ಗ್ರಾಮೀಣ ರೊಬೊಟ್!

Share Button

ಹೊಲಗದ್ದೆಗಳಲ್ಲಿ ಮನುಷ್ಯ ಆಕೃತಿಯ ಪರಿಸರಸ್ನೇಹಿ ಬೆದುರುಬೊಂಬೆಯನ್ನು ನೀವು ನೋಡಿರಬಹುದು. ಪ್ರಾಣಿಗಳು ನುಗ್ಗಿ ಬೆಳೆಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ರೈತರು ಇದನ್ನು ಹೊಲದ ಮಧ್ಯೆ ನಿಲ್ಲಿಸಿರುತ್ತಿರುತ್ತಾರೆ. ಇದೇ ತೆರನಾದ ವಿನೂತನ ಬೆದರುಬೊಂಬೆಯೊಂದು ಧರ್ಮಸ್ಥಳದ ಲಕ್ಷದೀಪೋತ್ಸವ ವಸ್ತುಪ್ರದರ್ಶನದಲ್ಲಿ ಜನರನ್ನು ಸೆಳೆಯುತ್ತಿದೆ. ಈ ಬೆದರುಬೊಂಬೆ ಹೊಲಗದ್ದೆಗಳಲ್ಲಿ ಕಾಣಿಸುವಂತಹ ಮಾದರಿಯದ್ದಲ್ಲ. ಬದಲಾಗಿ ಇದು ಸ್ವಯಂಚಾಲಿತ ಯಾಂತ್ರಿಕತೆಯನ್ನು ಆಧರಿಸಿದೆ. ಪ್ರಾಣಿಗಳು ಹತ್ತಿರ ಬಂದ ತಕ್ಷಣವೇ ಇದು ಆ ಕ್ಷಣಕ್ಕೆ ಕಾರ್ಯೋನ್ಮುಖಗೊಳ್ಳುತ್ತದೆ. ಹಕ್ಕಿಗಳು ಹತ್ತಿರ ಸುಳಿದರೆ ಥೇಟ್ ಮನುಷ್ಯನ ರೀತಿಯೇ ಪ್ರತಿಕ್ರಿಯಿಸುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳು ಹೊಲದಿಂದ ದೂರ ಓಡುತ್ತವೆ.

ವೇಣೂರಿನ ಎಸ್.ಡಿ.ಎಮ್. ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಜ್ಯುನಿಯರ್ ಟ್ರೇನಿಂಗ್ ಆಫಿಸರ್ ಸತೀಶ್ ಅವರ ಮಾರ್ಗದರ್ಶನದಲ್ಲಿ ರೂಪಿಸಿದ ಈ ಸ್ವಯಂಚಾಲಿತ ಬೆದರುಬೊಂಬೆಗೆ ಸೆನ್ಸರ್ ಅಳವಡಿಕೆಯಾಗಿದೆ. ಹತ್ತಿರ ಸುಳಿಯುವ ಪ್ರಾಣಿಗಳು ಹೊಲದಾಚೆಗೆ ಹೋಗುವಂತಾಗಿಸುವ ರೀತಿಯಲ್ಲಿಯೇ ಇದು ವಿನ್ಯಾಸಗೊಂಡಿದೆ. ಶಬ್ದ ಹೊರಡಿಸುವುದರ ಮೂಲಕ ಇದು ರೈತನಿಗೆ ನೆರವಾಗುತ್ತದೆ.

 

 

ರೈತರು ಕೃಷಿ ಕೆಲಸದಲ್ಲಿ ಬಳಸುವ ಸಾಂಪ್ರದಾಯಿಕವಾದ ಬೆದರು ಗೊಂಬೆಯ ಪದ್ದತಿಯಿಂದ ಯಾವುದೇ ಪ್ರಯೊಜನವಿಲ್ಲ. ಅದನ್ನೇ ಮಾದರಿಯನ್ನಾಗಿಸಿಕೊಂಡು ಈ ಬೆದರುಬೊಂಬೆಯನ್ನು ಸಿದ್ಧಪಡಿಸಲಾಗಿದೆ. ರೈತರಿಗೆ ಬೀಜ ಬಿತ್ತನೆ ಮತ್ತು ಫಲ ಬಿಡುವ ಸಮಯದಲ್ಲಿ ಗದ್ದೆ ಕಾಯುವುದು ಬಹಳ ಶ್ರಮದ ಕಾರ್ಯವಾಗಿದೆ . ಅಂಥ ಸಂದರ್ಭದಲ್ಲಿ ಇದು ಸಹಕಾರಿಯಾಗಲಿದೆ.  ಕಾಡು ಪ್ರಾಣಿಗಳು ಹಂದಿ, ಜಿಂಕೆ , ಆನೆ , ಮನುಷ್ಯರನ್ನು ಸೆನ್ಸರ್‌ನ ಮೂಲಕ ಗುರುತು ಹಿಡಿಯುವ ಈ ಯಂತ್ರದಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ಪರಿಸರ ಸ್ನೇಹಿವಿನ್ಯಾಸದ ಇದು ಪ್ರಾಣಿಗಳನ್ನು ಬೆದರಿಸಿ ಓಡಿಸುತ್ತದಷ್ಟೆ. ಈ ಯಂತ್ರದಿಂದ ಚಿಕ್ಕ ಹಾಗೂ ದೊಡ್ದ ರೈತರಿಗೆ ಪ್ರಯೋಜನವಾಗಲಿದೆ. ರೈತರ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ.

ಗ್ರಾಮಿಣ ರೊಬೊಟ್ ಎಂದೇ ಕರೆಯಲ್ಪಡುವ ಈ ಯಂತ್ರದ ವಿನ್ಯಾಸ ವಿಶಿಷ್ಠವಾದುದು. ಒಂದು ಮೊಟಾರು ಹೊಂದಿದ್ದು, ಇದು ವಿದ್ಯುತ್ ಹಾಗೂ ಸೌರ ಶಕ್ತಿ ಮೂಲದಿಂದಾಗಿ ಕಾರ್ಯನಿರ್ವಹಿಸುತ್ತದೆ, ಮನುಷ್ಯನಂತೆ ಎರಡು ಕೈ ಮತ್ತು ಕಾಲು ಹೊಂದಿದ್ದು . ಪಾದದಿಂದ ನಾಲ್ಕು ಮೀಟರ್ ಮೇಲೆ ಬೆಳಕಿನ ರೂಪದಲ್ಲಿ ಸೆನ್ಸರ್ ಜೋಡಣೆಯನ್ನು ಮಾಡಲಾಗಿದೆ. ಯಾವುದೇ ಪ್ರಾಣಿಗಳು ಬಂದಾಗ ಬೆಳಕಿನ ಸೆನ್ಸರ್‌ನಿಂದಾಗಿ ಮೋಟಾರ್ ಸ್ಟಾರ್ಟ್ ಆಗಿ ಕೈಗಳ ಸಹಾಯದಿಂದ ಎರಡು ಸ್ಟೀಲ್ ಪ್ಲೇಟ್ ಬಾರಿಸುತ್ತದೆ. ಪರಿಣಾಮವಾಗಿ ಶಬ್ದ ಬರುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಪ್ರಾಣಿಗಳಿಗೆ ಭಯವಾಗಿ ಗದ್ದೆಯ ಹತ್ತಿರ ಬರುವುದಿಲ್ಲ.

ದೀಪೋತ್ಸವದಲ್ಲಿಯ ವಸ್ತು ಪ್ರದರ್ಶನದಲ್ಲಿ ಈ ಬೆದರುಬೊಂಬೆ ನೋಡುಗರ ಕಣ್ಮನ ಸೆಳೆಯುತ್ತಿದೆ..

ವರದಿ: ಹೊನಕೇರಪ್ಪ ಸಂಶಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

2 Responses

  1. Hema says:

    ವಿಶಿಷ್ಟವಾಗಿದೆ… ರೈತರಿಗೆ ಬಹಳ ಸಹಕಾರಿಯಾಗಬಲ್ಲುದು.

  2. Shankari Sharma says:

    ಉತ್ತಮ ಸಂಶೋಧನೆ …ಬರಹ ಚೆನ್ನಾಗಿದೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: