ಮೌನವೂ ಮಾತಾದರೆ
ನಮ್ಮೊಳಗಿನ ಮೌನವೂ
ಮಾತಾಗಬೇಕಂತೆ
ಕವಿತೆ ಹುಟ್ಟಂತೆ ಮೌನ
ನೋವಿನ ನಡಿಗೆಯಂತೆ
ಆಗಸದಿ ತೇಲೋ
ಚಂದಿರನ ನೆರಳು
ಅದರ ಮೇಲಂತೆ
ರವಿಯ ಕಿರಣದ
ಮೊದಲ ಸ್ಪರ್ಶ
ಮೌನದ ಮೇಲಂತೆ
ಮೌನವೂ ವಿಶ್ವರೂಪ
ಕಾಲ ಭಾವಗಳ
ಮೀರಿ ನಿಂತಾಗ
ಹಾಡುವ ಗೂಡು
ಮಲಗಿದ ತೊಟ್ಟಿಲು
ಹೂವಲ್ಲಿ ಅಡಗಿ ಕುಂತ
ಜೀವದ ನಗುವು ಹೂವಂತೆ
ಮುತ್ತಂತೆ ಬಂದಿಳಿವ
ಆಗಸದ ಇಬ್ಬನಿ
ಭತ್ತದ ತೆನೆ ಹೊತ್ತ
ಹಸಿವೆಯ ಮುನ್ನುಡಿ
ಎಲ್ಲವೂ ಮಾತಾಗಬೇಕಂತೆ
ಮೌನದ ನಗುವಂತೆ
-ನಾಗರಾಜ ಬಿ.ನಾಯ್ಕ,
ಹುಬ್ಬಣಗೇರಿ, ಕುಮಟಾ.
ಸರಳವೆನಿಸಿದರೂ ಅರ್ಥಪೂರ್ಣ ವಾದ ಕವನ ಸಾರ್..ಚೆನ್ನಾಗಿ ದ
ಧನ್ಯವಾದಗಳು ತಮ್ಮ ಓದಿಗೆ
ಸರಳ, ಸುಂದರ ಕವಿತೆ
ಧನ್ಯವಾದಗಳು ತಮ್ಮ ಓದಿಗೆ……
ಸುಂದರ ಕವನ….ಬಹಳ ಅರ್ಥಗರ್ಭಿತ ಸಾಲುಗಳು
ಮೌನ ಮತ್ತು ಮಾತುಗಳ ಮಹತ್ವವನ್ನು ತಿಳಿಸಿಕೊಡುವ ಅರ್ಥಪೂರ್ಣ ಕವಿತೆ