ಹಾಲ್ ಆಫ್ ಫ಼ೇಮ್’

Share Button

         ಜಮ್ಮು ಕಾಶ್ಮೀರ ರಾಜ್ಯದ , ಲಡಾಕ್ ಜಿಲ್ಲೆಯಲ್ಲಿರುವ ಪ್ರಮುಖ ನಗರಿಯಾದ ‘ಲೇಹ್’ ನಲ್ಲಿ  ‘ ಹಾಲ್ ಆಫ್ ಫ಼ೇಮ್’ ಎಂಬ ಹೆಸರಿನ ಸೇನೆಯ  ವಸ್ತು ಸಂಗ್ರಹಾಲಯ ಇದೆ. ಕಾರ್ಗಿಲ್ ನಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿ ಲಭ್ಯ. ಯುದ್ಧಕ್ಕೆ  ಸಂಬಂಧಿಸಿದ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹುತಾತ್ಮರಾದ ಎಳೆ ವಯಸ್ಸಿನ  ಯೋಧರ ಭಾವಚಿತ್ರದ ಮುಂದೆ ನಿಂತು, ಅವರ ಸಾಧನೆ ಮತ್ತು ತ್ಯಾಗದ ವಿವರಗಳನ್ನು ಓದುವಾಗ ಗೌರವ, ಹೆಮ್ಮೆ ಹಾಗೂ ದು:ಖ ಏಕಕಾಲಕ್ಕೆ ಉಂಟಾಗುತ್ತದೆ.


ಇಲ್ಲಿ ಲೇಹ್- ಲಡಾಖ್ ನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಬಿಂಬಿಸುವ ಹಲವಾರು ಪೋಸ್ಟರ್ ಗಳಳನ್ನೂ ಪ್ರದರ್ಶನಕ್ಕಿರಿಸಲಾಗಿದೆ. ಮ್ಯೂಸಿಯಂನ ಒಂದು ಭಾಗದಲ್ಲಿ ಸೈನಿಕರೇ ನಿರ್ವಹಿಸುವ   ಸಣ್ಣ ಅಂಗಡಿಯೂ ಇದೆ. ಸ್ಥಳೀಯ ಮೊಹರುಳ್ಳ ಟೋಪಿ, ಟಿ-ಶರ್ಟ್ , ಪುಸ್ತಕಗಳು ಇತ್ಯಾದಿಗಳನ್ನು ಸ್ಮರಣಿಕೆಯಾಗಿ ಕೊಳ್ಳಬಹುದು.

-ಹೇಮಮಾಲಾ.ಬಿ
(19/09/2018 ರ ಮಂಗಳ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

3 Responses

  1. Pushpalatha Mudalamane says:

    ನಮ್ಮ ಸೈನಿಕರಿಗೆ ಜಯ ಹೋ.!

  2. Udaya Shankar Puranika says:

    ಅತ್ಯಂತ ಕಠಿಣವಾದ ಪರಿಸ್ಥಿತಿಯಲ್ಲಿ ನಮ್ಮ ದೇಶದ ರಕ್ಷಣೆ ಮಾಡುತ್ತಿರುವ ವೀರ ಯೋಧರಿಗೆ ನಮನಗಳು

  3. Pallavi Bhat says:

    ಹಾಲ್ ಓಫ್ ಫೆಮಿನಲ್ಲಿ ನಡೆಯುವ ಪರೇಡ್ ಈಗಲೂ ಕಣ್ಣಮುಂದಿದೆ . ನಿಜಕ್ಕೂ ಮರೆಯಲಾಗದ ಅನುಭವ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: