Monthly Archive: December 2015
ಕೆಲವರ ಮಾತುಗಳು ಒಂದೊಂದು ಸಾರಿ ಮನಸ್ಸನ್ನು ಘಾಸಿಗೊಳಿಸುವ ಕಾರಣ ಮೌನದ ಮೊರೆ ಹೋಗುತ್ತಾ, ಮಾತಿನ ಸೊಗಡಿರುವ ಪುಸ್ತಕಗಳೊಡನೆ ಸಂವಾದ ಮಾಡುವ ಸೂಕ್ಷ್ಮ ಸಂವೇದನೆಯ ಕಲ್ಲೇಶ್ ಕುಂಬಾರ್ ಕತೆ, ಕವಿತೆ, ವಿಮರ್ಶೆಯ ಜೊತೆಜೊತೆಗೆ ಆಗಾಗ ಒಂದಿಷ್ಟು ರೇಖಾಚಿತ್ರಗಳನ್ನು ಬರೆವ ಹವ್ಯಾಸ ಇರಿಸಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ರೇಖಾ...
ಅದೊಂದು ಮಹಾ ಶಿಖರ. ಮಳೆ, ಗುಡುಗು, ಸಿಡಿಲಿಗೆ ಜಗ್ಗದೆ ನಿಂತ ಮೇರು ಗಿರಿ. ತಾನೇ ಶ್ರೇಷ್ಠ ಎಂದು ಬೀಗುತ್ತಿತ್ತು. ಆರಡಿ ಮಾನವ ಬಂದ. ಗಿರಿಯ ಬುಡದಲಿ ಬಾಂಬ್ ಇಟ್ಟು, ಇಡೀ ಪರ್ವತವನ್ನೇ ನೆಲಸಮ ಮಾಡಿದ. ಅಭಿವ್ರದ್ಧಿ ಹೆಸರಲ್ಲಿ ನಗರ ಕಟ್ಟಿದ. ನಾನೇ ಶ್ರೇಷ್ಠ ಎಂದ ಮಾನವನೂ ಬೀಗತೊಡಗಿದ....
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯಿಂದ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಸಿಗುವ ‘ಬನ್ನಡ್ಕ’ ಎಂಬ ಊರಿನಲ್ಲಿ ‘ಸೋನ್ಸ್ ಫಾರ್ಮ್ ಇದೆ. ಕೃಷಿಯಲ್ಲಿ ಆಸಕ್ತಿ ಇರುವವರು, ಸಸ್ಯಶಾಸ್ತ್ರವನ್ನು ಅಭ್ಯಸಿಸುವವರು ಹಾಗೂ ಕೃಷಿಭೂಮಿ ಉಳ್ಳವರು , ಸೋನ್ಸ್ ಫಾರ್ಮ್ ಗೆ ಒಂದು ಬಾರಿ ಭೇಟಿ ಕೊಟ್ಟರೆ ಬಹಳಷ್ಟು ಉಪಯುಕ್ತ ಮಾಹಿತಿಗಳು ಲಭ್ಯವಾಗುವುದು. ಇತ್ತೀಚೆಗೆ...
ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮರ್ಥ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ ಮಿರಾಕಲ್ ಓನ್ ವೀಲ್. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ. ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ಈ...
6 ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಹಾಗೂ ಶತಮಾನಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲಬುರಗಿ ನಗರದಲ್ಲಿ ಹಲವಾರು ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ.ಅವುಗಳ ಬಗ್ಗೆ ಒಂದು ಕಿರು ಪರಿಚಯ ನೀಡುವೆ. ಕಲಬುರಗಿ ನಗರದ ಕೋಟೆ : ಕಲಬುರಗಿ ನಗರದಲ್ಲಿನ ಕೋಟೆಯು 1347 ರಲ್ಲಿ ನಿರ್ಮಿಸಿಲಾಗಿದೆ. ಕೋಟೆಯ ಒಳಗಡೆ ತುಂಬಾ ಮನಸೆಳೆಯುವ...
ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು ಕೈಲಿ ಬೀಸಣಿಗೆ ಗಾಳಿ ಹಾಕಿಕೊಳ್ಳುತ್ತ ಟೇಬಲ್ಲಿನ ಮೇಲಿದ್ದ ಪ್ಲೇಟಿನಿಂದ ಕಡಲೆ ಕಾಯಿ ಬೀಜ,...
ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು...
ಮೈಸೂರಿನ ರಂಗನತಿಟ್ಟು ಪಕ್ಷಿಧಾಮಕ್ಕೆ ನಿರ್ದಿಷ್ಟ ತಿಂಗಳುಗಳಲ್ಲಿ (ಸಾಮಾನ್ಯವಾಗಿ ಜನವರಿ- ಸೆಪ್ಟೆಂಬರ್) ಉಷ್ಣಪ್ರದೇಶಗಳಿಂದ ವಿವಿಧ ಹಕ್ಕಿಗಳು ಹಾರಿ ಬಂದಿಳಿಯುತ್ತವೆ, ಈ ತಂಪು ಪ್ರದೇಶದಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯ ನಂತರ ಅವುಗಳು ಮರಳಿ ತಮ್ಮ ನಾಡಿಗೆ ಹಾರುತ್ತವೆ. ಹಕ್ಕಿಗಳಂತೆಯೇ ಸಕಲ ಜೀವಿ ಚರಾಚರಗಳು ಕೂಡ. ಡಾರ್ವಿನ್‌ನ ವಿಕಾಸವಾದದಂತೆ...
ಅಂಕುಶ್ ಅಂತಿಮ ಪದವಿ ವಿದ್ಯಾರ್ಥಿ. ಸಿರಿವಂತ ಮನೆತನದ ಏಕೈಕ ಕುಡಿ. ತಾಯಿ ಮಹಾ ದೈವಭಕ್ತೆ, ತಂದೆ ಹಲವು ಕಂಪೆನಿಗಳ ಒಡೆಯ. ಯಾವತ್ತಿದ್ದರೂ ಪ್ರತಿಷ್ಠೆಗೆ ಬೆಲೆ ಕೊಡುವ ವ್ಯಕ್ತಿ. ಅಂಕುಶ್ ಬಹಳ ಆರಾಮಾಗಿ, ಕಷ್ಟ-ನಷ್ಟ ಏನೇಂಬುದೇ ಗೊತ್ತಿಲ್ಲದೆ ಬೆಳೆದ ಹುಡುಗ. ಅವನದೊಂದು ವಿಚಿತ್ರ ಗುಣ. ಎಲ್ಲರೂ ಸರಿ...
ಒಂದು ನಗುವಿಗಾಗಿ ವರುಷಗಟ್ಟಲೆ ಅತ್ತಿದ್ದಿದೆ! ಒಂದು ಗೆಲುವಿಗಾಗಿ ಸಾವಿರ ಸೋಲುಗಳ ಅಪ್ಪಿದ್ದಿದೆ! ಒಂದು ಗುಲಗಂಜಿ ಮಾನಕ್ಕಾಗಿ ಆನೆಯಷ್ಟು ಅವಮಾನ ಸಹಿಸಿದ್ದಿದೆ! ಪ್ರತಿ ಕವಿತೆ ಬರೆಯುವಾಗಲೂ ನನ್ನ ನಾನು ಕೊಂದು ಕೊಂಡಿದ್ದಿದೆ! – ಕು.ಸ.ಮಧುಸೂದನ್ ರಂಗೇನಹಳ್ಳಿ +11
ನಿಮ್ಮ ಅನಿಸಿಕೆಗಳು…