Daily Archive: July 18, 2019
ಅಮೇರಿಕಾದಲ್ಲಿ ನಾವಿದ್ದ ಮನೆಯಿಂದ ಮೊಮ್ಮಗನ ಶಾಲೆಗೆ ಹೆಚ್ಚೇನೂ ದೂರವಿಲ್ಲದಿದ್ದರೂ, ನಡುವೆ ಸಿಗುವಂತಹ ದೊಡ್ಡದಾದ ಹೈವೇ ನನ್ನನ್ನು ಅಧೀರಳನ್ನಾಗಿಸುವುದಂತೂ ನಿಜ. ಐದಾರು ಲೇನ್ ಗಳಲ್ಲಿ ರಾಮಬಾಣದಂತೆ ಅತೀ ವೇಗವಾಗಿ ರಪ ರಪನೆ ಚಲಿಸುವ ನೂರಾರು ಕಾರುಗಳನ್ನು ನೋಡುವಾಗ, ಅದನ್ನು ನೋಡಿ ಖುಷಿ ಪಡುವ ಬದಲು ನನಗೆ ಹೆದರಿಕೆಯೇ ಜಾಸ್ತಿಯಾಗುತ್ತಿತ್ತು....
ಬೆಳಗ್ಗೆದ್ದ ಕೂಡಲೇ ಹಾಲು ಮತ್ತು ಪೇಪರ್ ಬಂದಿದೆಯಾ ನೋಡುವಾ ಅಂತ ಬಾಗಿಲು ತೆರೆದು ಮನೆಯ ಹೊರಗೆ ಬಂದೆ. ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡ ವ್ಯಕ್ತಿಯೊಬ್ಬರು ನಮ್ಮನೆಯ ಗಿಡಗಳಲ್ಲಿ ಅರಳಿದ ಹೂವುಗಳನ್ನು ಕೊಯ್ಯುತ್ತಿದ್ದರು. ನನ್ನನ್ನು ನೋಡಿದ ತಕ್ಷಣ ತನಗೇನೂ ಗೊತ್ತಿಲ್ಲದವರಂತೆ ನಟಿಸುತ್ತಾ ಮುಂದೆ ನಡೆದರು. ನಾನೂ ಏನೂ ಹೇಳಲಿಲ್ಲ....
ಏಕೆ ಈ ಮುನಿಸು ಓಡುವ ಮೋಡಗಳೇ ನಾಲ್ಕು ಹನಿಯ ಚೆಲ್ಲುವ ಮನಸು ನಿಮಗಿಲ್ಲವೇಕೆ ಬಾಯಾರಿದ ಒಡಲು ಬೇಡಿದೆ ಬರಿದಾದ ಎದೆಯ ತಣಿಸಬಾರದೆ ಬಿರಿದ ಭೀಕರ ಬರದ ಬೇಗೆಯ ತಡೆಯಲು ನೀ ಬರಬಾರದೆ ಆಷಾಡವೂ ಕಳೆದುಹೋಯ್ತು ಆದರೂ ಒಂದು ಹನಿಯ ಸುಳಿವಿಲ್ಲ ಮೇವಿಲ್ಲದೆ ನೀರಿಲ್ಲದೆ ಬಳಲಿದ ಜೀವಗಳಿಗಿನ್ನು ಉಳಿಗಾಲವಿಲ್ಲ...
ಈಗಿನ ಒಡಿಶಾ ರಾಜ್ಯದ ಭುವನೇಶ್ವರದಿಂದ 64 ಕಿ.ಮೀ ದೂರದ ಕೋನಾರ್ಕದಲ್ಲಿರುವ ಸೂರ್ಯ ದೇವಾಲಯವು , ಅದ್ಭುತ ವಾದ ಶಿಲ್ಪವೈಭವಕ್ಕೆ ಹೆಸರುವಾಸಿಯಾಗಿದೆ. ಸೂರ್ಯನು ಏಳು ಕುದುರೆಗಳಿಂದ ಒಯ್ಯಲ್ಪಡುವ 24 ಚಕ್ರಗಳುಳ್ಳ ರಥವನ್ನೇರಿ ಬರುವಂತೆ ಕಟ್ಟಲಾದ ಭವ್ಯ ಮಂದಿರವಿದು. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಗಂಗ ವಂಶದ...
ನಿಮ್ಮ ಅನಿಸಿಕೆಗಳು…