ಉಚಿತ ಗ್ರಂಥಾಲಯ

Share Button

ಅಮೇರಿಕಾದಲ್ಲಿ ನಾವಿದ್ದ ಮನೆಯಿಂದ ಮೊಮ್ಮಗನ ಶಾಲೆಗೆ ಹೆಚ್ಚೇನೂ ದೂರವಿಲ್ಲದಿದ್ದರೂ, ನಡುವೆ ಸಿಗುವಂತಹ ದೊಡ್ಡದಾದ ಹೈವೇ ನನ್ನನ್ನು ಅಧೀರಳನ್ನಾಗಿಸುವುದಂತೂ ನಿಜ. ಐದಾರು ಲೇನ್ ಗಳಲ್ಲಿ ರಾಮಬಾಣದಂತೆ ಅತೀ ವೇಗವಾಗಿ ರಪ ರಪನೆ ಚಲಿಸುವ ನೂರಾರು ಕಾರುಗಳನ್ನು ನೋಡುವಾಗ, ಅದನ್ನು ನೋಡಿ ಖುಷಿ ಪಡುವ ಬದಲು ನನಗೆ ಹೆದರಿಕೆಯೇ ಜಾಸ್ತಿಯಾಗುತ್ತಿತ್ತು. ಸಿಗ್ನಲ್ ಬಂದಾಗ ಆ ಕಾರುಗಳು ಗಕ್ಕೆಂದು ನಿಂತರೂ, ನಡೆದಾಡುವವರಿಗಾಗಿ ಇರುವ ಸಿಗ್ನಲ್ ಬಟನ್ ಒತ್ತಿ ಕಾಯುವ ಕೆಲಸವೂ ನನ್ನ ಮನಸ್ಸಿಗೆ ಅಷ್ಟೇನೂ ಹಿತಕಾರಿಯಾಗಿರಲಿಲ್ಲ.  ರಸ್ತೆ ಅಡ್ಡ ದಾಟುವಾಗಲೂ ಅವುಗಳೆಲ್ಲಾ ನನ್ನ ಮೇಲೆಯೇ ಬಂದಂತೆನಿಸಿ ಗಾಬರಿಯಲ್ಲಿ ಜೋರಾಗಿ ದಾಟುತ್ತಿದ್ದೆ. ಬೇರೆ ಕಡೆಯ ರಸ್ತೆಗಳಲ್ಲಿ ಇಂತಹ ಕೆಲಸಗಳನ್ನು ಏನೂ ಹೆದರಿಕೆಯಿಲ್ಲದೆ ಖುಷಿಯಿಂದಲೇ ಮಾಡುತ್ತಿದ್ದೆ ಎನ್ನಿ.

ಒಮ್ಮೆ ಮೊಮ್ಮಗಳಿಗೆ ರಜೆ ಇದ್ದ ದಿನ. ನಾವಿಬ್ಬರೂ ಮೊಮ್ಮಗನ ಶಾಲೆಗೆ ಹೋಗುವುದೆಂದು ನಿರ್ಧರಿಸಿ ನಡೆದುಕೊಂಡು ಹೊರಟೆವು. ಹೈವೇಯನ್ನೂ ದಾಟಿಯಾಯಿತು. ಒಂದು ಕಡೆ ರಸ್ತೆ ಬದಿಯಲ್ಲಿ, ಪಾದಾಚಾರಿಗಳಿಗಾಗಿರುವ ಸಣ್ಣ ರಸ್ತೆಯಲ್ಲಿ ನಮ್ಮೂರಲ್ಲಿ ಜೇನು ಪೆಟ್ಟಿಗೆ ಇಡುವಂತಹ ಕಂಬದ ಮೇಲೆ ಸಣ್ಣದಾದ ಕಪಾಟಿನಂತಹ ಗಾಜಿನ ಪೆಟ್ಟಿಗೆ ಇಟ್ಟಿರುವುದು ಕಾಣಿಸಿತು. ಅದರ ಮೇಲೆ Little Free Library.com, Take a book. Return a book ಎಂದು ಬರೆದಿತ್ತು. ಸರಿಯಾಗಿ ಗಮನಿಸಿದಾಗ ಅದರೊಳಗೆ ಕೆಲವು ಪುಸ್ತಕಗಳಿದ್ದುವು. ಅದಕ್ಕೇನೂ ಬೀಗ ಜಡಿದಿರಲಿಲ್ಲ. ಕುತೂಹಲದಿಂದ  ಬಾಗಿಲು ತೆರೆದು ನೋಡಿದರೆ ಅದರ ತುಂಬಾ ಪುಸ್ತಕ! ಆಶ್ಚರ್ಯದಿಂದ ಮೊಮ್ಮಗಳಲ್ಲಿ ಕೇಳಿದಾಗ ತಿಳಿಯಿತು. ಅದೊಂದು ಉಚಿತವಾದ ಪುಟ್ಟ ಗ್ರಂಥಾಲಯವಾಗಿತ್ತು. ಬೇಕಾದವರು ಅದರಲ್ಲಿರುವ ಪುಸ್ತಕಗಳನ್ನು ಉಚಿತವಾಗಿ ತೆಗೆದುಕೊಂಡು ಉಪಯೋಗಿಸಬಹುದಾತ್ತು. ಹಾಗೆಯೇ ಅವರಲ್ಲಿರುವ ಪುಸ್ತಕಗಳನ್ನು ಇತರರ ಉಪಯೋಗಕ್ಕೆ ಅಲ್ಲಿರಿಸಬಹುದಿತ್ತು.

ಯಾರೂ ಕದಿಯುವುದಿಲ್ಲ. ನಿಜವಾಗಿಯೂ ಎಂಥಹ ಒಳ್ಳೆಯ ಉದಾತ್ತ ವ್ಯವಸ್ಥೆಯೆನ್ನಿಸಿತು. ನಮ್ಮಲ್ಲಿಯೂ ಇಂತಹ ವ್ಯವಸ್ಥೆಯನ್ನು ರೂಪಿಸುವ ಅನುಕೂಲತೆ ಇದ್ದರೆ ಎಷ್ಟು ಒಳ್ಳೆಯದೆನಿಸುತ್ತದೆ…ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು.

9 Responses

  1. Raghunath Krishnamachar says:

    ನಿಜ. ನನ್ನ ಅನುಭವ ಕೂಡ

  2. Vasundhara Kadaluru Mallappa says:

    ಇಲ್ಲಿ ಜನ ತಾವೇ ಕೊಂಡು ಓದುವುದು ಅಷ್ಟರಲ್ಲಿರಲಿ, ಸದ್ಯ ಸಾರ್ವಜನಿಕ ಗ್ರಂಥಾಲಯಗಳಿಂದ ಪುಸ್ತಕ ಕದಿಯದಿದ್ದರೆ ಸಾಕು.

  3. Asha Nooji says:

    ಮೋದಿಸರಕಾರ ಬಂತಲ್ಲ ￿￿ಅಕ್ಕ .ಾಗುತ್ತೆ ನಿಧಾನ .ನಮ್ಮ ಕಾಲದಲ್ಲೇ ಆಗುತ್ತೆ ಸ್ವಲ್ಪ ಕಾಯಬೇಕು ಅಷ್ಟೆ .

  4. ವಿಜಯಾಸುಬ್ರಹ್ಮಣ್ಯ , says:

    ಒಳ್ಳೆಯ ಬರಹ ಶಾಲೆಯಲ್ಲಿರುವಾಗ ಗಡಿಭಿಡಿಯಲ್ಲಾದರೂ ಓದಿದೆ. ಕಾರಣ ಲೈಬ್ರೆರಿಗೆ ಸಂಬಂಧ ಪಟ್ಟದು. ನಾನೂ ಒಬ್ಬ ಗ್ರಂಥಪಾಲಿಕೆ ತಾನೇ. ಶಂಕರಿ ಶರ್ಮ ನಿಮಗೆ ಧನ್ಯವಾದಗಳು.

  5. ನಯನ ಬಜಕೂಡ್ಲು says:

    ನಿಜಕ್ಕೂ ಒಂದು ಒಳ್ಳೆಯ ವ್ಯವಸ್ಥೆ. ಆದರೆ ಇಲ್ಲಿ ಇಂತಹ ವ್ಯವಸ್ಥೆ ಮಾಡಬಹುದು ಅಂದ್ರೆ ಅದು ಕನಸಿನ ಮಾತು. ಮೊದಲನೆಯದಾಗಿ ಎಲ್ಲರಲ್ಲೂ ವಿದ್ಯೆಯ ಪ್ರತಿ ಪೂಜ್ಯ ಭಾವನೆ ಇರ್ಬೇಕು ,ನಮ್ಮ ದೇಶದಲ್ಲಿ ಹಲವರಲ್ಲಿ ಅದೇ ಇಲ್ಲ . ಇನ್ನೂ ಗ್ರಂಥಾಲಯಗಳಿದ್ದರೂ ಅಲ್ಲಿನ ಪುಸ್ತಕಗಳನ್ನೇ ಹಾಳು ಮಾಡುವ ಮನಸ್ಥಿತಿ , ಪುಸ್ತಕಗಳಲ್ಲಿ ಬೇಡದ ,ಕೀಳು ಅನ್ನಿಸೋ ಬರಹಗಳನ್ನು ಗೀಚೋ ವಿಕೃತ ಮನಸ್ಸುಗಳು ನಮ್ಮಲ್ಲಿ ಬಹಳಷ್ಟು ಇವೆ . ಇಂತಹ ಕಡೆ ಈ ತರದ ಉಚಿತ ಪುಸ್ತಕದ ವ್ಯವಸ್ಥೆ ಯಂತಹ ಕೆಲಸವನ್ನು ಹೇಗೆ ಮಾಡಲು ಸಾಧ್ಯ ,?

  6. Parvati Krishna. says:

    Nijavaagi aashcharya aaguva vishaya. Illi nannamagana mane sameepavu eradu puttu library ide. .MommagaLu adara upayoga maaduththiddaLe.

  7. ಮರೆತೇ.. ,ನಾನು ಉ.ಅಮೆರಿಕಾದ Boston ನಗರದಲ್ಲಿ ಇದ್ದು ಸುರಹೊನ್ನೆಯ ಕಂಪುಸವಿಯುತ್ತಿರುವೆ.ಹೇಮಾ.ಅಭಿನಂದನೆಗಳು.

    • Hema says:

      ಧನ್ಯವಾದಗಳು ಮೇಡಂ..ಇಂತಹ ಪ್ರೋತ್ಸಾಹದ ಮಾತುಗಳೇ ನಮಗೆ ಸುರಹೊನ್ನೆಯನ್ನು ಮುಂದುವರಿಸಿಲು ಪ್ರೇರಣೆ.
      ಹೇಮಾ

  8. Shankari Sharma says:

    ಓದಿದ, ಮೆಚ್ಚಿದ ಎಲ್ಲಾ ಸಹೃದಯೀ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: