ಈಗಾಗಲೇ………..
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ. ಎಲ್ಲವನೂ ಅನುಭವಿಸಲಾಗಿದೆಭವಮುಕ್ತವಾಗಿ ಧರಿಸಬೇಕಷ್ಟೇ;ಸಾವು ಸಮೀಪದಲೇ ಇರುತದೆ. ಎಲ್ಲವನೂ ಮಾತಾಡಲಾಗಿದೆಕಿವಿಗೊಟ್ಟು ಕೇಳಬೇಕಷ್ಟೇ;ಅಹಮಿನ ಸರ್ಪ ಸಾಯಬೇಕಿದೆ. ಅದೇ ಪಂಚಭೂತ; ಅದೇ ದೇವದೂತಹೊಸದೇನೇನೂ ಇಲ್ಲ ಜಗದಲಿ;ಮನಸು ಮಧುರವಾಗಬೇಕಿದೆ. ಹಳೆಯದು ಹಳಸಲಾಗದಂತೆಜತನವಾಗಿ...
ನಿಮ್ಮ ಅನಿಸಿಕೆಗಳು…