ಗಲ್ಲುಶಿಕ್ಷೆ ನಿಗದಿಯಾದವರು, ತಮ್ಮ ಅಂತಿಮ ಸಂಸ್ಕಾರಗಳನ್ನು ತಾವೇ ಮುಂಚಿತವಾಗಿ ಮಾಡಿ ನೇಣಿಗೆ ಸಿದ್ಧರಾಗುತಿದ್ದರಂತೆ.
ಇದಕ್ಕಾಗಿ ಜೈಲ್ ನ ಆವರಣದಲ್ಲಿ, ‘ಫಾಸಿ ರೂಂ’ ಪಕ್ಕದಲ್ಲಿ ಒಂದು ಜಾಗವನ್ನು ನಿಗದಿಪಡಿಸಿದ್ದಾರೆ.
ಸೆಪ್ಟೆಂಬರ್ 17,2010 ರಂದು, ಅಂಡಮಾನ್ ನ ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ . ಜೈಲಿನ ಆವರಣದಲ್ಲಿ , ಪ್ರತಿದಿನ ಸಂಜೆಯ ಸಮಯ ‘ಧ್ವನಿ -ಬೆಳಕು’ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ. ತೀರಾ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮವನ್ನು ಆಲಿಸಿ-ವೀಕ್ಷಿಸಿ ಹೊರ ಬರುವಾಗ, ನಮ್ಮ ಸ್ವಾತಂತ್ಯ್ರ ಹೋರಾಟಗಾರರು ಮಾಡಿದ ತ್ಯಾಗ, ಅನುಭವಿಸಿದ ಹಿಂಸೆ, ಕೆಲವರಿಗೆ ಗಲ್ಲುಶಿಕ್ಷೆ-ಅವರಿಗೆ ಆದ ಹಸಿವು, ನಿರಾಶೆ, ನೋವು, ಅಸೌಖ್ಯತೆ, ಏಕಾಂಗಿತನ- ಇವಕ್ಕೆಲ್ಲ ಕಾರಣವಾದ ಬ್ರಿಟಿಷ್ ಸರಕಾರ, ಜೈಲರ್ ‘ಡೇವಿಡ್ ಬಾರಿ’ಯ ಅಟ್ಟಹಾಸದ ನುಡಿಗಳು . .ಇವೆಲ್ಲ ಮನಸ್ಸಿಗೆ ತುಂಬಾ ವೇದನೆಯನ್ನು ಉಂಟುಮಾಡುತ್ತವೆ. ಈತನ ಹಿಂಸೆ ತಡೆಯಲಾರದೆ ಕೆಲವರು ಮಾನಸಿಕವಾಗಿ ಅಸ್ವಸ್ಥರಾದರಂತೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡರಂತೆ.
ಇಂತಹ ಕಂಗೆಡಿಸುವ ವಾತಾವರಣದಲ್ಲೂ ಸ್ವಾತಂತ್ಯ್ರ ಯೋಧರ ‘ವಂದೇ ಮಾತರಂ‘ ಎಂಬ ಕೆಚ್ಚಿನ ನುಡಿಗಳು ಕಳೆಗುಂದಲಿಲ್ಲ.
ಇಂತಹ ಯೋಧರ ಪರಿಶ್ರಮ, ತ್ಯಾಗ, ಬಲಿದಾನಗಳಿಂದಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಆರಾಮವಾಗಿ ಅನುಭವಿಸುತ್ತಿರುವ ನಾವು, ಅವರ ಋಣವನ್ನು ಕಿಂಚಿತ್ತಾದರೂ ತೀರಿಸಲು ಅರ್ಹರೆ? ಈ ಗುಂಗಿನಲ್ಲೇ ಸೆಲ್ಯೂಲರ್ ಜೈಲ್ ನ ಆವರಣದಿಂದ ಹೊರಬಂದಾಗ ನನಗೆ ಅನಿಸಿದ್ದು ಇಷ್ಟು : ಇನ್ನು ಕಾಶಿ, ಪ್ರಯಾಗ ಇತ್ಯಾದಿ ಕ್ಷೇತ್ರಗಳಿಗೆ ಗದಿದ್ದರೂ ಅಡ್ಡಿಯಿಲ್ಲ, ಯಾಕೆಂದರೆ, ಅವಕ್ಕಿಂತಲೂ ಶ್ರೇಷ್ಠವಾದ, ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಕ್ಷೇತ್ರವನ್ನು ಸಂದರ್ಶಿಸಿದೆನೆಂಬ ಧನ್ಯತಾ ಭಾವ ಸಿದ್ದಿಸಿತು.
ತಮ್ಮ ಕಠಿಣ ಪರಿಶ್ರಮ, ತ್ಯಾಗ ಹಾಗೂ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ಯವನ್ನು ದೊರಕಿಸಿ ಕೊಟ್ಟ ಎಲ್ಲಾ ಸ್ವಾತಂತ್ಯ ಹೋರಾಟಗಾರರಿಗೆ ಅನಂತ ನಮನಗಳು.
ತುಂಬಾ ಮಾಹಿತಿಪೂರ್ಣ ಲೇಖನ! ನೆನೆಸಿಕೊಂಡರೆ ಬೇಜಾರಾಗುತ್ತದೆ 🙁
ಧನ್ಯವಾದಗಳು.
Hrudayasparshi lekana.
Great memory.
ಅಂಡಮಾನ್ ನೋಡುವಾಗ ಕಾಡುವುದು ಅಗಾಧ ನೋವಿನ ಅನುಭೂತಿ .ಧ್ವನಿ ಮತ್ತು ಬೆಳಕು ಕೇಳಿ ನೋಡಿ ಮುಗಿದು ಅಲ್ಲಿಂದ ಎದ್ದಾಗ ಅನುಭವಕ್ಕೆ ಬರುವ ವಿಚಿತ್ರ ಸಂಕಟ ಬದುಕಿಡಿ ಕಾಡುತ್ತದೆ .ಮಾತು ಮೂಕವಾಗಿ ನೋವು ಹೆಪ್ಪುಗಟ್ಟುತ್ತದೆ ..ನಿಜ ತಮ್ಮ ಬದುಕನ್ನು ಇಲ್ಲಿ ಹಿಂಸೆ ,ಯಾತನೆ ಅನುಭವಿಸಿ ಮುಗಿಸಿದ ಈ ಅಮೂಲ್ಯ ಜೀವಗಳು ನಡೆದ ಈ ನೆಲ ವಾರಣಾಸಿ, ಪ್ರಯಾಗಕ್ಕಿಂತ ಶ್ರೇಷ್ಠ ಜಾಗ.
ನೋವಿನಲ್ಲಿ ಅದ್ದಿದ ಕುಂಚ
ಬರೆದ ಚಿತ್ರವಿದು
ಸರಳುಗಳ ಮರೆಯಲಿ ನೊಂದ ಜೀವಿಗಳ
ಆರ್ತನಾಾದ ನಿಟ್ಟುಸಿರಿಗೆ ಸಾಕ್ಷಿಯಿದು
ಧನ್ಯವಾದಗಳು.
ಮಾನ್ಯರೇ, ನಿಜ ಅವರು ನಮಗಾಗಿ ಐಹಿಕ ಸುಖಗಳನ್ನೆಲ್ಲ ಮರೆತು ನಮಗಾಗಿ ಚಿತ್ರ ಹಿಂಸೆ ಅನುಭವಿಸಿ ಜೀವ ತೆತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪುಣ್ಯಕ್ಷೇತ್ರಗಳನ್ನು ಹುಡುಕುತ್ತ ಹೋಗುವ ಬದಲು ಇದೆ ಅಲ್ಲವೇ ನಮ್ಮೆಲ್ಲರ ಪುಣ್ಯ ಭೂಮಿ. ನೋಡಿ ಕ್ರುತಾರ್ತರಾಗೋಣ.
ಮನಸ್ಸಿಗೆ ತಾಗುವಂತಹ ಲೇಖನ. ಧನ್ಯವಾದ ಶ್ರೀಮತಿ ಹೇಮಾ. .
ತಮ್ಮ ಮನಸುಗಳು ಅತ್ಯಂತ ಸೂಕ್ಷ್ಮಮತಿ…..
ತಮ್ಮಷ್ಟು ಯೋಚಿಸಲಾಗದು…ಇಗೊ ನದೊಂದು ನಮನ….
Been there. Really dreadful.
ಸ್ವಾತಂತ್ರ್ಯ ಹೋರಾಟಗಾರರೆಂದರೆ ಒಂದಷ್ಟು ನೇತಾರರ ಹೆಸರುಗಳನ್ನು ಮಾತ್ರ ನೆನೆದು ಸ್ವಾತಂತ್ರ ದಿವಸದ ಆಚರಣೆಯ ಶಾಸ್ತ್ರವನ್ನು ಮುಗಿಸುವ ಈ ಜಮಾನದಲ್ಲಿ, ದೇಶಕ್ಕಾಗಿ ತಮ್ಮನ್ನೇ ತಾವು ತರ್ಪಣ ಕೊಟ್ಟ ಮಾದರಿ ಜೀವಗಳು ಎಲ್ಲೋ ಒಂದು ಕಡೆ ಅವಗಣಿಸಲ್ಪಡುತ್ತಿವೆಯೋ ಎಂದು ಸಂಶಯವಾಗುತ್ತದೆ.
ತಮ್ಮ ಈ ಸಾಂದರ್ಭಿಕ ಬರಹ ಅರ್ಥಪೂರ್ಣ. ಮನಸ್ಸು ಮಿಡಿಯಿತು. ದೇಶಕ್ಕಾಗಿ ತಮ್ಮನ್ನೇ ಬಲಿದಾನ ಕೊಟ್ಟ ವ್ಯಕ್ತಿಗಳಿಗೆಲ್ಲಾ ಸಲಾಂ!
ದೇಶ ಕ್ಕಾಗಿ ವೀರಸ್ವರ್ಗ ವೇರಿದ ಭಾರತ ಮಾತೆಯ ಪುತ್ರರ ಆತ್ಮಕ್ಕೆ ಶಾಂತಿ ಸಿಗಲಿ .ಧನ್ಯ ವಾದಗಳು.
ಆರು ವರ್ಷ ಆಗಿಯೇ ಹೋಯಿತಲ್ಲ ಹೇಮಾ, ಆದರೆ ನೆನಪುಗಳು ಮಾತ್ರ ಇನ್ನು ಹಸಿರಾಗಿಯೇ ಇದೆ. ಅಭೂತಪೂರ್ವ ಅನುಭವದ ನೆನಪು ಮಾಡಿದ್ದಕ್ಕೆ ವಂದನೆಗಳು.
ಹೌದು. ಕಾಲವನ್ನು ತಡೆಯೋರು ಯಾರು ಇಲ್ಲಾ…
ಉತ್ತಮ ಮಾಹಿತಿ..
Howdu maala nijawagaloo hrudaya sparshi anubhava Andaman jailinalli nodida light n sound show. Naavellaroo nijakku runigalu. Ella swatantrya horatagararigoo nanna bhakti poorvaka namanagalu.