Monthly Archive: June 2016
ವಿದ್ಯಾರ್ಥಿಗಳು ಒಂದೇ ಸಮನೆ ಮಾತಾಡಿ ಗದ್ದಲ ಮಾಡುತ್ತಿದ್ದರು, ಪ್ರಾಂಶುಪಾಲರು ಶೈಲಜಾ ಮೇಡಂನ ಕರೆದು “ನೋಡ್ರೀ, ಮಕ್ಕಳು ಏನೋ ಕಿರಾಚುಡುತ್ತಿದ್ದಾರೆ. ಏನಾಯ್ತು ನೋಡೀ!” ಎಂದರು. ಶೈಲಜಾ, ಆ ಕಾಲೇಜಿನ ಇಂಗ್ಲೀಷ್ ಟೀಚರ್, ಅವರನ್ನು ನೋಡಿದ್ರೇನೇ ಸ್ಟೂಡೆಂಟ್ಸ್ ಸಪ್ಪಗಾಗ್ತರೆ. ಹಾಗಂತ ತುಂಬಾ ಸ್ಟ್ರಿಕ್ಟ್ ಕೂಡ ಅಲ್ಲ. ಯಾವ ವಿದ್ಯಾರ್ಥಿಯನ್ನು...
ಮನೆ ಮುಂದಿನ ರಸ್ತೆಯಲ್ಲಿ ಇಂದು ‘ಹೆರಳೆಕಾಯಿ…ಹೆರಳೆಕಾಯಿ’ ಎಂದು ಕೂಗುತ್ತಾ ಒಬ್ಬರು ಬುಟ್ಟಿ ತುಂಬಾ ಹೆರಳೆಕಾಯಿ ತುಂಬಿಕೊಂಡು ಬರುತ್ತಿದ್ದರು. ನಾಲ್ಕಾರು ಹೆರಳೆಕಾಯಿಗಳನ್ನು ಕೊಂಡೆವು. ಹೆರಳೆಕಾಯಿ ನಿಂಬೆಯ (Citrus) ಜಾತಿಗೆ ಸೇರಿದ ತಳಿ. ವಿಶಿಷ್ಟ ಸುವಾಸನೆ ಮತ್ತು ರುಚಿ ಹೊಂದಿದೆ, ನಿಂಬೆಹಣ್ಣಿನಷ್ಟು ಹುಳಿ ಇಲ್ಲ ಹಾಗೂ ಅದರ ಸಿಪ್ಪೆ ಬಲು...
ಕಾರ್ಯನಿಮಿತ್ತ ಹೈದರಾಬಾದಿನ ಯೂನಿವರ್ಸಿಟಿಯೊಂದಕ್ಕೆ ಹೋಗಬೇಕಾಗಿತ್ತು. ಅಲ್ಲಿನ ವಸತಿ, ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲಿಂದಲೇ ನಿಗದಿಪಡಿಸದೆ ಹೊರಡುವಂತಿಲ್ಲ. ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಹಾಸ್ಟೆಲ್ ಇರದಿದ್ದಲ್ಲಿ ಹೇಗಪ್ಪಾ ಎಂಬ ಚಿಂತೆ. ಕೊನೆಗೆ ಗಂಡ, ಮಗಳು ಹೀಗೆ ಸಂಸಾರ ಸಮೇತ ಹೋಗಿ ಪಿಕ್ನಿಕ್ಕೂ ಮಾಡಿ ಬಂದೆವೆನ್ನಿ. ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಎಂದೆಲ್ಲ ಮಾತನಾಡುತ್ತಿರುವಾಗಲೇ...
ನಮ್ಮ ಮನೆಯ ಪಕ್ಕದಲ್ಲಿಯೇ ಒಂದು ಭಗವತಿ ಕ್ಷೇತ್ರವಿದೆ ..ವರುಷದಲ್ಲಿ ಒಮ್ಮೆ ನಡೆವ ಊರ ಜಾತ್ರೆ .. ಮೇಲ್ನೋಟಕ್ಕೆ ಬಿಲ್ಲವರ ಕ್ಷೇತ್ರ/ಭೂತಸ್ತಾನ ಎಂದು ಕಂಡರೂ ಊರಿನ ಎಲ್ಲಾ ಹಿಂದೂಗಳು ಒಗ್ಗಟ್ಟಿನಿಂದ ಭಕ್ತಿಯಿಂದ ನಂಬಿ ನಡೆಸಿಕೊಂಡು ಹೋಗುತ್ತಿರುವ ಸಂಭ್ರಮವಿದು.ಈ ದೇವಿ ಭಗವತಿ ಹೆಚ್ಚಾಗಿ ಕೇರಳದ ಮಣ್ಣಿನಲ್ಲೇ ಪೂಜಿಸಲ್ಪಡುವುದು.ಇತರ ರಾಜ್ಯಗಳಲ್ಲಿ ಹೆಚ್ಚಾಗಿ...
ನಮ್ಮ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ಹಲವಾರು ಕಥೆಗಳಲ್ಲಿ ‘ಮಂಗಗಳು ಚಳ್ಳಂಗಾಯಿ ಉಪ್ಪಿನಕಾಯಿ’ ತಿಂದ ಕಥೆಯೂ ಇತ್ತು.ಆ ಕಥೆಯ ಸಾರಾಂಶ ಹೀಗಿದೆ : ” ರಾವಣವಧೆಯ ನಂತರ, ಸೀತೆ ಮರಳಿ ಬಂದ ಮೇಲೆ, ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವು ಬಲು ವಿಜೃಂಭಣೆಯಿಂದ ನೆರವೇರಿತು. ಶ್ರೀರಾಮನು ತನ್ನ ವನವಾಸದ ಕಷ್ಟದ ದಿನಗಳಲ್ಲಿ...
ಕಳೆದ ಮೂರು ದಶಕಗಳಿಂದ ಕವಿತೆ ಬರೆಯುತ್ತಿರುವ ಗೆಳತಿ ಪೂರ್ಣಿಮಾ ಕವನ ಸಂಕಲನ ತರುವ ಮನಸ್ಸು ಮಾಡಿಯೇ ಇರಲಿಲ್ಲ. ಈಗ ದಿಢೀರನೆ ‘ಸಾಕು ಮೌನದ ಭಾಷೆ’ ಎಂದು ಘೋಷಿಸಿ ಸಂಕಲನದ ಮೂಲಕ ನಮಗೆ ಮುಖಾಮುಖಿಯಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ಆದರೆ ಇದರ ಹಿಂದಿರುವ ಪಯಣ ದೀರ್ಘವಾದುದಷ್ಟೇ ಅಲ್ಲ, ಸಂಯಮಶೀಲವಾದುದು...
ಅಕ್ಷರಕ್ಷರ ಪದ ವಾಕ್ಯಗಳಲವಿತ ಋಷಿಮುನಿ ಪ್ರಣೀತ ವೇದ ವೇದಾಂಗ ಕರ್ಮಾನುಷ್ಠಾನ. ಇತಿಹಾಸ ಭೂಗೋಳ ಜ್ಞಾನ ವಿಜ್ಞಾನ ಖಗೋಳಾದಿ ಗಣಿತ ಯಂತ್ರತಂತ್ರಾದಿ ವಿಷಯಾನುಭವ. ಕತೆ, ಕಾವ್ಯ, ಕವನ ಸಾಹಿತ್ಯ ಸಂಗೀತ ನಾಟ್ಯ ಅಭಿನಯಾದಿ ನವರಸ ದರ್ಶನ ಜ್ಞಾನ ಪರಿಪೂರ್ಣ. ಬಾಷೆ ನೂರಿರಲಿ ಕ್ಷೇತ್ರ ಸಾವಿರವಿರಲಿ...
ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ ಕರುಳು ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ....
ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು...
ನಿಮ್ಮ ಅನಿಸಿಕೆಗಳು…