Category: ಪರಾಗ
ಹಣೆಯ ಮೇಲಿನ ಬರಹ…
ಎಲ್ಲರಂತೆ ನಾನೂ ಕೂಡ ಸಣ್ಣಳ್ಳಿಯ ವಿಳಾಸ ಹುಡುಕಿಕೊಂಡು ಹೋದಾಗ ಸಾಲೀ ಮಕ್ಕಳು ಪಾಟೀಮ್ಯಾಲ ಬಿಳಿ ಬಣ್ಣದ ಪೆನ್ಸಿಲ್ಲಿನಿಂದ ಬರೆದಂತೆ , ಆ ಊರ ಹೆಸರು ಬರೆದು ಕಚ್ಚಾರಸ್ತೆಯ ಪಕ್ಕ ನೀಲಗಿರಿ ಗಿಡದ ಬುಡಕ್ಕೆ ನೇತುಹಾಕಲಾಗಿತ್ತು. ಅಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ ಅಥವಾ ಇತರ ಕಟ್ಟಡವಾಗಲಿ ಇರಲಿಲ್ಲ ....
ಕರ್ಮ ಹಿಂದಿರುಗಿದಾಗ….!
ಮಗುವನ್ನು ತದೇಕಚಿತ್ತದಿಂದ ಹಾಗೇ ನೋಡುತ್ತ ಕೂತ ಸಹನಾಳಿಗೆ ಬಾಬುವಿನ ನೆನಪು ಕಾಡತೊಡಗಿತು. ‘ ವೈನಿ ಬಾ, ಕೂಡು ‘ ಎನ್ನುವ ಅವನ ದಿನನಿತ್ಯದ ಈ ಪದಗಳು ಕಿವಿಗಳಿಗೆ ಅಪ್ಪಳಿಸಿ ಹಿಂಸಿಸುತ್ತಿತ್ತು. ಸಹನಾಳ ಮೈದುನ ಬಾಬು. ಹುಟ್ಟಿನಿಂದ ಮಾನಸಿಕ ಅಸ್ವಸ್ಥ. ತಂದೆ ತಾಯಿಯ ನಿಧನದ ನಂತರ ಅಣ್ಣ ಉಮೇಶನ...
ಸತ್ಯಾಸತ್ಯತೆ
ರಂಗಪ್ಪನ ತಲೆಯಲ್ಲಿ ಯೋಚನೆಗಳು ಸುನಾಮಿ ಅಲೆಯಂತೆ ಎದ್ದು ಆತಂಕಗೊಳಿಸಿದವು. ದಿನಾ ಮುಂಜಾನೆ ಏಳುವ ಹೊತ್ತಿಗೆ ಎದ್ದು ಜಳಕಾ ಮಾಡಿ ಒಂದೆರಡು ಬಿಸಿ ರೊಟ್ಟಿ ಗಬಗಬನೆ ತಿಂದು ಹೊರಗೆ ಹೆಜ್ಜೆಯಿಟ್ಟಾಗ ಸೂರ್ಯ ತನ್ನ ಹೊಂಬಿಸಿಲು ಬೀರುತಿದ್ದ. ರಸ್ತೆಯ ಪಕ್ಕದ ಒಂದು ಬೇವಿನ ಗಿಡಕ್ಕೆ ಬೆನ್ನು ಹಚ್ಚಿ ಉದ್ದುದ್ದ ಕಾಲು ಚಾಚಿ...
ಕಂಟಿ ಬದಿಯ ಒಂಟಿ ಹೂ!
ಆ ಊರಲ್ಲಿ ಇಲ್ಲಿಯ ತನಕ ನೆಂಟಸ್ಥನದ ವಿಚಾರವಾಗಿ ಯಾವುದೇ ರೀತಿಯ ಗೊಂದಲ ಇರಲಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದು ಸುಖಾಂತ್ಯ ಕಾಣುತಿತ್ತು. ಆದರೆ ಆ ಒಬ್ಬ ಹುಡುಗಿಯ ವಿಷಯವಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅವಳಿಗೆ ತಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳಲು ಅನೇಕರು ಬಯಸಿದ್ದರು. ಯಾಕೆಂದರೆ ಅವಳು ವಿದ್ಯಾವಂತೆ ಇಂದಿಲ್ಲ, ನಾಳೆ ಸರಕಾರಿ ನೌಕರಿ...
ದೇವರ ಬೆಟ್ಟ….
ಬುಲೆಟನ್ನು ಕೊಂಡು ಎರಡು ಮೂರು ವರ್ಷಗಳೇ ಕಳೆದಿದ್ದರೂ ಮನೆ ಸಾಮಾನು ತರುವ ಕೈಂಕರ್ಯದಲ್ಲಿ ಅದನ್ನು ತೊಡಗಿಸಿದ್ದು ಬಿಟ್ಟರೆ ದೂರದ ಬೈಕ್ ಪಯಣದ ಕನಸು ಇನ್ನೂ ಕನಸಾಗಿಯೇ ಇತ್ತು. ದೂರ ಪಯಣದ ಹಂಬಲ, ಅಂಜಿಕೆಗಳೊಂದಿಗೆ ಎಲ್ಲಿಗೆ ಹೋಗುವುದು , ಹೇಗೆ ಹೋಗುವುದು , ಯಾರು ಜೊತೆ ಹೋಗುವುದು ಎಂಬೆಲ್ಲಾ...
ಕ್ಷಮಿಸಲಾಗದ ಕರ್ಮ
ಅಪ್ಪನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿ ಬಂದ ಮೇಲೆ ಈ ಮನೆ ನನ್ನ ಮನೆಯೆಂದೆ ಅನಿಸುತ್ತಿಲ್ಲ. ಎಲ್ಲಿ ನೋಡಿದರೂ ಅಪ್ಪನ ಮುಖವೇ ಕಾಣುತ್ತಿದೆ. ಅಪ್ಪನ ಚಾಳೀಸು, ಬಿಳಿ ಪಂಚೆ, ಶರ್ಟ್, ಅರ್ಘೆ ಪಾತ್ರೆ, ಜಪ ಮಣಿ, ಕುಳಿತುಕೊಳ್ಳುತ್ತಿದ್ದ ಕುರ್ಚಿ, ತಟ್ಟೆ, ಲೋಟ ಹೀಗೆ ಸಾಕಷ್ಟು ನಿರ್ಜೀವ ವಸ್ತುಗಳು...
ತಳಮಳ ….
ಕಟ್ಟಿಮನಿ ಪರಿವಾರದ ಮದುವೆಯಿಂದಾಗಿ ಕಲ್ಯಾಣ ಮಂಟಪ ಆಗಲೇ ಜನರಿಂದ ತುಂಬಿ ತುಳುಕುತಿತ್ತು. ಜನ ವಿಶೇಷ ವೇಷ ಭೂಷಣ ಧರಿಸಿ ಆಸನದಲ್ಲಿ ವಿರಾಜಮಾನರಾಗಿದ್ದರು. ಯಾವ ಆಸನಗಳು ಖಾಲಿ ಕಾಣುತಿರಲಿಲ್ಲ ಅತಿಥಿಗಳ ಕೈಯಲ್ಲಿ ಉಡುಗೊರೆ ನೀಡಲು ತಂದ ಸಾಮಾನುಗಳು ಕಾಣುತಿದ್ದವು. ಮದಿಮಕ್ಕಳ ವೇದಿಕೆ ಹೂವಿನಲಂಕಾರದಿಂದ ಸಿಂಗಾರಗೊಂಡಿತ್ತು. ದೊಡ್ಡವರ ಮದುವೆ ಅಂದಮೇಲೆ ಸಹಜವಾಗಿಯೇ...
ನಾಮಕರಣ
ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್...
ನಿಮ್ಮ ಅನಿಸಿಕೆಗಳು…