ವಾಟ್ಸಾಪ್ ಕಥೆ 24 : ದಾನದ ಮಹತ್ವ

Share Button
ರೇಖಾಚಿತ್ರ : ಬಿ.ಆರ್.ನಾಗರತ್ನ, ಮೈಸೂರು

ಒಂದೂರಿನಲ್ಲಿ ಒಬ್ಬ ಆಗರ್ಭ ಶ್ರಿಮಂತನಿದ್ದ. ಅವನ ಬಳಿಯಲ್ಲಿ ಬೆಲೆಬಾಳುವ ಕಾರೊಂದಿತ್ತು. ಅವನು ಅದರಲ್ಲಿ ಕುಳಿತು ತನ್ನ ಕೆಲಸಕಾರ್ಯಗಳಿಗೆ ಒಡಾಡುತ್ತಿದ್ದ. ಜನರೆಲ್ಲ ‘ಎಷ್ಟು ಚೆನ್ನಾಗಿದೆ ಕಾರು! ‘ಎಂದು ಆಶ್ಚರ್ಯ ಪಡುತ್ತಿದ್ದರು ಒಂದು ದಿನ ಶ್ರೀಮಂತನು ಮಾಧ್ಯಮದವರನ್ನೆಲ್ಲ ಆಹ್ವಾನಿಸಿ ಒಂದು ಪ್ರಕಟಣೆ ಮಾಡಿದ. ”ನಾನು ನನ್ನ ಈ ಕಾರನ್ನು ಭೂಮಿಯೊಳಗಡೆ ಹೂತುಹಾಕಲು ನಿರ್ಧರಿಸಿದ್ದೇನೆ. ನೀವೆಲ್ಲರೂ ಅದನ್ನು ಪ್ರತ್ಯಕ್ಷ ನೋಡಲು ಬರಬಹುದು” ಎಂದು. ಇದು ಪ್ರಕಟವಾಗಿ ಕೆಲವೇ ದಿನಗಳಲ್ಲಿ ಅತ್ಯಂತ ರೋಚಕ ಸುದ್ಧಿಯಾಯಿತು. ಹಲವು ಜನರು ”ಶ್ರೀಮಂತನಿಗೆ ಬುದ್ಧಿ ಭ್ರಮಣೆಯಾಗಿರಬಹುದು. ಅದಕ್ಕೇ ಈರೀತಿ ಮಾಡುತ್ತಿದ್ದಾನೆ ಎಂದುಕೊಂಡರು”. ಇನ್ನು ಕೆಲವರು ಅಯ್ಯೋ ತುಂಬ ಬೆಳೆಬಾಳುವ ಕಾರನ್ನು ”ಯಾರಿಗಾದರೂ ದಾನವೆಂದು ಕೊಟ್ಟಿದ್ದರೆ ಅವರಾದರೂ ಉಪಯೋಗ ಪಡೆಯುತ್ತಿದ್ದರು. ಮೂರ್ಖ ಶ್ರೀಮಂತನಿಗೆ ಹಣ ಹೆಚ್ಚಾಗಿ ಸೊಕ್ಕು ಬಂದಿದೆ” ಎಂದುಕೊಂಡರು. ಅಂತೂ ಕಾರನ್ನು ಭೂಮಿಯಲ್ಲಿ ಹೂತುಹಾಕುವ ದಿನಾಂಕ, ಸಮಯವನ್ನೂ ಪ್ರಕಟಮಾಡಲಾಯಿತು. ಸಾವಿರಾರು ಜನರು ಆ ಸ್ಥಳದಲ್ಲಿ ವಿಚಿತ್ರವಾದುದನ್ನು ನೋಡಲೆಂದು ಸೇರಿದರು. ನಿಗದಿ ಪಡಿಸಿದ ಜಾಗದಲ್ಲಿ ಆಗಲೇ ಆಳವಾದ, ದೊಡ್ಡ ಅಳತೆಯ ಗುಂಡಿಯನ್ನು ತೋಡಲಾಗಿತ್ತು.

ಶ್ರೀಮಂತನು ತನ್ನ ಕಾರಿನಲ್ಲಿಯೇ ಕುಳಿತು ಆ ಸ್ಥಳಕ್ಕೆ ಬಂದು ನಿಂತ. ಎಲ್ಲರೂ ಕುತೂಹಲದಿಂದ ಮುಂದೇನಾಗುತ್ತದೆಂದು ನಿರೀಕ್ಷಣೆಯಲ್ಲಿದ್ದರು. ”ಮಹಾಜನಗಳೇ ನಾನು ನಿಮಗೊಂದು ಪೃಶ್ನೆ ಕೇಳುತ್ತೇನೆ. ಪ್ರಾಮಾಣಿಕವಾಗಿ ಉತ್ತರ ಕೊಡಿ” ಎಂದ. ‘ಮನುಷ್ಯನು ಮರಣಹೊಂದಿದ ಮೇಲೆ ನಾವೇನು ಮಾಡುತ್ತೇವೆ?’ ಜನರೆಲ್ಲ ”ಮೃತ ವ್ಯಕ್ತಿಯ ಸಂಸ್ಕಾರ ಮಾಡುತ್ತೇವೆ ”ಎಂದರು.

”ಸರಿ ದೇಹವನ್ನು ಮಣ್ಣಿನಲ್ಲಿ ಹೂಳುತ್ತೇವೆ, ಅಥವಾ ಬೆಂಕಿಹಾಕಿ ಸುಟ್ಟು ಬೂದಿಮಾಡುತ್ತೇವೆ. ಆದರೆ ಅದೇ ವ್ಯಕ್ತಿಯ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನಮಾಡಿದರೆ ಏನಾಗುತ್ತದೆ? ಅದರ ಉಪಯುಕ್ತ ಅಂಗಗಳನ್ನು ಅಗತ್ಯವಿರುವ ಇನ್ನೊಂದು ವ್ಯಕ್ತಿಗೆ ಅಳವಡಿಸಬಹುದು, ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪ್ರಾತ್ಯಕ್ಷಿಕೆಗಾಗಿ ಬಳಸಿ ಅನೇಕ ವಿಷಯಗಳಲ್ಲಿ ತಮ್ಮ ಜ್ಞಾನವನ್ನು ಪಡೆದುಕೊಳ್ಳಬಹುದು. ನೀವೆಲ್ಲರೂ ತಿಳಿದಿರುವಂತೆ ಕಣ್ಣುಗಳನ್ನು ದಾನಮಾಡಿದಾಗ ಕಣ್ಣಿಲ್ಲದ ಇನ್ನೊಬ್ಬರಿಗೆ ಕಣ್ಣು ಕಾಣುವಂತೆ ಮಾಡಬಹುದು. ಅದೇ ರೀತಿ ಯಕೃತ್ತನ್ನು ಕೂಡ ಇನ್ನೊಬ್ಬರಿಗೆ ಅಳವಡಿಸಬಹುದು. ಹೀಗೆ ಹಲವಾರು ರೀತಿಯಲ್ಲಿ ಉಪಯೋಗವಾಗಬಹುದಾದ ದೇಹವನ್ನು ನಾವು ಸಂಸ್ಕಾರವೆಂದು ನಷ್ಟ ಮಾಡುವುದು ಸರಿಯೇ? ಇದನ್ನು ತಿಳಿಯ ಪಡಿಸಲೋಸುಗ ನಿಮ್ಮನ್ನು ಇಲ್ಲಿಗೆ ಕರೆದಿದ್ದೇನೆ. ಈ ಕಾರು ಇನ್ನೂ ಚೆನ್ನಾಗಿ ಓಡುತ್ತಿದೆ. ಹಲವಾರು ವರ್ಷ ಕೆಲಸ ಮಾಡುವಷ್ಟು ಸಮರ್ಥವಾಗಿದೆ. ಇದನ್ನು ಭೂಮಿಯಲ್ಲಿ ಹೂತುಹಾಕಿದರೆ ನನ್ನ ತಲೆ ಕೆಟ್ಟಿದೆಯೆಂಬ ತೀರ್ಮಾನಕ್ಕೆ ನೀವೆಲ್ಲರೂ ಈಗಾಗಲೇ ಬಂದಿರಬಹುದು. ಆದರೆ ನಾನು ಇದನ್ನು ಸಾಂಕೇತಿಕವಾಗಿ ಬಳಸಿದೆ. ನಿಮಗೆ ನನ್ನ ಮನಸ್ಸಿನಲ್ಲಿ ಹೊಳೆದದ್ದನ್ನು ಮನವರಿಕೆ ಮಾಡಿಕೊಡಲು ಉಪಯೋಗಿಸಿದೆ. ನಾನು ನನ್ನ ಕಾರನ್ನು ಹೂಳುತ್ತಿಲ್ಲ ”. ಎಂದು ಹೇಳಿ ಎಲ್ಲರಿಗೂ ತನ್ನ ಮಾತುಗಳನ್ನು ಕೇಳಿದ್ದಕ್ಕಾಗಿ ವಂದಿಸಿ ಕಾರಿನಲ್ಲಿ ಕುಳಿತು ಪುರ್ರೆಂದು ಹೊರಟುಹೋದನು. ಸೇರಿದ್ದ ಜನರೆಲ್ಲ ”ಹೌದಲ್ಲವಾ? ಶ್ರೀಮಂತನು ಹೇಳಿದುದರಲ್ಲಿ ಅರ್ಥವಿದೆ. ನಮಗೊಂದು ಒಳ್ಳೆಯ ಪಾಠ ಕಲಿಸಿದ” ಎಂದುಕೊಂಡು ತಮ್ಮ ಮನೆಗಳಿಗೆ ಹಿಂತಿರುಗಿದರು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

7 Responses

  1. Veena says:

    ನನ್ನದೂ ಇದೆ ಅಭಿಪ್ರಾಯ,ಸಮಯೋಚಿತವಾಗಿದೆ,ಆಲೋಚಿಸತಕ್ಕದ್ದು ಹಾಗು ಒಳ್ಳೆಯ ಸಂದೇಶ

  2. ಸುಚೇತಾ says:

    ನಮ್ಮ ಅಜ್ಜಿ ಹೀಗೆ ಬಯಸಿದ್ದರು.
    ನಾವು ಅವರ ದೇಹವನ್ನು jss ಗೆ ದಿನ ಮಾಡಿದೆವು.

  3. ಧನ್ಯವಾದಗಳು ಗೆಳತಿ ವೀಣಾ

  4. Padma Anand says:

    ದೇಹದಾನದ ಕುರಿತಾಗಿ ಸತ್ವಯುತವಾದ ಉದಾಹರಣೆಯೊಂದಿಗೆ ತಿಳಿಯಪಡಿಸಿದ ಶ್ರೀಮಂತನಿಗೆಗೆ ಮತ್ತು ಇಂಥಹ ಕಥೆಯನ್ನು ಹೆಣೆದ ನಿಮಗೆ, ಇಬ್ಬರಿಗೂ ಅಭಿನಂದನೆಗಳು.

  5. ಧನ್ಯವಾದಗಳು ಪದ್ಮಾ ಮೇಡಂ

  6. ಶಂಕರಿ ಶರ್ಮ says:

    ಎಂದಿನಂತೆ ಸೊಗಸಾದ ಸೂಕ್ತ ರೇಖಾಚಿತ್ರದೊಂದಿಗೆ ಕಣ್ತೆರೆಸುವ ಉತ್ತಮ ಸಂದೇಶಯುಕ್ತ ಕಥೆ.

  7. ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: