ಕತ್ತಲೆ – ಬೆಳಕು (ಹನಿಗಳು)
1
ಕಡುಕಪ್ಪು ಕೋಗಿಲೆ
ಹಾಡಿತು
ಬೆಳಕಾಯಿತು
2
ಬರದ ನೆಲದಗಲ
ಕರಿ ಮುಗಿಲ
ಬೆಳಕ ಮಿಂಚು
ಮುಸಲ ಧಾರೆ
3
ಕತ್ತಲೆ ಬೆಳಕಿಗೊ
ಬೆಳಕು ಕತ್ತಲೆಗೊ
ಯಾರು ಯಾರ
ನೂಕುವ
ಯುಗಾಂತರದಾಟ!
4
ಓದಿದೆ
ಪುಟ್ಟ ಕವಿತೆ
ಒಳಗೆ
ಬೆಳಗಿತು ಹಣತೆ
5
ಕತ್ತಲೆ ಬೆಳಕು
ನಡೆದಿದೆ ಓಟ
ಅದೆ ಸಾಕ್ಷಿ
ನಿಲ್ಲಿಸಿಲ್ಲ ಭೂಮಿ
ಭ್ರಮಣ
ಅದುವೆ ಸಮಾಧಾನ!
6
ದೀಪ ಹಿಡಿದರೆ
ನಿಚ್ಚಳದಚ್ಚರಿ
ಒಳಗೂ ಹಚ್ಚಿರಿ
7
ಹಿಡಿ
ಉಲ್ಲಾಸದ ಸೊಡರು
ಹಚ್ಚು ನಗು
ಹಬ್ಬ ಅದರ ಹೆಸರು
–ಅನಂತ ರಮೇಶ್
ತುಂಬಾ ಅರ್ಥವತ್ತಾಗಿದೆ ಸರ್, ಅಭಿನಂದನೆ ಮತ್ತು ಧನ್ಯವಾದ……….
ಹೊರಗಿನ ಕತ್ತಲಿಗೆ
ಒಳಗಿನ ಬೆಳಕು !
ಪದಪದಗಳ ನಾದ
ರಸದೂಟ ಆಸ್ವಾದ !! ಸೂಪರ್…..
ನನ್ನೊಳಗೆ
ಹಬ್ಬವಾದಿರಿ !!!
ಧನ್ಯವಾದಗಳು
ಪುಟ್ಟ ಪುಟ್ಟ ಪದಗಳು ಅರ್ಥವಿಶಾಲ..ಚೆನ್ನಾಗಿದೆ ಸಾರ್
ಧನ್ಯವಾದಗಳು.
Very very meaningful.Festival colourful
ಒಳಗೂ ಹೊರಗೂ ಹಣತೆ ಹಚ್ಚಿ ಬೆಳಗಬೇಕಾದ ಅಗತ್ಯತೆಯ ಸುಂದರ ಹನಿಗಳು…
ಬಹಳ ಸುಂದರವಾದ ಅರ್ಥಗರ್ಭಿತ ಹನಿಗಳು
ಅರ್ಥಪೂರ್ಣವಾದ, ಮನಕೆ ಮುದ ನೀಡುತ್ತಲೇ ತುಂತುರು ಸಿಂಪಡಿಸುವ ಹನಿಗಳು.