ಕಾವ್ಯ ಭಾಗವತ : ದಾಕ್ಷಾಯಿಣಿ – 01
16.ದಾಕ್ಷಾಯಿಣಿ – 01
ಚತುರ್ಥ ಸ್ಕಂದ – ಅಧ್ಯಾಯ – 01
ಜಗದೀಶ್ವರನೆಂಬ ತತ್ವದಲಿ
ಬ್ರಹ್ಮ ವಿಷ್ಣು ಮಹೇಶ್ವರರೆಂಬ
ತ್ರಿಮೂರ್ತಿಗಳೆಲ್ಲರ
ತತ್ವವಡಗಿದೆ ಎಂಬ
ವಿಷ್ಣುವಿನ
ಭಾವಾರ್ಥ ವಿವರಣೆಗೆ
ಪಾತ್ರ – ಶಿವನ ಪತ್ನಿ ದಾಕ್ಷಾಯಿಣಿ,
ದಕ್ಷ ಪುತ್ರಿ
ಶಿವ ಭಸ್ಮಧಾರೀ ರುದ್ರ
ಕಾಮಕ್ರೋಧವ ಜಯಿಸಿ
ಆತ್ಮಾನಂದವ ಪಡೆದ
ಪರಮೇಶ್ವರ
ಕಿರಿಯ ಅಳಿಯ
ಪರಶಿವನ ಹಿರಿಮೆ ಅರಿಯದೆ
ಮೂರ್ಖನಾಗಿ
ತಾಗೈದ ಯಜ್ಞಯಾಗಾದಿಗಳಲಿ
ಶಿವಾರ್ಪಣೆಯಾಗಲೇ ಬೇಕಾದ
ಹವಿರ್ಭಾವಗಳನು
ನೀಡದೆ, ಅವಮಾನಿಸಿದ
ಮಾವ ದಕ್ಷಬ್ರಹ್ಮನಿಗೆ
ದಯಾಳು ಈಶ್ವರನ ಕ್ಷಮೆ
ಆ ಶಿವನಿಚ್ಛೆಯ ಹಿರಿಮೆ
ನಮ್ಮ ಹೆಣ್ಣು ಮಕ್ಕಳ
ತವರಿನ ಮೋಹಕ್ಕೆ
ದಾಕ್ಷಾಯಿಣಿ
ಆಗಲಿಲ್ಲ ಅಪವಾದ
ಮತ್ತೊಂದು
ಮಹಾಯಜ್ಞವ
ಆಯೋಜಿಸಿದ
ತಂದೆ ದಕ್ಷಬ್ರಹ್ಮನ
ಆಹ್ವಾನವಿಲ್ಲದ
ನಡೆಗೆ ಬೇಸರಿಸಿದರೂ
ಅಪ್ಪನ ಮನೆಗೆ ತೆರಳಲೇಕೆ
ಆಹ್ವಾನ
ಎಂದು ನೆಪಮಾಡಿ
ಶಿವನುಡಿಯ ಧಿಕ್ಕರಿಸಿ
ತವರಿಗೆ, ಯಾಗ ಸಂಭ್ರಮಕೆ
ಹೊರಟ ಚಪಲ ಬುದ್ಧಿಯ
ಸತಿಯ ನಿಗ್ರಹಿಸದೆ
ನಂದಿ, ಭೃಂಗಿ, ಪ್ರಮಧ ಗಣಗಳೊಂದಿಗೆ
ಬೀಳ್ಕೊಟ್ಟ
ನಮ್ಮ ಪರಮಶಿವ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?m=20241031
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಸರಣಿ…ನನಗೆ ಭಾಗವತ ಓದಲು ಪ್ರೇರಣೆ ಯನ್ನುಂಟುಮಾಡುತ್ತಿದೆ ಅದಕ್ಕಾಗಿ ಧನ್ಯವಾದಗಳು ಸಾರ್..
ಸರಳವಾಗಿರುವ ಕಾವ್ಯ ಭಾಗವತ ಓದಲು ಖುಷಿ
ಸರಳವಾದ ಕಾವ್ಯ ಭಾಗವತ ಸರಣಿಯಲ್ಲಿ; ಪುಟ್ಟ ಸಾಲುಗಳಲ್ಲಿ ಕಥಾಚಿತ್ರಣವು ಬಹಳ ಸುಂದರವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.
ಹೆಣ್ಣುಮಕ್ಕಳ ಮನದ ಪ್ರತೀಕವಾಗಿರುವ ದಾಕ್ಷಾಯಣಿಯು ಅನಿಭವಿಸುವ ಬವಣೆಯ ಸರಳ ಚಿತ್ರಣವನ್ನು ಸೊಗಸಾಗಿ ಮಾಡಿಕೊಟ್ಟ ಕಾವ್ಯಭಾಗ ಇದಾಗಿದೆ. ಅಭಿನಂದನೆಗಳು.