Author: Hema Mala

3

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 4

Share Button

ದಿಲ್ಲಿಯಿಂದ ‘ಕಟ್ರಾ’ ನಗರದತ್ತ ನಮ್ಮ ಮುಂದಿನ ಪಯಣ ದಿಲ್ಲಿಯಿಂದ  ಜಮ್ಮು ಕಾಶ್ಮೀರದ ‘ಕಟ್ರಾ’ನಗರಕ್ಕೆ. ಸಂಜೆ 0530 ಗಂಟೆಗೆ ದಿಲ್ಲಿಯಿಂದ ಹೊರಡುವ  ಶ್ರೀ ಶಕ್ತಿ ಎ‍ಕ್ಸ್ ಪ್ರೆಸ್ ರೈಲು ಗಾಡಿಯನ್ನು ಹತ್ತಿ ಪ್ರಯಾಣಿಸಿದೆವು. ಸುಮಾರು 70  ಕಿ.ಮೀ ಚಲಿಸಿದ ರೈಲು ಇದ್ದಕ್ಕಿದ್ದಂತೆ   ಒಂದು ಗಂಟೆಗೂ ಹೆಚ್ಚು ಕಾಲ ತಟಸ್ಥವಾಯಿತು....

0

ಎಳೆ ಹಲಸು ರುಚಿ ಸೊಗಸು…

Share Button

  ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಹಲಸಿನ ಮರಗಳಲ್ಲಿ   ಎಳೆ ಹಲಸಿನಕಾಯಿಗಳು ಮೂಡುತ್ತವೆ. ಈ ಹಂತದಲ್ಲಿ ಇದನ್ನು ‘ಗುಜ್ಜೆ’ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ವಿವಿಧ ಅಡುಗೆಗಳು ಅಚ್ಚುಮೆಚ್ಚು.  ಎಳೆ ಹಲಸಿನಕಾಯಿ/ಗುಜ್ಜೆಯ ಅಡುಗೆಯ ಸವಿ  ಹಾಗೂ ಅದನ್ನು ಹೆಚ್ಚಲು ಬೇಕಾದ ಕುಶಲತೆ –...

12

ಧಾರವಾಡ ಸಾಹಿತ್ಯ ಸಂಭ್ರಮ – 2018

Share Button

  ಹೊಸದಾಗಿ ಬಿಡುಗಡೆಯಾಗಲಿರುವ ಬಹುಚರ್ಚಿತ ಸೂಪರ್ ಹಿಟ್  ಚಲನಚಿತ್ರವು ಪ್ರದರ್ಶಿಸಲ್ಪಡುವ ದಿನಾಂಕವನ್ನು ಮುಂಚಿತವಾಗಿ ಗಮನಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿ, ಪ್ರಥಮ ಪ್ರದರ್ಶನದಲ್ಲಿಯೇ ಸಿನೆಮಾ ನೋಡಿ ಗೆದ್ದೆವೆಂಬಂತೆ  ಬೀಗುವವರಿರುತ್ತಾರೆ. ಆಸಕ್ತರಿಗೆ  ಅದೊಂದು ಸಂಭ್ರಮ ಹಾಗೂ ಸಿನೆಮಾದ ಯಶಸ್ಸಿನ ಮಾನದಂಡವೂ ಹೌದು. ಆದರೆ ಸರ್ವವೂ ಆಂಗ್ಲಮಯವಾಗುತ್ತಿರುವ ಈಗಿನ ದಿನಗಳಲ್ಲೂ,  ಕನ್ನಡ ಸಾಹಿತ್ಯ...

1

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 3

Share Button

ದಿಲ್ಲಿಯಲ್ಲಿರುವ ‘ಸಾರಸ್ವತ ಸಾಂಸ್ಕೃತಿಕ ಮಂದಿರ’ 08 ಅಕ್ಟೋಬರ್ 2017 ರಂದು ಬೆಳಗ್ಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇಸ್ಟೇಷನ್ ತಲಪಿದ ನಮ್ಮನ್ನು ತಂಡದ ನಾಯಕರಾಗಿದ್ದ ಮಾರ್ತೇಶ್ ಪ್ರಭು ಅವರು ‘ಸಾರಸ್ವತ ಸಂಸ್ಕೃತಿ ಮಂದಿರ’ಕ್ಕೆ ಕರೆದೊಯ್ದರು. ಅಲ್ಲಿ ಸುಂದರವಾದ ಕೃಷ್ಣನ ಮಂದಿರವಿದೆ. ಯಾತ್ರಿಗಳಿಗೆ ಸ್ನಾನ, ವಿಶ್ರಾಂತಿಗೆ ಅನುಕೂಲಕರವಾದ ವ್ಯವಸ್ಥೆಯಿದೆ. ಈ ಮಂದಿರದಲ್ಲಿ...

2

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2

Share Button

ಪ್ರಯಾಣಕ್ಕೆ ಪೂರ್ವ ತಯಾರಿ ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ  ಪ್ರವಾಸ  ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ,  ವೈಷ್ಣೋದೇವಿ ಯಾತ್ರೆಯ ಬಗ್ಗೆ  ಕೇಳಿ ಸಂತಸವಾಯಿತು.  ಸಾಮಾನ್ಯವಾಗಿ ಪ್ರಯಾಣವನ್ನು  ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ...

7

ದೂರದ ಮಲೆಯ ಮೇಲೆ ‘ಜೈ ಮಾತಾದಿ’-ಭಾಗ 1

Share Button

ವೈಷ್ಣೋದೇವಿ ನಮ್ಮನ್ನು ಕರೆದಳು! ಕೆಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಸಂದರ್ಭ ತಾನಾಗಿ ಬರುವುದಿಲ್ಲ, ಆ ಸ್ಥಳದಲ್ಲಿ ಆರಾಧಿಸಲ್ಪಡುವ ದೈವೀಶಕ್ತಿ ಕರೆದರೆ ಮಾತ್ರ ನಮಗೆ ದರ್ಶನದ ಅವಕಾಶ ಸಿಗುತ್ತದೆ ಎಂಬ ಪ್ರತೀತಿಯಿದೆ. ಇದೇ ರೀತಿ, ಭಾರತದ ಉತ್ತರ ತುದಿಯಲ್ಲಿರುವ   ಜಮ್ಮು-ಕಾಶ್ಮೀರ ರಾಜ್ಯದ ‘ಕಟ್ರಾ’ ಪ್ರದೇಶದ ತ್ರಿಕೂಟ...

4

ಕೃತಿ ಪರಿಚಯ: ವಿ.ಬಿ.ಅರ್ತಿಕಜೆ ಅವರ ‘ರಾಮ ನೀತಿ’ 

Share Button

ವಾಲ್ಮೀಕಿ ವಿರಚಿತ ರಾಮಾಯಣವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪವಿತ್ರ ಗ್ರಂಥ ರಾಮಾಯಣವನ್ನು ಶ್ರದ್ಧೆಯಿಂದ ಓದಿದರೆ ಅಥವಾ ದೃಶ್ಯ ಶ್ಯಾವ್ಯ ಮಾಧ್ಯಮಗಳ ಮೂಲಕ ಅರ್ಥಮಾಡಿಕೊಂಡರೆ, ಅರಿವಿನ ಹರವು ಹೆಚ್ಚುವುದರ ಜೊತೆಗೆ, ಮನೋರಂಜನೆ, ಮನಶ್ಶಾಂತಿ , ಸತ್ಸಂಗ ಹಾಗೂ ಪುಣ್ಯಪ್ರಾಪ್ತಿಯೂ ಆಗುತ್ತದೆ ಎಂಬ ನಂಬಿಕೆ ನಮ್ಮದು. ದೈನಂದಿನ ಮಾತುಕತೆಗಳಲ್ಲಿ...

6

ಸಿಂಗಾಡ್ ..ವಾಟರ್ ಚೆಸ್ಟ್ ನಟ್  

Share Button

  ನೆಲದ ಮೇಲೆ ಬೆಳೆಯುವ  ವಿವಿಧ ಹಣ್ಣು, ಕಾಯಿಗಳನ್ನೂ, ನೆಲದ ಕೆಳಗೆ ಬೆಳೆಯುವ ಹಲವಾರು ಗಡ್ಡೆಗೆಣಸುಗಳನ್ನೂಆಹಾರವಾಗಿ  ಬಳಸುವ ನಮಗೆ, ನೀರಿನಲ್ಲಿ ಬೆಳೆಯುವ ತರಕಾರಿಗಳು ಕಾಣಸಿಗುವುದು ಅಪರೂಪ.  ‘ವಾಟರ್ ಚೆಸ್ಟ್ ನಟ್’’  ನೀರಿನಲ್ಲಿ ಬೆಳೆಯುವ ವಿಶಿಷ್ಟ ತರಕಾರಿ. ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿ ತರಕಾರಿ ಮಾರುವವರ ಕೈಗಾಡಿಯಲ್ಲಿ  ಹಸಿರು ಮಿಶ್ರಿತ...

5

ಇದನ್ನು ಪಾಶ್ಚಾತ್ಯರಿಂದ ಕಲಿಯಬಹುದಲ್ಲ?

Share Button

  ಕೆಲವು ತಿಂಗಳ ಹಿಂದೆ ಜರ್ಮನಿಯ ವಿದ್ಯಾರ್ಥಿನಿಯೊಬ್ಬಳು ಸಾಂದರ್ಭಿಕವಾಗಿ, ನಮ್ಮ ಸಂಸ್ಥೆಗೂ ಭೇಟಿ ಕೊಟ್ಟಿದ್ದಳು. ಶ್ರೀಮಂತ ಉದ್ಯಮಿಯ ಮಗಳಾದರೂ, ತಮಿಳುನಾಡಿನ ಅನಾಥಾಲಯವೊಂದರಲ್ಲಿ ಒಂದೆರಡು ತಿಂಗಳ ಕಾಲ ಸ್ವಯಂಸೇವಕಿಯಾಗಿ ದುಡಿಯಲೆಂದು ಬಂದಿದ್ದಳು. ಅಲ್ಲಿ ಅವಳ ಜೀವನಶೈಲಿ ತೀರಾ ಸಾಮಾನ್ಯವಾಗಿತ್ತು. ಸಹಜವಾಗಿಯೇ, ಇವಳೇಕೆ ಇದನ್ನು ಆಯ್ಕೆ ಮಾಡಿಕೊಂಡಳು ಎಂಬ ಕುತೂಹಲದಿಂದ...

2

ಕರಿಘಟ್ಟದಲ್ಲಿ ಹಸಿರುಕ್ರಾಂತಿ

Share Button

ಆಧುನಿಕ ಜೀವನಶೈಲಿಗೆ  ಒಗ್ಗಿಕೊಂಡ ಜನರಿಗೆ  ತಿಂಗಳಿಗೆ ಒಮ್ಮೆಯಾದರೂ ಭಾನುವಾರದ ರಜಾದಿನದಂದು ಯಾವುದಾದರೂ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಚಾರಣ ಕೈಗೊಳ್ಳಬೇಕು ಅಥವಾ ಯಾವುದಾದರೂ ದೇವಾಲಯಕ್ಕೆ ಭೇಟಿ ಕೊಡಬೇಕು ಎನಿಸುತ್ತದೆ.   ಬಹಳಷ್ಟು ಸಂದರ್ಭಗಳಲ್ಲಿ ‘ಹಸಿರೇ ಉಸಿರು, ಕಾಡಿದ್ದರೆ ನಾಡು’ ಎಂಬ ಮಾತನ್ನು ಹೇಳುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಆದರೆ ಇದನ್ನು ಅನುಷ್ಟಾನಕ್ಕೆ...

Follow

Get every new post on this blog delivered to your Inbox.

Join other followers: