Category: ಲಹರಿ

5

ಪ್ರವಾಸದಲ್ಲಿ ನಡೆದ ಅವಾಂತರ

Share Button

ನಾವು ನ್ಯೂಯಾರ್ಕ್‌ನಿಂದ ವಾಷಿಂಗ್‌ಟನ್‌ಗೆ ಸ್ಥಳೀಯ ಪ್ರವಾಸೀ ಸಂಸ್ಥೆಯೊಂದರ ಬಸ್‌ನಲ್ಲಿ ಎರಡು ದಿನದ ಟೂರ್ ಹೊರಟೆವು. ಜಗತ್ತಿನ ಅತ್ಯಂತ ಪ್ರಭಲ ರಾಷ್ಟ್ರವೆಂದು ಹೆಸರು ಪಡೆದಿರುವ ಅಮೆರಿಕದ ರಾಜಧಾನಿಯನ್ನು ನೋಡುವ ಕುತೂಹಲ ನಮ್ಮಲ್ಲಿ. ದಾರಿಯಲ್ಲಿ ಒಂದೆರಡು ಪ್ರವಾಸಿ ತಾಣಗಳನ್ನು ತೋರಿಸಿದರು. ಅದರಲ್ಲೊಂದು ಜರ್ಮನ್ನರ ಕಾಲೊನಿಯಾಗಿತ್ತು. ಈ ಗ್ರಾಮದ ವಿಶೇಷತೆ ಏನೆಂದರೆ...

12

ನನ್ನ ಹೆಸರು ಏನು?

Share Button

ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು ಗುಲಾಬಿ, ಹಳದಿ ಚಂಡು ಹೂವುಗಳು, ಬಿಳಿಯ ಸೇವಂತಿಗೆ, ಕೇಸರಿ ಬಣ್ಣದ ಕಾಸ್ಮಾಸ್ ಈ ರೀತಿ ಅನೇಕ ಹೂವುಗಳಿದ್ದವು. ಅಲ್ಲಿ ಬಣ್ಣದ ಚಿಟ್ಟೆಗಳೂ, ದುಂಬಿಗಳೂ ಮತ್ತು ಜೇನುಗಳೂ...

6

ಮಾರ್ಜಾಲ – ಒಂದು ಸ್ವಗತ

Share Button

ನನ್ನ ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ಒಂದು ಬೆಕ್ಕು ಅಡ್ಡಬಂತು. ನಾನು ನನ್ನ ಹಿರಿಯರ ಸಂಪ್ರದಾಯದಂತೆ ಹಿಂತಿರುಗಿ ಐದಾರು ಹೆಜ್ಜೆ ಇಟ್ಟು ಮತ್ತೆ ತಿರುಗಿ ನನ್ನ ನಡಿಗೆ ಪ್ರಾರಂಭಿಸಿದೆ. ಬೆಕ್ಕು ನನ್ನನ್ನು ತಿರಸ್ಕಾರದಿಂದ ನೋಡಿ ರಸ್ತೆ ದಾಟಿತು. ಅದರ ಮನಸ್ಸಿನಲ್ಲಾದ ಹಲವು ಆಕ್ರೋಶ, ಜಿಗುಪ್ಸೆ ಹಾಗೂ ಇತರ ಭಾವನೆಗಳನ್ನು...

12

ನಿತ್ಯ ನಡೆಯುವ ವಿಚಿತ್ರಗಳು

Share Button

ಮಾನವನ ಜೀವನದಲ್ಲಿ ಪ್ರತಿನಿತ್ಯ ಹಲವಾರು ಘಟನೆಗಳು ತಿಳಿದೋ ತಿಳಿಯದೆಯೋ ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳಿಗೆ ಅವನೇ ಕಾರಣನಾಗಬಹುದು ಅಥವಾ ಪರಿಸ್ಥಿತಿ, ಪರಿಸರ, ಜತೆಗಾರ, ಕಾಲ ಇತ್ಯಾದಿಗಳು ಪ್ರಭಾವ ಬೀಳಬಹುದು. ಈ ಘಟನೆಗಳ ಸರಣಿ ಎಣಿಕೆಗೆ ಬಾರದಷ್ಟು ಪದೇ ಪದೇ ಸಂಭವಿಸುತ್ತಿರುತ್ತವೆ. ಇದನ್ನೇ ಕೆಲವು ಪರಿಣಿತರು ಅದರ ಬಗ್ಗೆ...

8

ಕೇಶ-ಕ್ಲೇಶ

Share Button

ನನ್ನ ಕೇಶ-ಕ್ಲೇಶ ಪ್ರಾರಂಭವಾಗಿದ್ದು ನಾನು 6 ನೇ ವಯಸ್ಸಿನಲ್ಲಿದ್ದಾಗ. ನಾವಾಗ ಕೊಡಗಿನ ಸಣ್ಣ ಊರಲ್ಲಿ ವಾಸವಿದ್ದೆವು. ನಮ್ಮ ತಂದೆ 2 ತಿಂಗಳಿಗೊಮ್ಮೆ ನನ್ನ ಸಹೋದರರನ್ನು ಕೂಡಿಸಿ ಕೇಶ ಮುಂಡನಕ್ಕೆ ಕರೆದೊಯ್ಯುತ್ತಿದ್ದರು. ನಮಗಾವ ಸ್ವಾತಂತ್ರ್ಯವೂ ಇರಲಿಲ್ಲ. ನಾಪಿತನಿಗೆ ಸ್ಪಷ್ಟವಾಗಿ ಕೇವಲ ಅರ್ಧ ಇಂಚು ಬಿಟ್ಟು ಪೂರ ಕೇಶ ಮರ್ದನಕ್ಕೆ...

5

ವೃತ್ತಿ ಬದುಕಿನ ಹಾಸ್ಯ ರಸಾಯನ!!

Share Button

ನಾನು ಕದ್ರಾ ಯೋಜನಾ ಪ್ರದೇಶದಲ್ಲಿ ಸುಮಾರು ಎಂಟು ವರ್ಷಗಳಷ್ಟು ದೀರ್ಘ ಕಾಲ ಇದ್ದೆ. ನನ್ನ ವೃತ್ತಿಜೀವನದ ಕೆಲವು ನಗೆ ಪ್ರಸಂಗಗಳ ಕಡೆಗೆ ಗಮನ ಹರಿಸೋಣ. ನಮ್ಮಲ್ಲಿ ಟಿಪ್ಪರ್ ಓಡಿಸುವ ಒಬ್ಬ ಚಾಲಕನಿದ್ದ. ಮಹಾರಾಷ್ಟ್ರದ ಜತ್ ಊರಿನವನು. ಅಲ್ಲಿ ಹೆಚ್ಚಾಗಿ ಕನ್ನಡ ಮಾತನಾಡುವವರಿದ್ದಾರಂತೆ. ಅವನಿಗೂ ಕನ್ನಡ ಚೆನ್ನಾಗಿ ಬರುತ್ತಿತ್ತು...

29

ಮಾಸ್ಕಿನ ಹಿಂದೆ!……

Share Button

ಈ ಕೊರೋನಾ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಚಾಚಿ, ಇಡಿಯ ವಿಶ್ವವನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಕಸಿದ ಈ ಮಹಾಮಾರಿಯ ಆಟೋಪವೇನು ಕಡಿಮೆಯೇ? ಬರೆದಷ್ಟೂ ಮುಗಿಯದು! ಕಣ್ಣಿಗೆ ಕಾಣಿಸದ ವೈರಸ್ ತನ್ನ ಲೀಲಾಸಾಮ್ರಾಜ್ಯ ವಿಸ್ತರಿಸಿದ್ದಕ್ಕೆ ಸಾಕ್ಷೀಭೂತರಾಗಿ...

8

ಅಂಗುಷ್ಠದ ಸುತ್ತ

Share Button

ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ ಅನ್ವಯ. ನಾವು ಕೈಯ ಹೆಬ್ಬೆರಳಿಗೆ ತಳುಕು ಹಾಕುವುದಾದರೂ ಕಾಲಿನ ಹೆಬ್ಬೆರಳಿಗೂ ಹೆಚ್ಚಿನ ಪ್ರಾಶಸ್ತ್ಯವಿರುವುದು ಕಾಣಬರುತ್ತದೆ. ರಾಮಾಯಣ ಹಾಗೂ ಮಹಾಭಾರತ ಕೆಲವು ಪ್ರಸಂಗಗಳಿಂದ ಈ ಲೇಖನ ಪ್ರಾರಂಭಿಸುವುದು ಸೂಕ್ತ ಎನಿಸುತ್ತದೆ. ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕಾಗಿ ಕೃಷ್ಣ ಕೌರವರನ್ನ...

10

ವಂಶನಾಮದ ಸ್ವಾರಸ್ಯಗಳು

Share Button

ನಿಮ್ಮ ವಂಶನಾಮ ಅಂದರೆ ಅಡ್ಡಹೆಸರು ಏನು? ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಉತ್ತರ ಕರ್ಣಾಟಕದ ಮಿತ್ರರೊಬ್ಬರು ನನ್ನನ್ನು ಒಮ್ಮೆ ಕೇಳಿದರು.. “ಹಾಗೆ ಯಾವುದೂ ಇಲ್ಲ ನಮಗೆ ಬರೀ ಆದ್ಯಕ್ಷರ (ಇನಿಷಿಯಲ್) ಅಷ್ಟೆ.”ಎಂದೆ.  “ಬಹಳ ವಿಚಿತ್ರ”ಎಂದರು ಅವರು.  “ವಿಚಿತ್ರವೇನು ಬಂತು.ಅದು ನಮ್ಮ ಕಡೆಯ ಪದ್ಧತಿ ಅಷ್ಟೆ” ಎಂದೆ ಸ್ವಲ್ಪ  ಕಟುವಾಗಿ..  ನನ್ನ...

14

ನನ್ನಾಕೆಯ ಸುತ್ತ

Share Button

ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ ಮಯ್ಯಾ ಕಾಫಿಯನ್ನೂ ತುಸು ಹಿಂದೆ ಹಾಕಿದಂತಿತ್ತು. ಹಾಗೇ ಮಂಪರು ಬಂದು ವಿವಿಧ ಯೋಚನಾ ಲಹರಿಗಳು ಬಿಚ್ಚಿಟ್ಟವು. ನನ್ನವಳ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ...

Follow

Get every new post on this blog delivered to your Inbox.

Join other followers: