Monthly Archive: December 2018
ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ...
ಅರ್ಥವೇ ಆಗದ ಮಾಯೆ ಇವಳು, ನೋಡಲು ಮೃದುವಾದರೂ ವಜ್ರಕ್ಕಿಂತ ಕಠಿಣ ಮನಸ್ಸಿನವಳು, ಬಂಧಿಸಬಲ್ಲುವೆ ಇವಳ ಮನೆ, ಸಂಸಾರದ ನಾಲ್ಕು ಗೋಡೆಗಳು?, ಕಡು ಕಷ್ಟದಲ್ಲೂ ಸಂತಸದ ಹೊನಲ ಚಿಮ್ಮಿಸುವವಳು ಬವಣೆಯ ಬೆಂಕಿಯಲ್ಲಿ ಬೆಂದು ಬದಲಾವಣೆ ತರುವಾಕೆ, ಸದಾ ತನ್ನವರಿಗಾಗಿಯೇ ಮೀಸಲು ಇವಳಿಡಿ ಬದುಕೇ, ತನ್ನ ನೋವ ಮರೆ ಮಾಚಿ...
ಉಜಿರೆ, ಡಿ.೬: ಅಲ್ಲಿ ದೊಡ್ಡ ದೊಡ್ಡ ಯಂತ್ರಗಳು ಇದ್ದವು. ಎಲ್ಲವೂ ಬಾರಿ ದುಬಾರಿ ವಸ್ತುಗಳೇ ಎಂಬಂತೆ ತೋರುತ್ತಿದ್ದವು. ಅವುಗಳು ಹೊಗೆ ಬಿಡುವ ಯಂತ್ರಗಳಲ್ಲ. ಪರಿಸರ ಸ್ನೇಹಿ ಉಪಕರಣಗಳು. ಇದನ್ನು ಕೊಂಡುಕೊಳ್ಳಬೇಕೆಂಬ ಹಂಬಲ ಎಲ್ಲರಿಗೂ ಇತ್ತು. ಆದರೆ ಅದು ಮಾರಾಟಕ್ಕಿರಲಿಲ್ಲ.ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ವಸ್ತು...
ಉಜಿರೆ, ಡಿ.೩: ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಗಾಂಧಿ ಚಿಂತನೆಯನ್ನು ಚಾಲ್ತಿಯಲ್ಲಿರಿಸುವ ವಿನೂತನ ವಾಣಿಜ್ಯಿಕ ಪ್ರಯೋಗ ನಡೆದಿದೆ. ಅವರ ಸ್ವದೇಶಿ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ಗಮನ ಸೆಳೆದಿದೆ. ಜನರನ್ನು ಆಕರ್ಷಿಸುತ್ತಿರುವ ಖಾದಿ ಬಟ್ಟೆಗಳ ವ್ಯಾಪಾರ ಮಳಿಗೆ ಇದಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಿಕೊಪ್ಪ ಗ್ರಾಮದ...
ಇಂದಿನ ಆಧುನಿಕ ಯುಗದಲ್ಲಿ ದಿನದಿಂದ ದಿನಕ್ಕೆ ತಂತಜ್ಞಾನ ಬದಲಾಗುತ್ತಿದೆ. ತಂತ್ರಜ್ಞಾನದ ಜೊತೆಗೆ ಜನರ ಜೀವನ ಶೈಲಿ, ವೇಷ-ಭೂಷಣ, ಉಡುಗೆ-ತೊಡುಗೆ ಅಷ್ಟೇ ಏಕೆ ಅಡುಗೆ ಮಾಡುವ ಪಾತ್ರೆಗಳು ಬದಲಾಗುತ್ತಿವೆ. ಆದರೆ ಇಂದಿಗೂ ತನ್ನ ಪಾರಂಪರಿಕ ವೈಭವವನ್ನು ಹಾಗೆಯ ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ವಸ್ತುಗಳಲ್ಲಿ ಬಳಪದ ಕಲ್ಲಿನ ಪಾತ್ರೆಗಳು...
ಉಜಿರೆ.ಡಿ.೬: ಪ್ಲಾಸ್ಟಿಕ್‌ನ ಬಣ್ಣ ಬಣ್ಣದ ತೋರಣಗಳ ನಡುವೆ ದೇಶಿ ಉತ್ಪನ್ನಗಳು ಕೂಡ ರಾರಾಜಿಸುತ್ತಿವೆ. ಪ್ಲಾಸ್ಟಿಕ್‌ನ್ನು ಕೊಂಚ ಮಟ್ಟಿಗೆ ದೂರ ಸರಿಸಿ ನೈಸರ್ಗಿಕವಾದ ವಸ್ತುಗಳು ಅವುಗಳ ಸ್ಥಾನವನ್ನು ಪಡೆದುಕೊಳ್ಳುತ್ತಿವೆ. ಅದರಲ್ಲಿ ಮಾವಿನ ಎಲೆ, ಹೂವಿನ ತೋರಣವನ್ನು ಕೂಡ ಮನೆ ಬಾಗಿಲಿಗೆ ಹಾಕಿ ಆಲಂಕಾರಿಸುತ್ತಾರೆ. ಆದರೆ ಇಲ್ಲಿ ಭತ್ತದ ತೋರಣ...
ಇತ್ತೀಚೆಗೆ ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ ಓದಿದ ಬರಹವೊಂದರ ಮೊದಲ ವಾಕ್ಯ ‘ನಮ್ಮ ಅತ್ತೆಗೆ ಇತ್ತೀಚೆಗೆ ತೀರಾ ಮರೆವು, ಬಾಗಿಲು ತೆಗೆದು ರಸ್ತೆಗೆ ಹೋಗುತ್ತಾರೆ, ವಾಪಸ್ಸು ಮನೆಗೆ ಬರಲು ದಾರಿಯೇ ಗೊತ್ತಾಗೊಲ್ಲ’ ನನ್ನ ಮನಕಲಕಿತು. ಏನಿದು ? ವಯೋಸಹಜವಾಗಿ ಅರಳು ಮರಳು ರೂಪದಲ್ಲಿ ಬರುವ ಮರೆವಿನ ಸಮಸ್ಯೆ ಇದ್ದವರೆಲ್ಲಾ ಹೀಗೆ ಮನೆಯಿಂದ ಹೊರಗೆ...
ಊರಿದ ಊರಿಂದ ಮೋಟರು ಹಿಡಿದು ಉದ್ದಕ್ಕೂ ಹರಿದ ಹಿರಿದಾರಿ ಮುಗಿಸಿ ನಡಿಗೆಯಲಿ ಕಿರು ಹಾದಿಯಲಿ ಸರಸರ ಅಂಕುಡೊಂಕ ಕೆಲ ದೂರ ಸವೆಸಿ ಉಸ್ಸೆಂದು ನಿರಾಳ ನಿಂತಲ್ಲಿ ಕಾಲು ಕಾಣುವುದು ಆ ಹಳೆಯ ಹಳ್ಳಿ ಸೂರು! ದಾರಿಯುದ್ದಕೂ ಅಲ್ಲಿ ಇದ್ದೀತೊ ಇಲ್ಲವೋ ಭಾರೀ ಗುಡ್ಡ ಸಣ್ಣ ದರಿ...
ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳು ಹೆಚ್ಚು ಮಾರಾಟವಾಗುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ಕೊಂಚಮಟ್ಟಿಗೆ ತಗ್ಗಿಸಿ ಪ್ರಕೃತಿದತ್ತ ವಸ್ತುಗಳ ಉಪಯೋಗ ಆರೋಗ್ಯ ವರ್ಧಕ ಎಂಬ ಚಿಂತನೆಯಲ್ಲಿ ಜನರು ಬಿದಿರು ಮತ್ತು ಬೆತ್ತದ ಪರಿಕರಗಳ ಮೊರೆ ಹೋಗುತ್ತಿರುವುದಕ್ಕೆ ಇಲ್ಲಿನ ಮಳಿಗೆ ಸಾಕ್ಷಿಯಾಗುತ್ತಿದೆ. ಚಿಕ್ಕಮಗಳೂರಿನ ಫಾರೂಕ್ ಅವರ...
ಹೊಲಗದ್ದೆಗಳಲ್ಲಿ ಮನುಷ್ಯ ಆಕೃತಿಯ ಪರಿಸರಸ್ನೇಹಿ ಬೆದುರುಬೊಂಬೆಯನ್ನು ನೀವು ನೋಡಿರಬಹುದು. ಪ್ರಾಣಿಗಳು ನುಗ್ಗಿ ಬೆಳೆಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ರೈತರು ಇದನ್ನು ಹೊಲದ ಮಧ್ಯೆ ನಿಲ್ಲಿಸಿರುತ್ತಿರುತ್ತಾರೆ. ಇದೇ ತೆರನಾದ ವಿನೂತನ ಬೆದರುಬೊಂಬೆಯೊಂದು ಧರ್ಮಸ್ಥಳದ ಲಕ್ಷದೀಪೋತ್ಸವ ವಸ್ತುಪ್ರದರ್ಶನದಲ್ಲಿ ಜನರನ್ನು ಸೆಳೆಯುತ್ತಿದೆ. ಈ ಬೆದರುಬೊಂಬೆ ಹೊಲಗದ್ದೆಗಳಲ್ಲಿ ಕಾಣಿಸುವಂತಹ ಮಾದರಿಯದ್ದಲ್ಲ. ಬದಲಾಗಿ ಇದು...
ನಿಮ್ಮ ಅನಿಸಿಕೆಗಳು…