ಭೋರ್ಗರೆವ ಕಡಲತಡಿಯು
ಬಿಳಿಹಾಲ ನೊರೆ ಅಲೆಯು!
ರವಿಕಿರಣದಲಿ ತೊಯ್ದು
ಸಮುದ್ರರಾಜಗೆ ವಸನ ತಾನೆ ನೇಯ್ದು!
ಶಕ್ತಿಯುತ ತೆರೆಗಳ ಹೊಡೆತ
ಕಠಿಣ ಕರಿಬಂಡೆ ಸಹಿಸಲದು ಸತತ!
ಜೀವನದೆ ಕಷ್ಟಗಳ ಅಲೆಯ ಬಡಿತ
ತಡೆವ ಶಕ್ತಿಯ ನೀಡು ದೇವ ಅನವರತ!
.
– ಶಂಕರಿ ಶರ್ಮಾ, ಪುತ್ತೂರು
ಭೋರ್ಗರೆವ ಕಡಲತಡಿಯು
ಬಿಳಿಹಾಲ ನೊರೆ ಅಲೆಯು!
ರವಿಕಿರಣದಲಿ ತೊಯ್ದು
ಸಮುದ್ರರಾಜಗೆ ವಸನ ತಾನೆ ನೇಯ್ದು!
ಶಕ್ತಿಯುತ ತೆರೆಗಳ ಹೊಡೆತ
ಕಠಿಣ ಕರಿಬಂಡೆ ಸಹಿಸಲದು ಸತತ!
ಜೀವನದೆ ಕಷ್ಟಗಳ ಅಲೆಯ ಬಡಿತ
ತಡೆವ ಶಕ್ತಿಯ ನೀಡು ದೇವ ಅನವರತ!
.
– ಶಂಕರಿ ಶರ್ಮಾ, ಪುತ್ತೂರು
ಅರ್ಥಪೂರ್ಣ
ಆಹಾ! ಎಂಥಾ ಸೊಗಸಾದ ಕಲ್ಪನೆ! ಎರಡು ವಿಭಿನ್ನ ಭಾವಗಳನ್ನು ಸ್ಫುರಿಸುವ ಚುಟುಕು ಗುಟುಕುಗಳು ಮನಕ್ಕೆ ಮುದನೀಡಿತು.
ನನ್ನ ಪುಟ್ಟ ಚುಟುಕನ್ನು ಮೆಚ್ಚಿದ ಸಹೃದಯೀ ಸೋದರಿಯರಿಗೆ ಕೃತಜ್ಞತೆಗಳು
ಇನ್ನಷ್ಟು ಕವನಗಳ ನಿರೀಕ್ಷಿಸೋಣವೇ…?