜ ಪುಣಿಂಚತ್ತಾಯ , ಕುಮಾರ ಸ್ವಾಮಿ, ಡಾ.ಸುಶೀಲಾ ಉಪಾಧ್ಯಾಯ , ಬಾಬು ಶಿವ ಪೂಜಾರಿ , ಡಾ ,ಲಕ್ಷ್ಮೀ ಜಿ ಪ್ರಸಾದ್ ( ಆರು ಲೇಖನಗಳು ಮತ್ತು 1435 ಬೂತಗಳ ಪಟ್ಟಿ ಗ್ರಂಥಕ್ಕಾಗಿ ಒದಗಿಸಿದ್ದಾರೆ).
ವೇ.ಮೂ .ಕಮಲಾದೇವಿ ಪ್ರಸಾದ ಆಸ್ರಣ್ಣ , ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟ , ವಿದ್ವಾನ್ ಕುಮಾರ ಗುರು ತಂತ್ರಿ , ವೇ.ಮೂ . ಕೇಂಜ ಶ್ರೀಧರ ತಂತ್ರಿ ಅವರ ಲೇಖನಗಳಿವೆ . ಈ ವೈದಿಕ ವಿದ್ವಾಂಸರ ಲೇಖನಗಳನ್ನು ಬೂತಾರಾಧನಾ ವಿಭಾಗವನ್ನು ವೈದಿಕರು ಸ್ವೀಕರಿಸಿದ ವಿಧಾನವನ್ನು ಗ್ರಹಿಸಲು ಆಸಕ್ತರ ಕುತೂಹಲಕ್ಕಾಗಿ ಸೇರಿಸಿಕೊಳ್ಳಲಾಗಿದೆ .
ಕೆ.ಎಲ್.ಕುಂಡಂತಾಯ ಅವರು ಗ್ರಂಥದ ಸಂಪಾದಕನಾಗಿ ಗ್ರಂಥದ ಪ್ರಸ್ತಾವನೆ : ‘ನಡುವಣ ಲೋಕದ ನಡೆಯಲ್ಲಿ’ , ಹದಿಮೂರು ಕಲಾವಿದರ ಸಂದರ್ಶನ , ಮೂರು ಲೇಖನಗಳು ಹಾಗೂ ಪಾರಿಭಾಷಿಕ ಪದಗಳ ಸಂಗ್ರಹ ಮತ್ತು ಕಟಿಬಯಿರೂಪ ವಿಭಾಗಕ್ಕೆ ಉಭಯ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚಿನ ಅಗತ್ಯ ಫೋಟೋಗಳ ಸಂಗ್ರಹ . ಇಡೀ ಗ್ರಂಥದ ಸಂಯೋಜನೆಯ ಕಾರ್ಯ ನಿರ್ವಹಿಸಿದ್ದಾರೆ .
ಡಾ.ಲಕ್ಷ್ಮೀ ಜಿ ಪ್ರಸಾದ ಬರೆದಿರುವ ಬ್ರಾಹ್ಮಣ ಭೂತಗಳು , ಮುಸ್ಲಿಂ ಭೂತಗಳು,ಕುಲೆ ಭೂತಗಳು , ಕನ್ನಡ ಭೂತಗಳು ಹನುಮಂತ ಕೋಲ , ಸರ್ಪಕೋಲ ಎಂಬ ಆರು ಲೇಖನಗಳು ಹಾಗೂ ಇತರ ವಿದ್ವಾಂಸರ ಅಪೂರ್ವ ಲೇಖನಗಳಿವೆ . 200ಕ್ಕೂ ಹೆಚ್ಚು ಪಾರಿಭಾಷಿಕ ಶಬ್ದಗಳ ದಾಖಲಾತಿ ಇದೆ .
ದಯವಿಟ್ಟು ಪುಸ್ತಕ ಕೊಳ್ಳುವ ಬಗೆ ತಿಳಿಸಿ. ಅಂತರ್ಜಾಲದಲ್ಲಿ ಹುಡುಕಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ. ನನ್ನ ದೂ:ಸಂಖ್ಯೆ 9900583074 , malgudishiva@gmail. com