ಕಾವ್ಯ ಭಾಗವತ : ಕಪಿಲ – 2
15. ತೃತೀಯ ಸ್ಕಂದ
ಅಧ್ಯಾಯ – ೪
ಕಪಿಲ – ೨
ಕರ್ದಮ ಮಹರ್ಷಿ ಸುತನಾಗಿ
ದೇವಹೂತಿಯ ಗರ್ಭದಿ ಜನಿಸಿ
ತಾ ಕೊಟ್ಟ ವಚನವ ಪಾಲಿಸಿ
ಧರೆಗಿಳಿದು ಬಂದ
ಕಪಿಲ ಮೂರ್ತಿ
ಪರಮಾತ್ಮನುಪದೇಶ
ಜನನಿ
ದೇವಹೂತಿಗೆ ಮಾತ್ರವೆ?
ಅಲ್ಲ, ಈ ಜಗದೆಲ್ಲ
ಮೋಕ್ಷಪ್ರಿಯ
ಭಕ್ತರಿಗೆ ದಾರಿದೀಪ
ಜೀವಿಗೆ
ಜನನ ಮರಣದ ಸುಳಿಯಿಂದ
ಮುಕ್ತಿಗೆ ಸಾಧನ ಆತ್ಮಜ್ಞಾನ
ಪ್ರಕೃತಿಗಿಂತ ಬೇರೆಯಾದ
ಆತ್ಮವಿದೆಯೆಂಬರಿವೆ
ಆತ್ಮಜ್ಞಾನ
ತಾನು
ಎಂಬುದು ಅಹಂಕಾರ
ಈ ಅಹಂಕಾರಕ್ಕಿಂಬು ಕೊಡುವ
ಕಾಮ ಕ್ರೋಧ ಮೋಹ ಲೋಭ
ಮದ ಮಾತ್ಸರ್ಯ
ಅವನ ಶತ್ರುಗಳು
ಆ ಶತ್ರುಗಳನೋಡಿಸಲು
ಜ್ಞಾನ ಭಕ್ತಿ ವೈರಾಗ್ಯ್ಳ ಕೂಡಿಸಿ
ಬಲಪಡಿಸಿ
ಜೀವಾತ್ಮನ ನಿಜರೂಪವನರಿಯಲು
ಸಾಧ್ಯ
ಈ ಜೀವಾತ್ಮ ಅಣುಸ್ವರೂಪಿ
ಬೆಂಕಿಯಿಂ ಧಹಿಸಲಾಗದ
ಆಯುಧಗಳಿಂ ವಧಿಸಲಾಗದ
ಸೂಕ್ಷ್ಮಾತಿಸೂಕ್ಷ್ಮ ರೂಪಿಯ
ಅರಿವಿಗೆ
ಭಕ್ತಿಯೋಗವೇ
ಏಕೈಕ ಮಾರ್ಗ
ಮನುಜ ತನ್ನೈದು ಜ್ಞಾನೇಂದ್ರಿಯಗಳ
ಐದು ಕರ್ಮೇಂದ್ರಿಯಗಳ
ಎಲ್ಲ ಕ್ರಿಯೆಗೆ
ಭಾಗವತ ಪ್ರೀತಿಯೊಂದೇ
ಎಂಬರಿವು ಭಕ್ತಿಯೋಗ
ಈ ಭಕ್ತಿಯೋಗವೇ
ಎಲ್ಲ ಜೀವಿಗಳ
ಮುಕ್ತಿಮಾರ್ಗ
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯಭಾಗವತ..ಸರಳ ಸುಂದರವಾಗಿ ಮೂಡಿಬರುತ್ತಿದೆ.. ಧನ್ಯವಾದಗಳು ಸಾರ್
ಭಕ್ತಿಮಾರ್ಗವೇ ಜೀವಿಗಳ ಮುಕ್ತಿ ಮಾರ್ಗವೆಂದು ಬೋಧಿಸುತ್ತಾ, ಅದರಂತೆ ಜೀವಿಸಿದ ಮಹಾಮುನಿ ಕಪಿಲ ಮಹರ್ಷಿಗಳ ಬಗ್ಗೆ ಸರಳ ಸುಂದರ ಕಾವ್ಯ.
ಸೊಗಸಾಗಿದೆ
ಭಕ್ತಯೋಗದ ಸರಳ ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು.