Author: Kalihundi Shivakumar
ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ. ಎಲ್ಲರಿಗೂ ಕೂಡ ರಜೆ ನೀಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳನ್ನು ಗಮನಿಸಿದಾಗ ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲರಿಗೂ...
ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ, ಬಂದರೆ ಪ್ರವಾಹ. ಬರದಿದ್ದರೆ ಬರ. ಕಾಡ್ಗಿಚ್ಚಿನಿಂದ ಅನೇಕ ಜೀವಿಗಳು ನಾಶವಾಗಿವೆ. ಮಳೆ ಬಂದು ಎಲ್ಲೆಡೆ ಹಸಿರಿನ ಜನನವಾಗುತ್ತದೆ ಎನ್ನುವಷ್ಟರಲ್ಲೇ ಅದರ ಬೆನ್ನ ಹಿಂದೆ ಈಗ ಎಲ್ಲೆಡೆ ಈಗ ಬಿಸಿಲಿನ ತಾಪ. ಅದು ಉಗ್ರ ರೂಪ ತಾಳಿದಂತಿದೆ. ರಾತ್ರಿಯೂ ಕೂಡ ತಣ್ಣನೆ...
“ಡಾ ರಾಜ್ ಕುಮಾರ್” ಎಂಬ ಹೆಸರು ಕೇಳಿದರೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್ ರವರ ಬಹುಮುಖ ವ್ಯಕ್ತಿತ್ವದ ಪ್ರತಿಭೆಯ ಅನಾವರಣಕ್ಕೆ ಸಾಟಿ ಇಲ್ಲ. ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು...
ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಜೊತೆಗೆ ತನ್ನದೇ ಆದ ಆಚರಣೆಯನ್ನು ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮೀಯರು ಕೂಡ ಉಪಯೋಗಿಸುತ್ತಾ ಬಂದಿದ್ದಾರೆ. ಸ್ತ್ರೀಯರು ಹಾಗೂ ವಿವಾಹಿತ ಸ್ತ್ರೀಯರು ದಿನ ನಿತ್ಯ ಪೂಜಿಸುವ ಮಂಗಳ ದ್ರವ್ಯಗಳು ಹಲವು ಇವೆ. ಅಲ್ಲದೆ ಮಂಗಳಕರವಾದ...
ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ: ಸರ್ಕಾರದ, ಸಂಘ ಸಂಸ್ಥೆಯ ಜೊತೆಗೆ ಕೈಜೋಡಿಸೋಣ. ಹಿಂದೆಂದಿಗಿಂತಲೂ ಈಗ ಬೇಸಿಗೆ ತನ್ನ ಪ್ರಭಾವವನ್ನು ಈಗಾಗಲೇ ನಮಗೆ ತೋರಿಸಿದೆ. ಸೂರ್ಯನ ಪ್ರಕಾರ ಬೆಳಕು ಬೆಳಗ್ಗೆಯಿಂದಲೇ ಪ್ರಾರಂಭವಾಗುತ್ತಿದೆ. ಇನ್ನು ಮಧ್ಯಾಹ್ನ ಹಂತದಲ್ಲಿ ಮಿತಿಮೀರಿದ ಬಿಸಿಲಿನಿಂದಾಗಿ ಮನುಷ್ಯನಿಂದ ಹಿಡಿದು ಪ್ರಾಣಿ-ಪಕ್ಷಿಗಳು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು...
ಪ್ರಕೃತಿಯಲ್ಲಿ ಪಕ್ಷಿಗಳಿಗೂ ಪಾಲಿದೆ. ಗುಬ್ಬಿಗಳು ನಮ್ಮೊಟ್ಟಿಗೆ ಬದುಕುತ್ತಾ, ತಮ್ಮ ಜೀವನವನ್ನು ಸಾಗಿಸುತ್ತಾ ಬಂದಿವೆ. ನಾವು ಸ್ನೇಹಿತರಂತೆ ಗುಬ್ಬಿಗಳ ಜೊತೆಯಲ್ಲೇ ಬದುಕಿದ್ದೇವೆ. ಅದು ನಮ್ಮ ಬಾಲ್ಯದ ಕಾಲದಲ್ಲಿ ಮಾತ್ರ!. ಆದರೆ ಈಗ ನಮ್ಮ ಮಕ್ಕಳ ಬಾಲ್ಯದಲ್ಲಿ ಗುಬ್ಬಿ ಮಾಯವಾಗುತ್ತಾ ಬರುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಗುಬ್ಬಿಗಳನ್ನು ಹುಡುಕುವಂತಾಗಿದೆ.ಒಂದಲ್ಲ ಒಂದು...
“ದೋಸೆ” ಎಂದೊಡನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ!. ಏಕೆಂದರೆ ಈಗ ಎಲ್ಲಾ ಹೋಟೆಲ್ಗಳಲ್ಲೂ ದೋಸೆಗಳದ್ದೇ ಕಾರುಬಾರು. ದೋಸಾ ಪಾಯಿಂಟ್ ವಿಶೇಷ ಹೋಟೆಲ್ಗಳು ಇವೆ. ಆಬಾಲವೃದ್ಧರಾಗಿ ದೋಸೆ ಎಲ್ಲರಿಗೂ ರುಚಿಸುತ್ತದೆ. ಬಗೆ ಬಗೆಯ ದೋಸೆಗಳು ಈಗ ಹೋಟೆಲ್ ಗಳಲ್ಲಿ ಸಿಗುತ್ತವೆ. ಆದರೂ ಕೂಡ ಮನೆಯಲ್ಲಿ ಮಾಡುವ ದೋಸೆಗಿಂತ ಹೋಟೆಲ್ನಲ್ಲಿ...
ನಿಜಕ್ಕೂ ನನಗೆ ಈ “ಸ್ಮಾರಕ” ಎಂಬ ಮೂರಕ್ಷರ ಕೇಳಿದೊಡನೆ ಮೈಮನಗಳು ರೋಮಾಂಚನಗೊಳ್ಳುತ್ತವೆ!. ಜೊತೆಗೆ ಹಲವು ನೆನಪುಗಳು ಮೂಡುತ್ತವೆ. ಏಕೆಂದರೆ ನಾನು ರಾಜ್ಯದ ಅನೇಕ ಸ್ಮಾರಕಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಸ್ಥಳ, ಇತಿಹಾಸದ ಮಹತ್ವ, ಅದು ನೀಡುವ ಸಂದೇಶ ಜೊತೆಗೆ ಅದು ಸಾರುವ ಪುರಾತನ ಕಥೆ, ಹೀಗೆ ಒಂದೇ...
ಏನೇನೋ ತಂತ್ರಜ್ಞಾನಗಳ ಭರಾಟೆಯಲ್ಲಿ ಪತ್ರ- ಮಿತ್ರ ಸ್ನೇಹಿತರ ವಿಶಿಷ್ಟ ಸಮ್ಮಿಲನ ಕಾರ್ಯಕ್ರಮ ಬಿ ಆರ್ ಪ್ರಾಜೆಕ್ಟ್ ನಲ್ಲಿ ಇತ್ತೀಚೆಗೆ ನಡೆಯಿತು. ಇಲ್ಲಿ ವರ್ಷ ವರ್ಷವೂ ಕೂಡ ಪತ್ರ ಮಿತ್ರರ ಸಮ್ಮಿಲನ ಕಾರ್ಯಕ್ರಮ ನಡೆಯುತ್ತದೆ. ಒಂದು ರೀತಿಯಲ್ಲಿ ಹಬ್ಬದ ವಾತಾವರಣ. ರಾಜ್ಯದ ವಿವಿಧ ಮೂಲಗಳಿಂದ ಬರುವ ಪತ್ರ ಮಿತ್ರರು....
ಈ “ಕನ್ನಡ” ಎನ್ನುವ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮೈಮನಗಳು ರೋಮಾಂಚನಗೊಳ್ಳುತ್ತವೆ! ನಮ್ಮ ಕನ್ನಡದ ನಾಡು ಚಂದ ಕನ್ನಡದ ನುಡಿ ಇನ್ನೂ ಚೆಂದ!. ಇಡೀ ಕರುನಾಡನ್ನು ಒಮ್ಮೆ ಸುತ್ತಿ ಬಂದರೆ ವಿಶ್ವವನ್ನೇ ಸುತ್ತಿದ ಅನುಭವ ನಮಗಾಗುತ್ತದೆ. ಕರ್ನಾಟಕದಲ್ಲಿ ಎಲ್ಲವೂ ಅಡಗಿದೆ.ಕನ್ನಡ ನಾಡು ಬಹು ಎತ್ತರಕ್ಕೆ ಬೆಳೆದಿದೆ....
ನಿಮ್ಮ ಅನಿಸಿಕೆಗಳು…