ಹೆಣ್ಣು
ಅರ್ಥವೇ ಆಗದ
ಮಾಯೆ ಇವಳು,
ನೋಡಲು ಮೃದುವಾದರೂ
ವಜ್ರಕ್ಕಿಂತ ಕಠಿಣ
ಮನಸ್ಸಿನವಳು,
ಬಂಧಿಸಬಲ್ಲುವೆ ಇವಳ
ಮನೆ, ಸಂಸಾರದ
ನಾಲ್ಕು ಗೋಡೆಗಳು?,
ಕಡು ಕಷ್ಟದಲ್ಲೂ
ಸಂತಸದ ಹೊನಲ
ಚಿಮ್ಮಿಸುವವಳು
ಬವಣೆಯ ಬೆಂಕಿಯಲ್ಲಿ
ಬೆಂದು ಬದಲಾವಣೆ ತರುವಾಕೆ,
ಸದಾ ತನ್ನವರಿಗಾಗಿಯೇ ಮೀಸಲು
ಇವಳಿಡಿ ಬದುಕೇ,
ತನ್ನ ನೋವ ಮರೆ ಮಾಚಿ
ತುಟಿಯಂಚಲಿ ನಗುವ ಧರಿಸುವಾಕೆ,
ಪಡೆಯದೇ ಬೆಲೆ ಒಮ್ಮೆಯಾದರೂ
ಇವಳ ಅಂತರಂಗದ ಬಯಕೆ?
-ನಯನ ಬಜಕೂಡ್ಲು.
ಹೆಣ್ಣಿನ ಮನಸ್ಸಿನ ಬಗ್ಗೆ ಕವನ ಚೆನ್ನಾಗಿ ಮೂಡಿ ಬಂದಿದೆ .
ಹೆಣ್ಣು ಕರುಣಾಮಯಿ
ಮಮತಾಮಯಿ
ತ್ಯಾಗಮಯಿ..