ಭವದ ಸಾರ
ಮಣ್ಣ ಕಣದ ಧೀಮಂತ
ನಿಲುವು ತಾಳಿ ನಿಲ್ಲುವುದು
ಸಾರ ಸತ್ವ ಸಂಯಮದ
ಒಲವ ಉತ್ತಿ ಬೆಳೆವುದು
ಸೋತ ಸೋಲಿಗೆ ಸಹಜ ವಿರಾಮ
ಅರಿವಿನ ಹರಿವ ಲಹರಿಗೆ
ಗೆಲುವು ಪೂರ್ಣತೆಗೂ ಹಾಗೆ
ಒಂದು ನಿಲ್ಲುವ ಪೂರ್ಣವಿರಾಮ
ಅಂತರಂಗದ ಅಸ್ಮಿತೆಯೊಳಗೆ
ಮಣ್ಣ ಜೀವಿತದ ಉಳಿವು
ಹಸಿರ ಕಾಯ್ವ ನೆಲದೊಳಗೆ
ತ್ಯಾಗ ಬಲದ ಗೆಲುವು
ಮತ್ತೆ ಮತ್ತೆ ಕೇಳಬೇಕು
ನೆಲದ ಪಿಸುಮಾತಿನ ಪದವ
ಪರಿ ಪರಿಯ ಸೊಬಗು ನೋಟ
ತುಂಬಿ ತುಳುಕಲಿ ಈ ಜಗವ
–ನಾಗರಾಜ ಬಿ.ನಾಯ್ಕ, ಕುಮಟಾ.
Super ಒಳ್ಳೇ ಸಂದೇಶ
ಧನ್ಯವಾದಗಳು
ಒಳ್ಳೆಯ ಸಂದೇಶ ನೀಡಿರುವ ಕವನ..ಸಾರ್
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಚಂದದ ಕವನ. “ಮತ್ತೆ ಮತ್ತೆ ಕೇಳಬೇಕು ನೆಲದ ಪಿಸುಮಾತಿನ ಪದವ….” ಅರ್ಥಗರ್ಭಿತವಾದ ಸಾಲುಗಳು ಮನಮುಟ್ಟುವಂತಿವೆ.
ಧನ್ಯವಾದಗಳು ತಮ್ಮ ಓದಿಗೆ