ಕಾಲುದಾರಿ
ಕಾಲು ದಾರಿಯ ಕವಲು
ಮನುಜನ ಮನದಂತೆ
ದಾಟಿ ದಾಟಿ ಸಾಗಲು
ಬದುಕು ಸಹಜ ಹಾಡಂತೆ
ಯಾರೋ ಸಾಗಿದ ಹೆಜ್ಜೆ
ಗುರುತು ಹಾಕಿದಂತಿದೆ
ಕಾಲು ದಾರಿಯೊಂದು
ತಾನೇ ಹುಟ್ಟಿಕೊಂಡಿದೆ
ಕಂಡ ಕಣ್ಣಿಗೆಲ್ಲಾ ದಾರಿ
ಸಾಗಿ ಹೋಗಲು
ಹೋಗುವಾಗಲೆಲ್ಲಾ ಒಮ್ಮೆ
ತಿರುಗಿ ನೋಡಲು
ದಾರಿಗೂ ಒಂದು ಮೌನ
ನಗುವಿನ ಒಲವಿದೆ
ಸಾಗಿದ ನಂತರ ಕುಳಿತು
ಮಾತಾಡುವ ಗೆಲುವಿದೆ
ಎಲ್ಲೇ ಸಾಗಿ ಹೋದರೂ
ಅಲ್ಲೊಂದು ಕಾಲುದಾರಿ
ಕಂಡಾಗಲೆಲ್ಲಾ ದಾರಿಯ
ತೋರುವ ಆಪ್ತ ದಾರಿ
-ನಾಗರಾಜ ಬಿ.ನಾಯ್ಕ, ಕುಮಟಾ
ಕವನ ಚೆನ್ನಾಗಿ ದ ಸಾರ್
ಧನ್ಯವಾದಗಳು
ಚೆನ್ನಾಗಿದೆ ಕವನ
ಧನ್ಯವಾದಗಳು
ಆಪ್ತವೆನಿಸುವ ಕಾಲುದಾರಿಯಲ್ಲಿ ನಾವೂ ಸಾಗೋಣ…
ಕವನವೂ ಆಪ್ತವೆನಿಸಿತು.
ಧನ್ಯವಾದಗಳು ತಮ್ಮ ಓದಿಗೆ
ಕಾಲುದಾರಿ ಬಾಳದಾರಿಯ ಕೈಮರವೂ ಆಗಬಹುದು. ಚಂದದ ಕವಿತೆ.
ಧನ್ಯವಾದಗಳು ತಮ್ಮ ಓದಿಗೆ
ಪ್ರತಿಯೊಬ್ಬ ಪಯಣಿಗ ನಿಗೂ ಬದುಕಿನಲ್ಲಿ ಎದುರಾಗುವ ಕವಲು ದಾರಿಗಳಲ್ಲಿ ಒಂದನ್ನು ಆರಿಸುವುದು ಕಷ್ಟ ಸಾಧ್ಯವೇ
ಧನ್ಯವಾದಗಳು ತಮ್ಮ ಓದಿಗೆ