Author: Hema Mala

9

ಎಲ್ಲಿ ಹೋದಿರಿ ತಳ್ಳು ಗಾಡಿಗಳೆ.. ?

Share Button

ಎರಡು ದಶಕಗಳ ಹಿಂದೆ,  ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು. ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ  ನೆರೆಹೊರೆಯವರೂ...

13

ಕುದನೆಕಾಯಿ ನಾಮಾವಳಿ!

Share Button

ಕೆಲವೊಮ್ಮೆ ಗುಡ್ಡಗಾಡು, ಹಳ್ಳಿಮಾರ್ಗಗಳಲ್ಲಿ ನಡೆಯುವಾಗ ಹಲವಾರು ಔಷಧೀಯ ಸಸ್ಯಗಳು, ಅಡುಗೆಗೆ ಬಳಸಬಹುದಾದ ಕಾಡು ಸೊಪ್ಪು,ಹೂ ಗಳು, ಕಾಯಿ-ಹಣ್ಣುಗಳು, ಹೂಗಳು ಕಾಣಸಿಗುತ್ತವೆ. ಹೀಗೆ ಹಲವಾರು ಬಾರಿ ಚಾರಣ ಮುಗಿಸಿ ಬರುವಾಗ ನನ್ನ ಬ್ಯಾಗ್ ನಲ್ಲಿ ಕುದನೆಕಾಯಿ ಇರುತ್ತದೆ! ಹೀಗಾಗಿ “ನೀವು ಬಿಡಿ, ನಾರು, ಬೇರು,ಸೊಪ್ಪು, ಹೂ, ಕಾಯಿ, ತಿರುಳು, ಸಿಪ್ಪೆ,ಬೀಜ...

2

ಕಾಶಿಯಾತ್ರೆ.. ಗಂಗಾರತಿ.. ಭಾಗ – 3/3

Share Button

ತಂಡದ ಎಲ್ಲಾ ಸದಸ್ಯರು ಬಂದ ಮೇಲೆ ಹೋಟೆಲ್ ಗೆ ವಾಪಸ್ಸಾಗಿ ಊಟ ವಿಶ್ರಾಂತಿ ಮುಗಿಸಿದೆವು. ಅಂದಿಗೆ ನಮ್ಮ ಎರಡು ವಾರದ ಯಾತ್ರೆಯ ಕೊನೆಯ ದಿನವಾಗಿತ್ತು. ಹೆಚ್ಚಿನವರು ಅಂದೇ ರೈಲಿನಲ್ಲಿ ಹೊರಡಲಿದ್ದರು. ಮೈಸೂರಿನಿಂದ ಬಂದಿದ್ದ ಗೆಳತಿ ಭಾರತಿ, ಅಮ್ಮ ಮತ್ತು ನಾನು ಮರುದಿನ ಹೊರಡಲಿದ್ದುದರಿಂದ , ಆ ದಿನ...

2

ಉ-ಉಗಿಬಂಡಿ ? ಇಲ್ಲಿದೆ..

Share Button

ಒಂದನೆ ತರಗತಿಯಲ್ಲಿ ಅ-ಅರಸ, ಆ- ಆನೆ….ಹೀಗೆ ಮುಂದುವರಿದು ಉ-ಉಗಿಬಂಡಿ ಎಂದು ಉರು ಹಾಕಿಯಾಗಿದೆ. ಆದರೆ ಈಗಿನ ಲೊಕೊಮೋಟಿವ್ ಚಾಲಿತ ಟ್ರೈನ್ ಗಳ ಮಧ್ಯೆ ನೀರಿನ ಉಗಿಯಿಂದ ಚಲಿಸುವ ‘ಉಗಿಬಂಡಿ’ ನೋಡಲು ಸಿಗುವುದು ಬಲು ಅಪರೂಪ. ಊಟಿ ಮತ್ತು ಮೆಟ್ಟುಪಾಳ್ಯಂ ಮಧ್ಯೆ ಒಂದು ಉಗಿಬಂಡಿ ಓಡುತ್ತದೆ. ಇದು ಊಟಿಯಿಂದ...

3

ಕಾಶಿಯಾತ್ರೆ.. ಗಂಗಾರತಿ.. ಭಾಗ -2/3

Share Button

ಮಣಿಕರ್ಣಿಕಾ ಘಾಟ್ ನ ಪಕ್ಕದಲ್ಲಿ ದೋಣಿಯಿಂದಿಳಿದು, ಮೆಟ್ಟಿಲುಗಳನ್ನು ಹತ್ತಿ, ವಾರಣಾಸಿಯ ಗಲ್ಲಿಗಳಲ್ಲಿ ನಡೆಯಲಾರಂಭಿಸಿದೆವು. ವಾರಣಾಸಿ ಭಾರತದ ಪುರಾತನ ನಗರಿ . ಹಳೆಯ ಕಟ್ಟಡಗಳ ನಡುವೆ ಎಲ್ಲೆಲ್ಲೂ ಗಲ್ಲಿಗಳೇ ಕಾಣಿಸುತ್ತಿದ್ದುವು. ಪೂಜಾ ಪರಿಕರಗಳು, ಬಟ್ಟೆಬರೆ ಮತ್ತು ಅಲಂಕಾರಿಕ ವಸ್ತುಗಳನ್ನು ಮಾರುವ ಪುಟ್ಟ ಅಂಗಡಿಗಳು ಎಲ್ಲಾ ಗಲ್ಲಿಗಳಲ್ಲಿಯೂ ಇದ್ದುವು. ಇಕ್ಕಟ್ಟಿನ...

4

ಕಾಶಿಯಾತ್ರೆ.. ಗಂಗಾರತಿ.. ಭಾಗ -1/3

Share Button

ಉತ್ತರ ಭಾರತ ಪ್ರವಾಸದಲ್ಲಿದ್ದ ನಮ್ಮ ತಂಡ 27 ಫೆಬ್ರವರಿ 2017 ರಂದು ವಾರಣಾಸಿಯ ದರ್ಶನಕ್ಕೆ ಅಣಿಯಾಗಿತ್ತು. ಅಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನ ಹೆಸರು ಪದ್ಮಿನಿ ಇಂಟರ್ನ್ಯಾಶನಲ್. ನಮ್ಮ ಟ್ರಾವೆಲ್ಸ್ ನ ಮುಖ್ಯಸ್ಥ ಗಿರೀಶ್ ಅವರು ಎಲ್ಲರನ್ನೂ ಉದ್ದೇಶಿಸಿ “ ನಾವಿನ್ನು ಕಾಶಿಗೆ ಹೋಗ್ತೀವಿ. ಅಲ್ಲಿ ಕ್ಯಾಮೆರಾ,...

12

ಮಿಂಚಿನ ಓಟದಲ್ಲಿ ನಾನು!

Share Button

  ‘ಮೈಸೂರುಮಲ್ಲಿಗೆ’ ಸಿನೆಮಾದಲ್ಲಿ ಬರುವ ಒಂದು ದೃಶ್ಯ ಹೀಗಿದೆ. ಸತ್ಯಾಗ್ರಹಕ್ಕೆ ಸಂಬಂಧಿಸಿದ ಕರಪತ್ರಗಳನ್ನು ತನ್ನ ಬಳಿ ಇರಿಸಿಕೊಂಡಿದ್ದ ಸತ್ಯಾಗ್ರಹಿಯನ್ನು ಪೋಲೀಸರು ಬೆನ್ನಟ್ಟುತ್ತಾರೆ. ಕರಪತ್ರಗಳ ಗಂಟನ್ನು ‘ಬಳೆಗಾರ ಚೆನ್ನಯ್ಯ’ನತ್ತ ಎಸೆದು ಸತ್ಯಾಗ್ರಹಿ ಓಡುತ್ತಾನೆ,ಪೋಲೀಸರು ಹಿಂಬಾಲಿಸುತ್ತಾರೆ. ಕೊನೆಗೆ ಆತನನ್ನು ತಪಾಸಣೆ ಮಾಡಿದಾಗ ಕರಪತ್ರಗಳೇನೂ ಸಿಗುವುದಿಲ್ಲ. ಪೆಚ್ಚಾದ ಪೋಲೀಸರು “ನೀನು ಯಾಕೆ...

3

ಹಲಸಿನ ಹಪ್ಪಳ ತಯಾರಿ

Share Button

ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 8

Share Button

 ಮರಳಿ ಪೋಖ್ರಾದತ್ತ… ಹಿಂತಿರುಗಿ ಬರುವ ದಾರಿಯಲ್ಲಿ ಭಾರತಿ ಮತ್ತು ನಾನು ಹೋಟೆಲ್ ಒಂದರಲ್ಲಿ ನೂಡಲ್ಸ್, ಸಾಂಡ್ ವಿಚ್ ತಿಂದು   ಜೀಪಿನತ್ತ ಬಂದೆವು.  ನಮ್ಮೊಡನೆ ಬಂದಿದ್ದ ಹಿರಿಯರೊಬ್ಬರಿಗೆ ಬಹಳ ಸುಸ್ತಾಗಿತ್ತು. ಅವರಿಗೆ ಸ್ವಲ್ಪ ನೀರು ಕುಡಿಸಿ, ನಮ್ಮ ಬಳಿ ಇದ್ದ ಒಣಹಣ್ಣುಗಳು ಮತ್ತು  ಚಾಕೊಲೇಟ್ ತಿನ್ನಲು ಕೊಟ್ಟೆವು, ನಮ್ಮ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 7

Share Button

ಬೆಳಗ್ಗೆ 0915 ಗಂಟೆಗೆ ಮುಕ್ತಿನಾಥ ತಲಪಿದೆವು (22/02/2017). ಜೀಪಿನಿಂದ ಇಳಿದ ತಕ್ಷಣ, ಕಡಿಮೆ  ಆಮ್ಲಜನಕದ ಅನುಭವವಾಯಿತು. ಹಿಮ ಹೊದ್ದ ಬೆಟ್ಟಗಳ ನಡುವೆ ಸ್ವಲ್ಪ ಸಮತಟ್ಟಾದ ದಾರಿ ಮತ್ತು ಕೆಲವು ಮೆಟ್ಟಿಲುಗಳುಳ್ಳ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದೆವು. ನಾಲ್ಕು ಹೆಜ್ಜೆ ಸಡೆಯುವಷ್ಟರಲ್ಲಿ ಸುಸ್ತಾಯಿತು. ಸುಮಾರು 100 ಅಡಿ ನಡೆಯುವಷ್ಟರಲ್ಲಿ ಶರೀರ...

Follow

Get every new post on this blog delivered to your Inbox.

Join other followers: