ಬೆಳಕು-ಬಳ್ಳಿ

ಧಾರವಾಡ ಸಾಹಿತ್ಯ ಸಂಭ್ರಮ

Share Button

ಕನ್ನಡದ ಕಂಪನ್ನು ಹರಡಿಸುವ ಸಂಭ್ರಮ,
ಇದುವೆ ಇದುವೆ ಸಾಹಿತ್ಯ ಸಂಭ್ರಮಾ,
ಧಾರವಾಡ ಸಂಭ್ರಮಾ.
ಸಾಹಿತ್ಯ ಸಂಭ್ರಮಾ…
ಮನೋಹರ ಗ್ರಂಥಮಾಲೆ ಪ್ರಾರಂಭಿಸಿರುವ ಸಂಭ್ರಮಾ,
ಗಿರಡ್ಡಿಯವರ ಸಾರಥ್ಯದಲಿ ಮೂಡಿಬರುವ ಸಂಭ್ರಮಾ.
ಈ ಸಂಭ್ರಮಾ ಎಲ್ಲರಾ ಮನವನೂ ಗೆದ್ದು ಮುನ್ನಡೆದಿದೆ..
ನಿಲ್ಲದಿರಲಿ ಈ ಸಂಭ್ರಮಾ..
ಗುಣಮಟ್ಟದ ವಿಷಯಗಳಿರುವಾ ಗೋಷ್ಠಿಗಳ ಸಂಭ್ರಮಾ,
ಸಾಹಿತ್ಯ ದಿಗ್ಗಜರ ಸಂವಾದ ಸಂಭ್ರಮಾ
ಮೂರು ದಿನಗಳೂ ನಡೆಯುವಾ ಈ ಉತ್ಸವಾ,
ನೋಡಿ ಅನುಭವಿಸುವದೇ  ಸಂಭ್ರಮಾ….
ಸಮಯ ಪರಿಪಾಲನೆಯನು ಮಾಡುವ಼ಂಥ ಸಂಭ್ರಮಾ.
ಸೊಗಸಾದ ನಿರೂಪಣೆಗೆ ಹೆಸರಾದ ಸಂಭ್ರಮಾ,
ಸಾಹಿತ್ಯದಾಸಕ್ತಿಯಾ ಜನರಿಗೆ,
ಬ಼ಂದೊದಗಿದಾ ಸಂಭ್ರಮಾ…
ವಿಧವಿಧದ ಪುಸ್ತಕದ ಮಳಿಗೆಗಳ ಸಂಭ್ರಮಾ,
ಉತ್ತರ ಕರ್ನಾಟಕ ಶೈಲಿಯ ಭೋಜನದ ಸಂಭ್ರಮಾ,
ನಾಡಿನಾ ಸೊಗಡನು ಜನತೆಗೆ,
ಪರಿಚಯಿಸುವ ಸುಂದರ ಸಂಭ್ರಮಾ…
– ಮಾಲತೇಶ ಹುಬ್ಬಳ್ಳಿ
.

One comment on “ಧಾರವಾಡ ಸಾಹಿತ್ಯ ಸಂಭ್ರಮ

  1. ಪ್ರೀಯ ಮಾಲತೇಶ್ ,ಕವಿತೆ ಸಮಯೋಚಿತವಾಗಿದ್ದು ಚೆನ್ನಾಗಿ
    ಮೂಡಿ ಬಂದಿದೆ .ಸಂಭ್ರಮಕ್ಕಾಗಿ ದುಡಿದ ಎಲ್ಲ ನಿಸ್ವಾರ್ಥ ಜನರಿಂದ
    ಮಾತ್ರ ಇಂಥ ಸಂಭ್ರಮಗಳ ಆನಂದ ಅನುಭವಿಸುವ ಅವಕಾಶ
    ಸಿಕ್ಕಿದ್ದು ನಮ್ಮೆಲ್ಲರ ಸುದೈವ ಅಲ್ಲವೆ?
    ಧನ್ಯವಾದಗಳೊಂದಿಗೆ, ರಂಗಣ್ಣ ನಾಡಗೀರ, ಕುಂದಗೋಳ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *