ನೇರಾನೇರ
ಪ್ರಕೃತಿಯ ನೇರಾನೇರ
ಮಾತುಗಳೆಲ್ಲವೂ
ಮಳೆಯಾಗುತ್ತದೆ
ಹೊಳೆಯಾಗಿ ಇಳೆ
ನಗುತ್ತದೆ ಕಾಲ ಸಮಯಕ್ಕೆ
ಪ್ರಕೃತಿಯ ನೇರಾನೇರ
ಮಾತುಗಳೆಲ್ಲವೂ
ಬಿಸಿಲಾಗುತ್ತದೆ
ಬೆಳಕಾಗುತ್ತದೆ ಬೆಳಗು
ಸಂಜೆಗಳ ಅವತರಣಿಕೆಯಲ್ಲಿ
ಮತ್ತೆ ಬದುಕಾಗುತ್ತದೆ
ಪ್ರಕೃತಿಯ ನೇರಾನೇರ
ಮಾತುಗಳೆಲ್ಲವೂ
ಚಳಿಯಾಗುತ್ತದೆ
ಹೂವರಳಿಸಿ ಕಾಯಾಗಿ
ಹಣ್ಣಾಗುತ್ತದೆ
ನೇರಾನೇರ ಆಪ್ತತೆ
ಸೇರಿ ಎಲೆ ಹಸಿರಾಗಿ
ಬೇರು ಮರವಾಗಿ ಎತ್ತರಕ್ಕೆ
ಬೆಳೆದು ಬಿಡುತ್ತದೆ
ಎಲ್ಲವೂ ಸರಳ ನೇರ
ಪ್ರಶ್ನೆಗಳು ಉತ್ತರಗಳು
ಕಾಲದ ಸಾಗುವಿಕೆಗೆ
ಜೊತೆಯಾದಷ್ಟು ಹಿತ
ಇದ್ದು ಇದ್ದಂತೆ ಇರುವ
ಜಗವದು ಆಪ್ತ
-ನಾಗರಾಜ ಬಿ. ನಾಯ್ಕ , ಹುಬ್ಬಣಗೇರಿ. ಕುಮಟಾ.
ಸುಂದರ ಕವನ
ಧನ್ಯವಾದಗಳು
ಇದ್ಧು ಇದ್ದಂತೆ ಇರುವ ಜಗವದು ಆಪ್ತ ಎನ್ನುವ ನುಡಿ ಆಪ್ತವೆನಿಸಿತು.
ಕವನ ಅರ್ಥವತ್ತಾಗಿದೆ.
ಧನ್ಯವಾದಗಳು
ಸರಳ ಸುಂದರ…ಕವನ..ಸಾರ್
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ನೇರಾನೇರಕೆ ಆಯ್ದುಕೊಂಡ “ಪ್ರಾಕೃತಿಕ ಪರಿಕಲ್ಪನೆ” ಇಷ್ಟವಾಯಿತು ಕವಿಗಳೇ, ಚೆನ್ನಾಗಿದೆ.
ಸರ್ ಧನ್ಯವಾದಗಳು ತಮ್ಮ ಆಪ್ತ ಪ್ರತಿಕ್ರಿಯೆಗೆ
ಅರ್ಥಪೂರ್ಣ ಕವನ. ಅಭಿನಂದನೆ ಸರ್.
ಧನ್ಯವಾದಗಳು ತಮ್ಮ ಓದಿಗೆ