ಚುಟುಕುಗಳು
- ಮಾತೆ
ನವಮಾಸ ಗರ್ಭದಲಿ ಮಗುವನ್ನು ಪೊರೆದು
ತನ್ನಾಶಯಗಳನೆಲ್ಲ ಅಲ್ಲಲ್ಲೆ ತೊರೆದು
ಮಕ್ಕಳಿಗೆ ಏಳಿಗೆಯ ಕದವನ್ನು ತೆರೆದು
ಅಮ್ಮ ತಾ ಸಲಹುವಳು ಪ್ರೀತಿ ಮಳೆಗರೆದು
2. ಗೆಲುವು
ಬಾಲ್ಯವ ಕಷ್ಟದಲಿ ಕಳೆದೆ
ಬಂಧುಗಳ ಸಹಾಯದಿ ಬೆಳೆದೆ
ಮನದಿ ಧೈರ್ಯವ ತಳೆದೆ
ನಗುಮೊಗದಿ ಜೀವನದಲಿ ಹೊಳೆದೆ
3.ಛಲ
ವಿದ್ಯಾರ್ಥಿಗಿರಲಿ ವಿದ್ಯಾರ್ಜನೆಯಲಿ ಒಲವು
ಇಲ್ಲದಿರೆ ಕುಸಿಯುವುದು ಮಾನಸಿಕ ಬಲವು
ಸತತ ಇರಲು ಗುರಿಮುಟ್ಟುವ ಛಲವು
ಖಚಿತವಾಗಿ ಸಿಗುವುದು ಅನುಕೂಲ ಫಲವು
4. ಗ್ರಹಚಾರ
ಮತ ಹಾಕಲು ಮಾಡುವರು ಉಪಚಾರ
ನೋಡಿದರದು ಬರೀ ಢಂಬಾಚಾರ
ರಾಜಕಾರಿಣಿಗಳಲಿ ಇರದಿರೆ ಸದ್ವಿಚಾರ
ಕಾದಿದೆ ಜನತೆಗೆ ಮಹಾಗ್ರಹಚಾರ
5.ಪೂರಕ
ಕಿರಿಯರಿಗೆ ಹಿರಿಯರ ನಡೆನುಡಿ ಪ್ರೇರಕ
ಆಗದಿರೆ ಆಗುವುದು ಬಾಳದು ನರಕ
ಸತ್ಪಥದಿ ಸಾಗದಿರೆ ಜೀವನಕೆ ಮಾರಕ
ಕೃತ್ಯ ಕನ್ನಡಿಯಂತಿರೆ ಉನ್ನತಿಗದೆ ಪೂರಕ
-ಶಂಕರಿ ಶರ್ಮ, ಪುತ್ತೂರು.
ತಾಯಿಯ ತ್ಯಾಗ ಬಾಲ್ಯದ ಹಂತ ವಿದ್ಯಾರ್ಥಿಯ ಗುರಿ ರಾಜಕೀಯ ವಿಡಂಬನೆ ಮಾರ್ಗದರ್ಶನ ದ ಅವಶ್ಯಕತೆ ಇವೆಲ್ಲ ಸಂದೇಶಗಳನ್ನು ಒಳಗೊಂಡಿರುವ ಚುಟುಕುಗಳು ಚೆನ್ನಾಗಿ ಮೂಡಿ ಬಂದಿದೆ ಮೇಡಂ.ಅಭಿನಂದನೆಗಳು
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ಉತ್ತಮ ಮೌಲ್ಯಗಳನ್ನು ಬೋಧಿಸುವ ಚುಟುಕಗಳಿಗೆ ಸ್ವಾಗತ
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಮೇಡಂ.
ಸೊಗಸಾಗಿದೆ
ಮೆಚ್ಚುಗೆಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು ಮೇಡಂ.
ಅರ್ಥಪೂರ್ಣ ಚುಟುಕುಗಳು
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.
ವೈವಿದ್ಯಮಯ ವಿಷಯಗಳ ಬಗ್ಗೆ ಚುಟುಕುಗಳಲ್ಲೇ ಅದರ ಸಾರಗಳನೆಲ್ಲಾ ಹಿಡಿದಿಟ್ಟಿದ್ದೀರಿ. ಮನಮುಟ್ಟುವ ಚುಟುಕುಗಳು. ಅಭಿನಂದನೆಗಳು