ಬೆರಗು
ಬದುಕ ನಗುವಿಗೆ
ತುಂಬಿದೆ ನೂರು ಅರ್ಥ
ದಿನದ ಉಳಿವಿಗೆ
ಸಿಗುವುದು ನಾನಾರ್ಥ
ಭಾವ ನಮ್ಮ ಒಲವಿಗೆ
ಬಿಂಬ ಕಾಣುವ ಪ್ರತಿಬಿಂಬಕೆ
ಚಿಗುರು ಹಾಸಿನ ಹಸಿರಿಗೆ
ಮಣ್ಣ ನವ ಸಂತಸಕೆ
ಬೆಳಗು ಬೆರಗಿನ ಮೌನ
ಕಿರಣದ ಹೊಂಗಿರಣ
ಮುಸ್ಸಂಜೆ ತುಂಬು ಗಗನ
ಗಾಳಿ ತಂಗಾಳಿಯ ಚರಣ
ಗೂಡಿಗೊಂದು ಚಿಲಿಪಿಲಿ
ಹಾಡಿಗೊಂದು ಸರಿಗಮ
ಶರಧಿಗೊಂದು ಮನದಲಿ
ಮಾತೊಂದು ಅನುಪಮ
ನೋಟದಿ ಉಳಿವ
ಸಹಜತೆ ಚೆಲುವು
ಸಾಧನೆ ಮೆರೆದ
ಬಾಳದು ಗೆಲುವು
-ನಾಗರಾಜ ಬಿ.ನಾಯ್ಕ, ಕುಮಟಾ.
ಸರಳ ಸುಂದರ ಕವನ ಸಾರ್
ತಮ್ಮ ಓದಿಗೆ ಧನ್ಯವಾದಗಳು……
ಚೆನ್ನಾಗಿದೆ ಕವನ
ತಮ್ಮ ಓದಿಗೆ ಧನ್ಯವಾದಗಳು
ಭಾವಪೂರ್ಣವಾದ ಕವನ ಬಹಳ ಚೆನ್ನಾಗಿದೆ.
ಆಪ್ತ ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು