ಸಂಜೆಯೊಡನೆ ಪ್ರೇಮವೇಕೆ ?
ಮನದೊಳ ಮನ ಕೇಳುತ್ತಿದೆಯೆನ್ನ
ಸಾಯಂ ಸಂಧ್ಯೆಯೊಡನೆ ಪ್ರೇಮವೇಕೆ
ತಂಗಾಳಿ ಛೇಡಿಸಿ ಪೀಡಿಸುತ್ತಿದೆಯೆನ್ನ
ಮುಸ್ಸಂಜೆ ವೇಳೆಯಲಿ ಉಲ್ಲಾಸವೇಕೆ
ಮೇಘಗಳ ಮರೆಯಿಂದ ಮೇಘವೊಂದಿಣುಕಿ
ಸರಸ ಸಂದೇಶಗಳ ರವಾನಿಸುತ್ತಿದೆಯಲ್ಲಾ
ಪ್ರತಿಕ್ಷಣ ಪ್ರತಿದಿನ ಮುದ ಪಡೆಯೆಂದು
ಪ್ರೇಮಾಭಿಷೇಕ ಎರೆಯುತ್ತಿದೆಯಲ್ಲಾ
ಮನದೊಳಗೆ ನದಿಯೊಂದು ಹರಿಯುತಾ ಕೇಳುತ್ತಿವೆ
ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ
ಮನೆಯೊಳಗೆ ದೀಪಗಳು ಉರಿಯುತಾ ಹೇಳುತ್ತಿದೆ
ಪ್ರತಿ ಸಂಜೆಯಲ್ಲೂ ಆನಂದವೇಕೆ
ಕಾಲವೆ ನೀ ಎಷ್ಟು ಸರಿದರೂ ದೂರ
ಸಂಜೆ ಮಾತ್ರ ಎನಗೆ ಸುಂದರದಿ ಬಾರ
ಸಂಧ್ಯಾನುರಾಗಗಳು ಸ್ವಂತವಲ್ಲದಿದ್ದರೂ
ಮುಸ್ಸಂಜೆ ಕಲ್ಪನೆಗಳೆನ್ನದು ಮಾತ್ರ.
– ಸುನೀತಾ, ಕುಶಾಲನಗರ
ಮಧುರ ಭಾವಗಳ ಪದಗಳಲ್ಲಿಟ್ಟ ಇದು ಆಶಾ ಕವಿತೆ. ಎಲ್ಲ ಚಂದದ ಸಾಲುಗಳು.