ನೇರಾನೇರ
ಪ್ರಕೃತಿಯ ನೇರಾನೇರಮಾತುಗಳೆಲ್ಲವೂಮಳೆಯಾಗುತ್ತದೆಹೊಳೆಯಾಗಿ ಇಳೆನಗುತ್ತದೆ ಕಾಲ ಸಮಯಕ್ಕೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಬಿಸಿಲಾಗುತ್ತದೆಬೆಳಕಾಗುತ್ತದೆ ಬೆಳಗುಸಂಜೆಗಳ ಅವತರಣಿಕೆಯಲ್ಲಿಮತ್ತೆ ಬದುಕಾಗುತ್ತದೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಚಳಿಯಾಗುತ್ತದೆಹೂವರಳಿಸಿ ಕಾಯಾಗಿಹಣ್ಣಾಗುತ್ತದೆನೇರಾನೇರ ಆಪ್ತತೆಸೇರಿ ಎಲೆ ಹಸಿರಾಗಿಬೇರು ಮರವಾಗಿ ಎತ್ತರಕ್ಕೆಬೆಳೆದು ಬಿಡುತ್ತದೆ ಎಲ್ಲವೂ ಸರಳ ನೇರಪ್ರಶ್ನೆಗಳು ಉತ್ತರಗಳುಕಾಲದ ಸಾಗುವಿಕೆಗೆಜೊತೆಯಾದಷ್ಟು ಹಿತಇದ್ದು ಇದ್ದಂತೆ ಇರುವಜಗವದು ಆಪ್ತ -ನಾಗರಾಜ ಬಿ. ನಾಯ್ಕ , ಹುಬ್ಬಣಗೇರಿ. ಕುಮಟಾ....
ನಿಮ್ಮ ಅನಿಸಿಕೆಗಳು…