ಕಾವ್ಯ ಭಾಗವತ 18 : ದೈವಕಾರ್ಯ
18. ದೈವಕಾರ್ಯ
ಚತುರ್ಥ ಸ್ಕಂದ – ಅಧ್ಯಾಯ – ೦೧
ಈ ಜಗದ ಸೃಷ್ಟಿ, ಲಯ, ಲಕ್ಷಣಗಳೆಲ್ಲದರ
ಹೊಣೆಹೊತ್ತ
ದೈವ ಶ್ರೀವಿಷ್ಣು
ಸೃಷ್ಟಿಗೆ ಬ್ರಹ್ಮನನ್ನು
ಲಯಕ್ಕೆ ಈಶ್ವರನನ್ನು
ನೇಮಿಸಿ,
ಎಲ್ಲದರ ರಕ್ಷಣೆ, ನಿಯಂತ್ರಣವ
ಮಾಡುತ್ತ
ಶಿವ ತನ್ನ ಜಡೆಯಿಂದ
ಸೃಷ್ಟಿಸಿದ ವೀರಭದ್ರನಿಂದ
ದಕ್ಷನ ರುಂಡವ ತುಂಡರಿಸಿ
ಯಜ್ಞಶಾಲೆಯ ಧ್ವಂಸಮಾಡಿ
ಹೆದರೋಡಿಹೋದ
ಋಷಿಪುಂಗವರ
ಜೊತೆಗೂಡಿ ಬಂದ
ದೇವತೆಗಳ ಸಂತೈಸುತ
ಪರಶಿವಗೆ ವೇದ ವಿಧಿಯಂತೆ
ಸಲ್ಲಬೇಕಾದ ಹವಿರ್ಭಾವವ ಸಲ್ಲಿಸದೆ
ಯಾಗ ಮುಂದುವರಿಸಿದ
ನಿಮಗಿದು ತಕ್ಕ ಶಾಸ್ತಿ
ದುಷ್ಟ ದಕ್ಷನ, ಶಿವನಿಂದನೆಯ
ಸಹಿಸಿದಿರಿ, ಹವಿಸ್ಸಿನಾಸೆಯಲಿ
ದಾಕ್ಞಯಣಿಯ ಅಗ್ನಿಪ್ರವೇಶಕ್ಕೆ
ಕಾರಣರಾದಿರಿ
ಈಗ ಶಿವಶರಣಾಗತಿಯೇ ದಾರಿ
ಎಂದ, ಬ್ರಹ್ಮನ ಜೊತೆಗೂಡಿ
ಶಿವನ ಪಾದವೆರಗಿದ
ದೇವತೆಗಳಿಗೆ ಅಭಯಹಸ್ತ
ದಕ್ಷನ ಮುಂಡಕ್ಕೆ
ಅವನ ಶಿರವನ್ನಿಟ್ಟು
ಜೀವದಾನ
ಮತ್ತೆ ಯಜ್ಞ,
ಲೋಕ ಸಂರಕ್ಷಣೆಗೆ
ಮತ್ತೊಂದು ದೈವಕಾರ್ಯ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41308
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಬಹಳ ಸೊಗಸು
ಧಸ್ಯವಾದಗಳು.
ಸರಳ ಸುಂದರ ಭಾಗವತದ ಕಾವ್ಯಬಂಧ..ಧನ್ಯವಾದಗಳು ಸಾರ್
ಧಸ್ಯವಾದಗಳು.
ಮನೋಜ್ಞವಾಗಿ ಮೂಡಿಬರುತ್ತಿರುವ ಕಾವ್ಯ ಭಾಗವತದಲ್ಲಿಯ ಸರಳವಾದ ಕಥಾ ನಿರೂಪಣೆ ಬಹಳ ಚೆನ್ನಾಗಿದೆ…ಧನ್ಯವಾದಗಳು ಸರ್.
ಧನ್ಯವಾದಗಳು.
ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.
ಚತನಾ ಯೋಗ್ಯವಾದ ಭಾಗವತದ ಭಾಗ ಸರಳವಾಗಿ ಮನಕ್ಕೆ ನಾಟುವಂತೆ ಮೂಡಿ ಬಂದಿದೆ.