Author: Shankari Sharma

10

ಸಮಯಕ್ಕೆ ಸರಿಯಾಗಿ..!

Share Button

ಸಮಯವೆಂಬುದು ಅತ್ಯಮೂಲ್ಯ.. ಕಳೆದ ಸಮಯವನ್ನು ಹಿಂದೆ ಪಡೆಯಲಾಗದು. ಅದರೊಂದಿಗೆ, ಸಮಯಕ್ಕೆ ಸರಿಯಾಗಿ ಆಗಬೇಕಾದುದು ಆಗಲೇಬೇಕು, ಮುಂದೂಡುವಂತೆಯೇ ಇಲ್ಲ. ಅದು ಹೌದು…ಆದರೆ ಒಮ್ಮೊಮ್ಮೆ ನಮ್ಮ ಯಾವುದೋ ಕೆಲಸದ ನಡುವೆ, ‘ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ(ಕರಡಿಗೆ ಬಿಟ್ಟಂತೆ..?)’, ಇನ್ನೊಂದೇನೋ ಬಂದು ಬಿಟ್ಟರೆ ಅದು ಮನಸ್ಸಿಗೆ ಸ್ವಲ್ಪ ಕಿರಿಕಿರಿ ಮಾಡುವುದು ಸಹಜ. ನೋಡಿ,...

6

ಸವಿಯಾದ ಸುರಹೊನ್ನೆ

Share Button

         ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದು ಅಲ್ಲಿಂದ ನಿವೃತ್ತಳಾದ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲ.  ನಮ್ಮ  ಗೆಳತಿ ಹೇಮಮಾಲಾರು, ತಾವು ಉದ್ಯೋಗದಲ್ಲಿದ್ದ ಅಂತರಾಷ್ಟ್ರೀಯ ಕಂಪೆನಿಯಿಂದ ಸ್ವಯಂನಿವೃತ್ತಿ ಪಡೆದ ಬಳಿಕ ಪ್ರವೃತ್ತಿಯಾಗಿ ಅವರಿಷ್ಟದ “ಸುರಹೊನ್ನೆ” ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು. ಅದರಲ್ಲಿ, ಆರಂಭಿಕ ಬರಹಗಾರರಿಗೆ ಪ್ರೋತ್ಸಾಹ ನೀಡುವ...

6

ವಿಶಿಷ್ಟ ಷಷ್ಠಿ

Share Button

ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ ಬರುವ ಸುಬ್ರಹ್ಮಣ್ಯ ಷಷ್ಠಿ ಉತ್ಸವವು ನಮ್ಮ ಜಿಲ್ಲೆಯಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ, ಯಾಕೆ ಗೊತ್ತೇ.. ನಮ್ಮದು ನಾಗಾರಾಧನೆಯ ನಾಡು.  ಮಾರ್ಗಶಿರಮಾಸ ಶುಕ್ಲಪಕ್ಷದ ಆರನೇ ದಿನವನ್ನು ಚಂಪಾಷಷ್ಠಿ ಎನ್ನುವರು....

8

ಅತಿಯಾದರೆ….?!

Share Button

ಹೌದು, ‘ಅತಿಯಾದರೆ ಅಮೃತವೂ ವಿಷವಾಗುವುದು’.. ಇದು ಬಹಳ ಅರ್ಥವತ್ತಾದ ಗಾದೆಗಳಲ್ಲೊಂದು. ಜನರು ಸಹಜವಾಗಿಯೇ ಅವರವರ ಆರೋಗ್ಯ, ಬಾಹ್ಯನೋಟ, ನಡೆನುಡಿಗಳನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸುವರು. ಅದರಲ್ಲಿ, ಈಗಿನ ಪರಿಸ್ಥಿತಿಯಲ್ಲಿ ಉಳಿದುದೆಲ್ಲವೂ ನಗಣ್ಯವಾಗಿ, ಬರೀ ಆರೋಗ್ಯದ ಕಡೆಗೆ ಎಲ್ಲರ ಗಮನ ಹರಿದಿರುವುದು ನಿಜ ತಾನೇ? ಈ ಮಹಾಮಾರಿ ಎಲ್ಲರ ತಲೆಯನ್ನು ಹಾಳುಮಾಡಿರುವುದಾಗಿ...

8

ಅಂಚೆಯ ಅಣ್ಣ

Share Button

ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು ತಿಳಿಯುವ ಕಾತರ. ಒಂದು ಪುಟ್ಟ ಕಾರ್ಡಿನಲ್ಲಿ ಬರೆದ ಒಂದೆರಡು ಸಾಲುಗಳೇ ಇರಲಿ, ಹತ್ತಾರು ಬಾರಿ ಓದಿ ಖುಶಿ ಪಡುವುದು ಮಾಮೂಲಿ. ಹಳ್ಳಿಯಲ್ಲಿರುವ ಒಂದು ಸಣ್ಣ ಅಂಚೆ...

22

ಸ್ವಾತಿ ಮಳೆನೀರು ಮಹತ್ವ

Share Button

  ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇಡುತ್ತಿದ್ದುದು ನೆನಪಿದೆ. ಅದಕ್ಕಿರುವ ಔಷಧೀಯ ಗುಣಗಳನ್ನು ಈಗ ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಯಾರಿಗಿದೆ ಪುರುಸೊತ್ತು..?? ಈ ಸಲದ ಸ್ವಾತಿ ಮಹಾನಕ್ಷತ್ರವು,...

2

ಪ್ರಾಣಿ..ಪ್ರೀತಿ

Share Button

ಪ್ರಾಣ ಇರುವುದೇ ಪ್ರಾಣಿ..ಜಗತ್ತಿನಲ್ಲಿರುವ ಸಕಲ ಪ್ರಾಣಿಜೀವಿಗಳಲ್ಲಿ ಮಾನವನು ತಾನು ಎಲ್ಲ ಜೀವಿಗಳಿಗಿಂತಲೂ ಅತಿಶ್ರೇಷ್ಠ ಎಂದು ಅಹಂಕಾರದಿಂದ ಮೆರೆಯುತ್ತಿರುವುದು ಪ್ರಕೃತಿ ನಾಶಕ್ಕೆ ಕಾರಣವಾಗಿದೆ. ಆದರೆ ಪ್ರಕೃತಿಯ ನಿಯಮದಂತೆ, ಹೆಚ್ಚು ಶಕ್ತಿಯುಳ್ಳ ಜೀವಿಯು ಮಾತ್ರ ಜಗತ್ತಿನಲ್ಲಿ ತನ್ನ ಇರುವಿಕೆಯನ್ನು ಭದ್ರಪಡಿಸಿಕೊಳ್ಳಬಹುದಷ್ಟೆ? ಆದರೂ, ಬುದ್ಧಿಜೀವಿಯಾದ ಮಾನವನು,ತನ್ನನ್ನುಳಿದೆಲ್ಲವೂ ತನಗಾಗಿ ಮಾತ್ರ ಎಂಬ ಧೋರಣೆ...

4

ಪ್ರವಾಸದ ಪ್ರಾರಂಭ

Share Button

ಪ್ರವಾಸವೆಂದರೆ ಖುಶಿಪಡದವರು ಯಾರು?  ದಿನ ದಿನದ ಕೆಲಸಗಳ ಒತ್ತಡದಲ್ಲಿ, ಎಲ್ಲಿಗಾದರೂ ಸರಿ, ಕುಟುಂಬ ಸಮೇತ ಸ್ವಲ್ಪ ದಿನ ಹೊರಗಡೆ ಸುತ್ತಾಡುವುದು ಮೈಮನಸ್ಸನ್ನು ಹಗುರಗೊಳಿಸಿ ಮುಂದಿನ ದಿನಗಳ ಕೆಲಸಗಳಿಗೆ ಸ್ಫೂರ್ತಿಯನ್ನೀಯುತ್ತದೆ. ಆದರೆ, ಕೈಯಲ್ಲಿರುವ ಹಣದ  ಲಭ್ಯತೆಗೆ ಅನುಸಾರವಾಗಿ ಪ್ರವಾಸವನ್ನು ರೂಪಿಸಬೇಕಾಗುವುದು ಅಗತ್ಯ ತಾನೇ? ಹಿಂದಿನ ಕಾಲದಲ್ಲಿ ಯಾತ್ರೆಯೆಂಬುದಾಗಿ ಹೆಸರಿಸಲ್ಪಡುತ್ತಿದ್ದ...

5

ಶಾಂತಿಯನ್ನೆಲ್ಲಿ ಹುಡುಕೋಣ..!??

Share Button

       ಸಂಘಜೀವಿಯಾದ ಮಾನವನಿಗೆ ತನ್ನ ಸಮಾಜದಲ್ಲಿ ಬದುಕಲು ಬೇಕಾದುದೆಲ್ಲವೂ ಈ ಪ್ರಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ. ಆದರೂ ಅತ್ಯಂತ ಸ್ವಾರ್ಥ ನಡವಳಿಕೆಯು ಆತನಲ್ಲಿ ಹಾಸುಹೊಕ್ಕಾಗಿರುವುದು ವಿಪರ್ಯಾಸ. ಆದ್ದರಿಂದ, ಪರಸ್ಪರ ವೈಮನಸ್ಸಿನ ಭಾವನೆಯನ್ನು ಮನಸ್ಸಲ್ಲಿ ತುಂಬಿಕೊಂಡು, ಕ್ಲೇಶದಿಂದ ಜೀವಿಸುವುದನ್ನು ಎಲ್ಲೆಲ್ಲೂ ಕಾಣಬಹುದು. ಅಸೂಯೆ, ಅಸಮಾಧಾನ, ಅನ್ಯಾಯ, ಮೋಸ, ದುರಾಸೆ, ದುರಹಂಕಾರ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟ 34:  ಮರಳಿ ಮನೆಗೆ…

Share Button

18. 5.2019ನೇ ತಾರೀಕು, ಶನಿವಾರದ ಬೆಳಗು…ಯಾಕಾಗಿ ಬೆಳಗಾಯ್ತೋ ಎಂದು ಅನ್ನಿಸುವ ಪ್ರಭಾತ. ಆದರೆ ಜೀವನ ಚಕ್ರವು ಉರುಳಲೇ ಬೇಕಲ್ಲ! ಕಳೆದ ಹತ್ತು ದಿನಗಳು ನಾಗಾಲೋಟದಿಂದ ಓಡಿದ್ದು ತಿಳಿಯಲೇ ಇಲ್ಲ. ಪ್ರೀತಿಯ ಸಹ ಪ್ರವಾಸೀ ಬಂಧುಗಳನ್ನು ಅಗಲುವ ಸಮಯ. ತಮ್ಮ ತಮ್ಮ ಕುಟುಂಬದ ಜೊತೆ  ಅನುಕೂಲಕ್ಕೆ ತಕ್ಕಂತೆ  ರೈಲು...

Follow

Get every new post on this blog delivered to your Inbox.

Join other followers: