ಪಯಣ
ಹಕ್ಕಿಯ ಗರಿಯೊಳು
ತುಂಬಿದೆ ಬಾನಿಗೆ
ಹಾರುವ ಕನಸಿನ ಪಯಣ
ಮೋಡವ ದಾಟಿ
ನಭವನು ಸೇರಿ
ಚುಕ್ಕಿಗಳೊಡನೆ
ಆಡುವ ಬದುಕಿನ ಕಥನ
ನೋವಿಗೆ ನಲಿವಿಗೆ
ಯೋಚನೆಯಿರದ
ಭಾವಕೆ ಬದುಕಿಗೆ
ಎಣೆಯೇ ಇರದ
ಸೊಬಗಿಗೆ ಸೊಲ್ಲಿಗೆ
ಸವಿ ಮಾತಾದ ವದನ
ಬಾಳದು ಸೊಬಗು
ಬುವಿಯದು ಬೆರಗು
ಹಕ್ಕಿಯ ಹಾಡು
ಹಾಡಿನ ಗೂಡು
ಚೆಂದದ ಬದುಕಿನ
ನಾಳೆಯ ನೋಡು
-ನಾಗರಾಜ ಬಿ.ನಾಯ್ಕ, ಕುಮಟಾ
ಸರಳ ಸುಂದರ ಕವನ ಚಂದವಾಗಿ ಬಂದಿದೆ ಸಾರ್
ಧನ್ಯವಾದಗಳು
ಚಂದದ ಕವನ
ಧನ್ಯವಾದಗಳು…..
Nice poem
ಧನ್ಯವಾದಗಳು ತಮ್ಮ ಓದಿಗೆ
ಹಕ್ಕಿಯಂತೆ ನಭದತ್ತ ಹಾರಿ ಯೋಚನೆಯಿರದ ಭಾವದ ಬದುಕಿನತ್ತ ಕನಸಿನ ಪಯಣ… ಸೊಗಸಾದ ಭಾವಪೂರ್ಣ ಕವನ.
ಧನ್ಯವಾದಗಳು ತಮ್ಮ ಓದಿಗೆ