Category: ಪರಾಗ
ಕಥೆ – “ಭಿನ್ನ”
“ಬಹಳ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರೋದು. ಗಂಟೆಗಳ ಲೆಕ್ಕದಲ್ಲಿ ಕ್ರಿಯೇಟಿವಿಟಿಯನ್ನ ಎಕ್ಸೆಲ್ ಫೈಲೊಳಗೆ ತುಂಬುವುದು ನನಗಂತೂ ಸಾಧ್ಯವಿಲ್ಲ. ಒಬ್ಬೊಬ್ಬ ವ್ಯಕ್ತಿಯ ಸಂದರ್ಶನದ ಹಿಂದಿನ ಸಂಶೋಧನೆ, ಪ್ರಶ್ನೆಗಳು, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಿದ್ಧತೆ ಎಲ್ಲವನ್ನೂ ಗಂಟೆ, ನಿಮಿಷದ ಲೆಕ್ಕದಲ್ಲಿ ಅಳೆಯೋದು, ಇದ್ದಕ್ಕಿದ್ದಂತೆ ಸಂಜೆ ಒಬ್ಬರ ಹೆಸರು...
ಕೈಗೆ ಬಂದ ತುತ್ತು ಬಾಯ್ಗಿಲ್ಲಾ..
ಒಡೀತಂತ್ಲೇ ಕೋಟಿ ಕೇರ್ಳದ್ ಕೂಲೀಗೆ! ಏನ್ಲಾ ಅದು ಕೋತಿ ಕೂಲಿ ಕತೆ? ಅಯ್ ಕೋತ್ ನನ್ಮಗ್ನೆ ಅದು ಕೋತಿಯಲ್ಲಾ ಕಣೋ ಕೋಟಿ ಕೋಟಿ. ಕೇರಳ್ದಲ್ಲಿ ಬಾಳ ಕಸ್ಟದಲ್ಲಿದ್ ಕೂಲಿ ಒಬ್ಬ ಇನ್ನೂ ಒಸಿ ಕಸ್ಟಪಟ್ಟು 350 ರೂ. ಕೊಟ್ಟು ಒಂದು ಸಿಂಗಲ್ ನಂಬರ್ ಲಾಟ್ರಿ ಟಿಕೇಟ್ ಕೊಂಡ್ಕೊಂಡ್ನಂತೆ ಕಲಾ. ಅವನ್ ಅದ್ರುಸ್ಟಕ್ಕೆ...
ಆತಂಕ
ಬೀದಿಯಲಿ ವಾಹನದ ಸದ್ದಾಗಲೆಲ್ಲ ಬಿಂದೂರಾಯರಿಗೆ ಅತ್ತಲೇ ಗಮನ “ರಾತ್ರಿ ಎಷ್ಟು ಹೊತ್ತಾದ್ರೂ ಸರಿ ವಾಪಸ್ ತಂದುಕೊಡ್ತೀನಿ ಭಾವಾ “ಎಂದಿದ್ದ ಭಾವಮೈದುನ ವರಾಹಮೂರ್ತಿ..ಹತ್ತಾಯ್ತು…. , ಹನ್ನೊಂದಾಯ್ತು…. ಹನ್ನೆರಡೂ ಹೊಡೆದೇಬಿಟ್ಟಿತ್ತಲ್ಲ.! “ಎಷ್ತೊತ್ತು ಎಚ್ಚರಾಗಿರ್ತೀರಿ?ಊಟಮಾಡಿ ಮಲಗಿ ಅವನು ಬಂದಾಗ ನಾನು ಎಚ್ಚರಿಸ್ತೀನಿ.”ಮಡದಿ ಮಹಾಲಕ್ಷಮ್ಮನವರ ಆಗ್ರಹದಲ್ಲಿ ಕಳಕಳಿಯೇ ಹೆಚ್ಚು ಇದ್ದದ್ದು. “ಹನ್ನೆರಡಾಯ್ತೆ ಟೈಮು . ಈಗ ಅದು...
ಮಾತೃ ಹೃದಯ
ನಾನಿನ್ನೂ ಆಗ ಎರಡನೇ ಪೀಯೂಸಿ ಓದುತ್ತಿದ್ದೆ. ತಕ್ಕಮಟ್ಟಿಗೆ ಸುಂದರವಾಗಿಯೂ ಇದ್ದೆನೆಂದು ಕನ್ನಡಿ ಹೇಳುತ್ತಿತ್ತು. ಒಬ್ಬ ಸುಂದರನಾದ ಯುವಕ ನನ್ನನ್ನು ಹಿಂಬಾಲಿಸುತ್ತಿದ್ದುದು ನನಗೆ ತಿಳಿದಿತ್ತು. ಆ ವಿಷಯ ನನಗೂ ಇಷ್ಟವಾಗಿದ್ದರೂ ಅದನ್ನು ತೋರಿಸಿಕೊಳ್ಳುವ ಎದೆಗಾರಿಕೆ ನನಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಾನು ಮೊದಲ ಹೆಜ್ಜೆ ಇಡಲು ತಯಾರಿರಲಿಲ್ಲ. ಜೊತೆಗೆ ನನ್ನ...
ಮಾಡಿದ್ದುಣ್ಣೋ ಮಾರಾಯ
ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಒಂದು ಶಾಲೆಯು ನಡೆಯುತ್ತಿತ್ತು. ಆ ಶಾಲೆಯಲ್ಲಿ ನೂರಾರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಒಂದು ದಿನ ತರಗತಿಯೊಂದರ ಗಣಿತ ಶಿಕ್ಷಕರು ಸಂಕಲನ ಬಗ್ಗೆ ಪಾಠವನ್ನು ಮಕ್ಕಳಿಗೆ ಮಾಡಿದ ಮೇಲೆ, ಗೃಹಪಾಠಕ್ಕೆಂದು ಕೆಲವು...
ಭವ್ಯ ಬದುಕು
ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು....
ನ್ಯಾನೋ ಕಥೆಗಳು
ಮಗನ ಪ್ರೀತಿ ಮಗನೋರ್ವ ಜಾತ್ರೆಯಲ್ಲಿ ಆಟಿಕೆಗಳನ್ನು ಕೊಳ್ಳುವ ಸಲುವಾಗಿ ಓಡೋಡಿ ಮನೆಗೆ ಬಂದನು. ತಾಯಿಯ ಕಡುಬಡತನ ಅರಿಯದ ಚಿಕ್ಕವಯಸ್ಸು, ಅವಳಲ್ಲಿ ಗೋಗರೆದು ಕೊನೆಗೂ ಐದುರೂಪಾಯಿ ಗಿಟ್ಟಿಸಿಕೊಂಡುನು. ಅವನವ್ವ ದುಡ್ಡು ಕೊಡುವಾಗ ಪ್ರೀತಿಯಿಂದ ತಲೆಸವರಿ ” ಬೇಗನೆ ಮುರಿದು ಹಾಳಾಗುವ ವಸ್ತುಗಳನ್ನು ಕೊಳ್ಳಬೇಡ, ಸದಾ ಜೊತೆಗಿರ್ಬೇಕು ನೋಡಿ ತಗೊ”...
ನಿಮ್ಮ ಅನಿಸಿಕೆಗಳು…