ವಾಟ್ಸಾಪ್ ಕಥೆ: 2 ಬದುಕಿಗೆ ಭರವಸೆಯೇ ಆಸರೆ.
ಒಂದು ಮನೆಯಲ್ಲಿ ಮಗುವೊಂದು ಆಟವಾಡಲು ನಾಲ್ಕು ಮೇಣದ ಬತ್ತಿಗಳನ್ನು ತಂದಿತು. ಅದು ಬೆಂಕಿಪೊಟ್ಟಣ ತೆಗೆದುಕೊಂಡು ನಾಲ್ಕನ್ನೂ ಬೆಳಗಿಸಿತು. ಮೂರನ್ನು ಅಲ್ಲಿದ್ದ ಮೇಜಿನಮೇಲೆ ಇರಿಸಿ ಒಂದನ್ನು ಮಾತ್ರ ತನ್ನೊಡನೆ ತೆಗೆದುಕೊಂಡು ದೇವರ ಮನೆಯಲ್ಲಿ ದೀಪ ಬೆಳಗಿಸಲು ಹೋಯಿತು. ಅದು ಒಳಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತವೆ.
ಮೊದಲನೆಯದು ನನ್ನ ಹೆಸರು ‘ಶಾಂತಿ‘. ಜಗತ್ತಿನಲ್ಲಿ ನನಗೆ ಯಾರೂ ಬೆಲೆ ಕೊಡುತ್ತಿಲ್ಲ. ಎಲ್ಲೆಲ್ಲೂ ಜಗಳ, ಯುದ್ಧ .ಎರಡನೆಯ ಮೇಣದ ಬತ್ತಿಯು ನನ್ನ ಹೆಸರು ‘ನಂಬಿಕೆ’. ಮೊದಲಿನಂತೆ ಜನರಲ್ಲಿ ಪರಸ್ಪರ ನಂಬಿಕೆ ಉಳಿದಿಲ್ಲ. ಎಲ್ಲೆಲ್ಲೂ, ಅಶಾಂತಿಗಳೇ ಉಂಟಾಗುತ್ತಿವೆ. ನನಗಿಲ್ಲೇನು ಕೆಲಸ ಎಂದು ತಟ್ಟಂತ ಆರಿಹೋಯಿತು. ಸಂದೇಹ, ಅಸೂಯೆ ತುಂಬಿಕೊಂಡಿವೆ. ನನ್ನ ಅವಶ್ಕತೆ ಇವರಿಗೆ ಇಲ್ಲವೆಂದುಕೊಳ್ಳುತ್ತೇನೆ. ಎನ್ನುತ್ತಾ ಆರಿಹೋಯಿತು.
ಮೂರನೆಯ ಮೇಣದ ಬತ್ತಿಯನನ್ನ ಹೆಸರು ‘ಪ್ರೀತಿ’. ಆದರೆ ಎಲ್ಲಿ ನೋಡಿದರೂ ಸುತ್ತಲೂ ಬರಿಯ ದುಃಖವೇ ಕಾಣಿಸುತ್ತದೆ. ಒಬ್ಬರಿನ್ನೊಬ್ಬರನ್ನು ಹೊಟ್ಟೆಕಿಚ್ಚು, ಸಂದೇಹದಿಂದಲೇ ನೋಡುತ್ತಾರೆ. ಪ್ರೀತಿಸುವುದನ್ನೇ ಮರೆತುಬಿಟ್ಟಿದ್ದಾರೆ. ನನ್ನ ಅವಶ್ಯಕತೆ ಇಲ್ಲ ಎಂದು ಆರಿಹೋಯಿತು.
ಅಷ್ಟರಲ್ಲಿ ಕೊಠಡಿಗೆ ಹಿಂದಿರುಗಿದ ಮಗುವು ಈಗ ತಾನೇ ಹಚ್ಚಿಟ್ಟಿದ್ದ ಮೇಣದ ಬತ್ತಿಗಳೆಲ್ಲ ಆರಿಹೋಗಿರುವುದನ್ನು ಕಂಡು ಅಳುತ್ತದೆ. ಆಗ ಅದರ ಕೈಯಲ್ಲಿ ಉರಿಯುತ್ತಿದ್ದ ನಾಲ್ಕನೆಯ ಮೇಣದ ಬತ್ತಿ ಹೇಳಿತು ಮಗೂ ದುಃಖಿಸಬೇಡ. ನಾನು ಆರಿಲ್ಲ. ನನ್ನನ್ನು ಉಪಯೋಗಿಸಿಕೊಂಡು ಆರಿಹೋಗಿರುವ ಈ ಮೂರೂ ಮೇಣದ ಬತ್ತಿಗಳನ್ನು ಮತ್ತೆ ಹೊತ್ತಿಸಬಹುದು. ಆಗ ಮಗು ಅಳು ನಿಲ್ಲಿಸಿ ಹಾಗೇ ಮಾಡಿತು. ನಿನ್ನ ಹೆಸರೇನು? ಎಂದು ಮಗು ಕೇಳಿತು. ನನ್ನ ಹೆಸರು ‘ಭರವಸೆ’. ಜೀವನದಲ್ಲಿ ನೀನು ಎಲ್ಲಿಯೇ ಹೋಗು, ಏನನ್ನೇ ಮಾಡು. ಆದರೆ ಭರವಸೆಯನ್ನು ಮಾತ್ರ ಕಳೆದುಕೊಳ್ಳಬೇಡ. ಇದರಿಂದ ಮತ್ತೆ ಈ ಮೂರನ್ನೂ ಪಡೆಯಬಹುದು. ಎಂದಿತು.
-–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
Very nice
ಧನ್ಯವಾದಗಳು..
ಸೊಗಸಾದ ಕಥೆ
ತುಂಬ ಅಥ೯ಪೂಣ೯.
ಧನ್ಯವಾದಗಳು ಗಾಯತ್ರಿ ಹಾಗೂಮಹೇಶ್ವರಿ ಮೇಡಂ
ಬಹಳ ಅರ್ಥಪೂರ್ಣ ಕಥೆ..ಧನ್ಯವಾದಗಳು ಮೇಡಂ.
ಬಹಳ ಚೆನ್ನಾಗಿದೆ ಕಥೆ
ಧನ್ಯವಾದಗಳು ಶಂಕರಿ ಮೇಡಂ ಹಾಗೂ ನಯನಾ ಮೇಡಂ
ಬನಳ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ