ವಾಟ್ಸಾಪ್ ಕಥೆ 26: ಸ್ಥಳ ಮಹಿಮೆ.
ಒಂದು ಗುಡ್ಡದ ಮೇಲೆ ದಷ್ಟಪುಷ್ಟವಾದ ಎಮ್ಮೆಯೊಂದು ಹುಲ್ಲು ಮೇಯುತ್ತಿತ್ತು. ಏಕೋ ಅದರ ಕಣ್ಣು ಗುಡ್ಡದ ಕೆಳಗೆ ನಿಂತಿದ್ದ ತನ್ನ ಯಜಮಾನನತ್ತ ಹೊರಳಿತು. ಅದಕ್ಕೆ ಆ ಮನುಷ್ಯ ಅದಕ್ಕೆ ತುಂಬ ಚಿಕ್ಕದಾಗಿ ಕಾಣಿಸಿದ. ”ಅಯ್ಯೋ ನನ್ನ ಒಡೆಯ ಎಷ್ಟು ಚಿಕ್ಕವನಾಗಿ ಕಾಣುತ್ತಿದ್ದಾನೆ. ಇದೇಕೆ ಹೀಗೆ?” ಎಂದುಕೊಂಡಿತು. ಆದರೆ ಕಾರಣ ತಿಳಿಯಲಿಲ್ಲ.
ಮತ್ತೊಂದು ದಿನ ಎಮ್ಮೆಯು ಗುಡ್ಡದ ಬುಡದಲ್ಲಿದ್ದ ಹುಲ್ಲನ್ನು ಮೇಯುತ್ತಿತ್ತು. ಒಮ್ಮೆ ಕಣ್ಣೆತ್ತಿ ಗುಡ್ಡದ ಮೇಲೆ ನಿಂತಿದ್ದ ತನ್ನ ಯಜಮಾನನ್ನು ನೋಡಿತು. ಅವನೂ ತನ್ನ ಎಮ್ಮೆಯತ್ತ ನೋಡಿದ. ಅವನಿಗೆ ತನ್ನ ಎಮ್ಮೆ ತುಂಬ ಗಿಡ್ಡದಾಗಿ ಕಾಣಿಸಿತು. ”ಅರೆ ಇದೇನು ನನ್ನ ಎಮ್ಮೆ ಇಷ್ಟು ಚಿಕ್ಕ ಆಕಾರದಲ್ಲಿ ಕಾಣುತ್ತಿದೆ ಎಂದುಕೊಂಡ” ಕಾರಣ ಅವನಿಗೂ ತಿಳಿಯಲಿಲ್ಲ.
ವಾಸ್ತವಿಕವಾಗಿ ಯಜಮಾನನಾಗಲೀ, ಎಮ್ಮೆಯಾಗಲೀ ತಮ್ಮ ಆಕಾರವನ್ನು ಬದಲಾಯಿಸಿಕೊಂಡಿರಲಿಲ್ಲ. ಆದರೆ ಅವರ ದೃಷ್ಟಿಗೆ ಹೀಗೆ ವ್ಯತ್ಯಾಸ ಕಾಣಿಸಲು ಅವರು ನಿಂತಿದ್ದ ಸ್ಥಳವೇ ಕಾರಣವಾಗಿತ್ತು. ಹೆಚ್ಚು ಎತ್ತರದಿಂದ ನೋಡಿದಾಗ ಕೆಳಗಿನ ವಸ್ತುಗಳು ಚಿಕ್ಕದಾಗಿ ಕಾಣುವುದು ಸಹಜ.
ಮನುಷ್ಯರು ತಮ್ಮ ಸ್ಥಾನಮಾನಗಳಿಂದ ಹೆಚ್ಚು ಎತ್ತರಕ್ಕೆ ಏರಿದಾಗ ಸಾಮಾನ್ಯ ಮನುಷ್ಯರು ಅವರಿಗೆ ತುಂಬ ಸಣ್ಣವರಾಗಿ ಕಾಣಿಸುತ್ತಾರೆ. ಆದರೆ ಇದರಿಂದ ವಸ್ತುಸ್ಥಿತಿ ಬದಲಾಗಿರುವುದಿಲ್ಲ. ನೋಡುವ ರೀತಿ ಬದಲಾಗಬೇಕಷ್ಟೆ. ಇತರರನ್ನು ಕೀಳಾಗಿ ನೋಡುವ ಮನೋಭಾವನೆಯನ್ನು ಹೋಗಲಾಡಿಸಿಕೊಳ್ಳಬೇಕು. ಆಗ ನಮ್ಮಲ್ಲಿಯೂ ತಾರತಮ್ಯಭಾವ ಇಲ್ಲವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಸ್ಥಿತಿ ಉಂಟಾಗುತ್ತದೆ. ಇದನ್ನು ಬೆಳೆಸಿಕೊಳ್ಳಬೇಕು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಕಥೆ,ನೀತಿ ಚೆನ್ನಾಗಿದೆ
ಧನ್ಯವಾದಗಳು ಸಾವಿತ್ರಿ ಮೇಡಂ
ಚೆನ್ನಾಗಿದೆ
ಧನ್ಯವಾದಗಳು ನಯನಮೇಡಂ
ಉತ್ತಮ ಸಂದೇಶ ಹೊತ್ತ ಪುಟ್ಟ ಕಥೆಯೊಂದಿಗಿನ ಚಂದದ ಸೂಕ್ತ ರೇಖಾಚಿತ್ರ ಮನತುಂಬಿತು.. ನಾಗರತ್ನ ಮೇಡಂ.
ಚೆನ್ನಾಗಿದೆ ನಾಗರತ್ನ ಮ್ಯಾಮ್
ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ಗೆಳತಿ ಮಮತಾ