ಕಲಬುರಗಿ : ಪ್ರೇಕ್ಷಣೀಯ ಪ್ರವಾಸಿ ತಾಣಗಳು

Share Button

Nagaraj Bhadra

6 ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಹಾಗೂ  ಶತಮಾನಗಳ ಐತಿಹಾಸಿಕ  ಹಿನ್ನೆಲೆ ಹೊಂದಿರುವ  ಕಲಬುರಗಿ ನಗರದಲ್ಲಿ ಹಲವಾರು ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ.ಅವುಗಳ ಬಗ್ಗೆ ಒಂದು ಕಿರು ಪರಿಚಯ  ನೀಡುವೆ.

ಕಲಬುರಗಿ ನಗರದ ಕೋಟೆ : ಕಲಬುರಗಿ ನಗರದಲ್ಲಿನ ಕೋಟೆಯು 1347 ರಲ್ಲಿ ನಿರ್ಮಿಸಿಲಾಗಿದೆ. ಕೋಟೆಯ ಒಳಗಡೆ ತುಂಬಾ ಮನಸೆಳೆಯುವ ಕಟ್ಟಡಗಳಿವೆ. ಅದರಲ್ಲಿ ಸುಮಾರು ೧೪ ನೇ ಅಥವಾ ೧೫ ನೇ ಶತಮಾನದಲ್ಲಿ ಮೋರಿಸ್ ವಾಸ್ತುಶಿಲ್ಪದಲ್ಲಿ   (Moorish architect)  ನಿರ್ಮಿಸಲಾದ ಜಮಾ  ಮಸೀದಿಯಿದೆ (Jama masjid).

ಜಮಾ ಮಸೀದಿಯ ಪೂರ್ಣ ಪ್ರದೇಶವು  ಒಂದು ದೊಡ್ಡ ಗುಮ್ಮಟದಿಂದ ಒಳಗೊಂಡಿದ್ದು, ನಾಲ್ಕು  ಚಿಕ್ಕ ತುದಿಗಳನ್ನು ಮತ್ತು ೭೫ ಇನ್ನೂ ಚಿಕ್ಕ ತುದಿಗಳನ್ನು ಅದರ ಸುತ್ತಲೂ ಒಳಗೊಂಡಿವೆ. ಜಮಾ  ಮಸೀದಿಯನ್ನು ಪರ್ಯಷಿನ್ ವಾಸ್ತುಶಿಲ್ಪಿ ರಪೀ 1367 ರಲ್ಲಿ ನಿರ್ಮಿಸಿದರು. ಕೋಟೆಯ ಒಳಗಡೆಯಿರುವ ಜಮಾ ಮಸೀದಿಯಲ್ಲಿ ಬಹು ಬಗೆಯ ಕೋಣೆಗಳು ಮತ್ತು ಒಂದು ದೊಡ್ದದಾದ  ಪ್ರಾರ್ತನೆಯ ಕೋಣೆಯಿದೆ. ಉತ್ತರ -ದಕ್ಷಿಣದಲ್ಲಿ ೯ ಕೋಣೆಗಳನ್ನು ಮತ್ತು ಪೂರ್ವ-ಪಶ್ಚಿಮದಲ್ಲಿ 13 ಕೋಣೆಗಳನ್ನುಇದು  ಹೊಂದಿದೆ. ಪ್ರತಿ ಕೋಣೆಯು  ಮನೋಹರವಾದ ವಾಸ್ತುಶಿಲ್ಪದಿಂದ ನಿರ್ಮಿಸಲಾಗಿದ್ದು ,ವಿಜಯಪುರ ನಗರದ ಇಬ್ರಾಹಿಮ್ ರೋಜಾವನ್ನು  ಹೋಲುತ್ತವೆ. ಕೋಟೆಯಲ್ಲಿ  15 ಗೋಪುರಗಳಿವೆ. ಕಲಬುರಗಿಯಲ್ಲಿ  ಹಲವಾರು ಭವ್ಯವಾದ ಅರ್ಧ ಗೋರಿಗಳಿವೆ (Haft Gumbaz).

ಕಲಬುರಗಿಯ ಹಳೆಯ ಕಂದಕಗಳಿಂದ ಕೂಡಿದ ಕೋಟೆಯು ಈಗ ಹದಗೆಟ್ಟಿದ ಸ್ಥಿತಿಯಲ್ಲಿದೆ.

ಕೋಟೆಯ ಕಲೆ ಹಾಗೂ ವಾಸ್ತುಶಿಲ್ಪ : ದೊಡ್ಡ ಪ್ರಮಾಣದ ಮುಸ್ಲಿಂ ಕಲೆಯಿಂದ ಗೋಪುರಗಳ ಚಾವಣಿಗಳನ್ನುಕಟ್ಟಲಾಗಿದೆ.ಗೋಡೆಗಳ ಮೇಲೆ  ಕ್ಯಾಲಿಗ್ರಪಿ ವಿನ್ಯಾಸಗಳು,ಹೂವುಗಳ,ಮರಗಳ ಚಿತ್ರಕಲೆಗಳಿಂದ  ಅಲಂಕರಿಸಲಾಗಿದೆ.ಸಮಾಧಿವನ್ನು ಜ್ಯಾಮಿತಿಯ (ಕ್ಷೇತ್ರಗಣಿತದ) ವಿನ್ಯಾಸಗಳಿಂದ  ಅಲಂಕರಿಸಲಾಗಿದೆ.

ಶರಣಬಸವೇಶ್ವರ ದೇವಸ್ಥಾನ:

೧೮ ನೇ ಶತಮಾನದ ಮಹಾನ್ ದಾಸೋಹಿ, ತತ್ವಜ್ಞಾನಿ, ಲಿಂಗಾಯತ ಸಂತ. ಶ್ರೀ ಶರಣಬಸವೇಶ್ವರವರು ನೆಲೆಸಿರುವ  ಪವಿತ್ರವಾದ ಸ್ಥಳವಿದು.ಅವರ  ದಾಸೋಹದಲ್ಲಿ ಪ್ರತಿನಿತ್ಯವು  ಸಾವಿರಾರು ಭಕ್ತರು ಊಟಮಾಡುತ್ತಿದ್ದರು.ಅವರು ದಾಸೋಹ , ಕಾಯಕ ಮತ್ತು  ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸಿದರು.ಶರಣಬಸವೇಶ್ವರರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು . ಶರಣಬಸವೇಶ್ವರರವರ ತಂದೆ ಮಲಕಪ್ಪಾ ಹಾಗೂ ತಾಯಿ ಸಂಗಮ್ಮರವರು.ಅವರು ತಮ್ಮ ತತ್ವ ಸಿದ್ಧಾಂತವನ್ನು ಹಾಗೂ ವೀರಶ್ವೆವ ಧರ್ಮ ಪ್ರಚಾರವನ್ನು ಜಿಲ್ಲೆಯಾಂದತ್ಯ ಮತ್ತು ನೆರೆ ಜಿಲ್ಲೆಗಳಲ್ಲಿ  ಮಾಡುತ್ತಾ,  ಕಡೆಗೆ ಕಲಬುರಗಿ ನಗರದಲ್ಲಿ ಬಂದು ನೆಲೆಸಿದರು.

ಶ್ರೀ ಶರಣಬಸವೇಶ್ವರರು ಲಿಂಗೈಕ್ಯರಾದ ಬಳಿಕ ಅವರ ಸಮಾಧಿಗೆ ಗೋಪುರ ನಿರ್ಮಿಸಲಾಯಿತು.ಅದುವೇ ಇಂದು ಶ್ರೀ ಶರಣಬಸವೇಶ್ವರ ದೇವಾಲಯವಾಗಿದೆ. ದೇವಾಲಯದ ಗದ್ದುಗೆಯ ಮೇಲೆ  ಶರಣಬಸವೇಶ್ವರ ನೆಚ್ಚಿನ ಶಿಷ್ಯ ಆದಿ ದೊಡ್ಡಪ್ಪ ಮತ್ತು ಶರಣ ಬಸವೇಶ್ವರರ (ಗುರು – ಶಿಷ್ಯರ) ಬೆಳ್ಳಿಯ ಜೋಡಿ ಮುಖವಾಡಗಳನ್ನು ಪ್ರತಿಷ್ಠಾಪಿಸಲಾಗಿದೆ. ಅವರು ಹುಟ್ಟಿದ ಗ್ರಾಮ ಅರಳಗುಂಡಗಿಯಲ್ಲಿ ಹಾಗೂ ನಾಡು-ಹೊರನಾಡುಗಳ ಹಲವು ಗ್ರಾಮಗಳಲ್ಲಿ  ಶ್ರೀ ಶರಣಬಸವೇಶ್ವರ ದೇವಾಲಯವಿದೆ. 1927 ರಲ್ಲಿ ಮಹಾತ್ಮಾ ಗಾಂಧಿಜಿಯವರು ಇಲ್ಲಿಗೆ ಭೇಡಿ ನೀಡಿದ್ದರು. ಈ ದೇವಸ್ಥಾನಕ್ಕೆ  ನಾಡು-ಹೊರನಾಡುಗಳಿಂದ ಅಪಾರ ಜನಸಂಖ್ಯೆಯಲ್ಲಿ ಭಕ್ತರು ನೋಡಲು ಬರುತ್ತಾರೆ. ಪ್ರತಿ ವರ್ಷವೂ ಹೋಳಿ ಹುಣ್ಣಿಮೆಯಾದ ಐದನೇ  ದಿನದಂದು ಜಾತ್ರೆ  ,ರಥೋತ್ಸವವು ಅದ್ಧೂರಿಯಾಗಿ ನಡೆಯುತ್ತದೆ. ಶರಣಬಸವೇಶ್ವರ ದೇವಸ್ಥಾನದ ಗೋಪರಕ್ಕೆ ಚಿನ್ನದ ಲೇಪನ ಮಾಡುವ  ಕೆಲಸ ಈಗ   ನಡೆಯುತ್ತಿದೆ. ಈ ಕೆಲಸ ಮುಗಿದರೆಈ ದೇವಸ್ಥಾನವು ನಮ್ಮ ರಾಜ್ಯದ ಮೊದಲ ಚಿನ್ನದ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ದೇವಸ್ಥಾನದ ವಾಸ್ತುಶಿಲ್ಪ: ಈ ದೇವಸ್ಥಾನದ ವಾಸ್ತುಶಿಲ್ಪವು 12 ನೇ ಶತಮಾನದಾಗಿದೆ.ಗರ್ಭಗೃಹದ ಮನೆಯಲ್ಲಿ ಶರಣಬಸವೇಶ್ವರ ಸಮಾಧಿಯಿದೆ.ದೇವಸ್ಥಾನದ ಗೋಡೆಗಳ ಮೇಲೆ ಆನೆಗಳ,ಹದ್ದುಗಳ,ಹಾವುಗಳ ಹಾಗೂ ಹೂವುಗಳ ಶಿಲ್ಪಕಲೆಗಳಿವೆ.ದೇವಸ್ಥಾನದ ಸಂಕೀರ್ಣದಲ್ಲಿ ದೊಡ್ಡದಾದ ಸಭಾಮಂಟಪವಿದೆ.ಈ ಸಭಾಮಂಟಪವು  ಹಲವಾರು ದೊಡ್ಡದಾದ ಸ್ತಂಭಗಳನ್ನು ಹಾಗೂ 36  ಕಮಾನುಗಳನ್ನು ಹೊಂದಿದೆ. ದೇವಸ್ಥಾನದ ಸಂಕೀರ್ಣದಲ್ಲಿಯೇ ಹಲವಾರು ಶತಮಾನಗಳ ಇತಿಹಾಸ ಹೊಂದಿರುವ ದಾಸೋಹ ಮಹಾಮನೆಯಿದೆ.ಇಲ್ಲಿಯೇ ಹಲವಾರು ಶತಮಾನಗಳಿಂದ ದಾಸೋಹ ಕಾರ್ಯಕ್ರಮ ಜಾರಿಯಲ್ಲಿದೆ.ಈ ದೇವಸ್ಥಾನಕ್ಕೆ ದೇಶದ ಹಲವಾರು ಪ್ರಮುಖ ಗಣವ್ಯಕ್ತಿಗಳು ಭೇಟಿ ನೀಡಿ ಶ್ರೀ ಶರಣಬಸವೇಶ್ವರ ದರ್ಶನವನ್ನು ಪಡೆದಿದ್ದಾರೆ.

ಶರಣಬಸವೇಶ್ವರ ಕರೆ(ಅಪ್ಪಾ ಕರೆ):

ಶರಣಬಸವೇಶ್ವರ ಕರೆಯು ಕಳೆದ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. . ಅಪ್ಪಾ ಕರೆಯು ಒಟ್ಟು 102 ಎಕರೆ  ವಿಸ್ತೀರ್ಣವನ್ನು ಹೊಂದಿದೆ.
ಕೆಲವು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಕಲಬುರಗಿಯು ಕರೆ ಯನ್ನು ಒಂದು ಸುಂದರವಾದ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಿರ್ಧರಿಸಿತ್ತು. ನಂತರ ಕರೆಯ ಸುತ್ತಲೂ ಕಲ್ಲಿನ ಗೋಡೆಯನ್ನು ಕಟ್ಟಿ ಬೇಲಿ ಹಾಕಿ,ಪ್ರಾಣಿಗಳ ಮತ್ತು ಮನವಜನ್ಯಗಳಿಂದ ರಕ್ಷಣೆ ಮಾಡಿದೆ.ಕರೆಯ ಮುಂಭಾಗದಲ್ಲಿ ಒಂದು ಸುಂದರವಾದ ಉದ್ಯಾನವನ್ನು ನಿರ್ಮಿಸಿದೆ.ಕರೆಯ ಒಳಗಡೆ ಬೋಟಿಂಗ್ ಮಾಡುವ  ವ್ಯವಸ್ಥೆಯನ್ನು ಮಾಡಲಾಗಿದೆ. ಇಂದು ಅಪ್ಪಾ ಕರೆಯು ಒಂದು ಸುಂದರವಾದ ಪ್ರವಾಸಿ ತಾಣವಾಗಿ ರೂಪಗೊಂಡಿದೆ.

ಖಾಜಾ ಬಂದೇ ನವಾಜ ದರ್ಗಾ:

೧೪ ನೇ ಶತಮಾನದ ಪ್ರಸಿದ್ಧ  ಸೂಪಿ ಸಂತರು.ಇವರು ೧೩೨೧ ರಲ್ಲಿ ದೆಹಲಿಯಲ್ಲಿ ಜನಿಸಿದರು. ಅವರ ತಂದೆ ಸೈಯದ್ ಮಹಮ್ಮದ ಹುಸೇನಿ. ನಾಲ್ಕನೆಯ ವಯಸ್ಸಿನಲ್ಲಿ ಅವರ ಪರಿವಾರವು ದೌಲತಬಾದನಲ್ಲಿ ಬಂದು ನೆಲೆಸಿತು. ಸುಲತ್ತಾನ ತಾಜ ಉದ-ದೀನ ಪೇರುಜ್ ಶಾಹರವರ ಆಮಂತ್ರಣದ ಮೇರೆಗೆ ಅವರು ಕಲಬುರಗಿಯಲ್ಲಿ ಬಂದು ನೆಲಿಸಿದ್ದರು.

ತಮ್ಮ ಹೈದಿನೈದೆನೇ ವಯಸ್ಸಿನಲ್ಲಿ ಕಲಿಕೆ ಮತ್ತು ನಸೀರುದೀನ ಚೀರಾಗ್  ದೇಹಲಾವಿ ಅವರಿಂದ ಆಧ್ಯಾತ್ಮಿಕ, ಇಸ್ಲಾಮಿಕ್ ಶಿಕ್ಷಣ,ಅರಬಿಕ್ ವ್ಯಾಕರಣದ ಶಿಕ್ಷಣ, ಪ್ರವಾದಿಯ ಸಂಪ್ರದಾಯ,ತತ್ವಜ್ಞಾನದ ತರಬೇತಿಯನ್ನು ಪಡೆಯಲು ಮತ್ತೆ ದೆಹಲಿಗೆ ಮರಳಿ ತೆರಳಿದರು.  ತರಬೇತಿಯನ್ನು ಪಡೆದ ಮೇಲೆ ದೇಶದ ವಿವಿಧ ನಗರಗಳಾದ ದೆಹಲಿ,ಮೀವತ್, ಗ್ವಾಲಿಯರ್, ಬರೋಡಾ, ಚಂದೀರ್,ಅರೈಚ ಮುಂತಾದವುಗಳಲ್ಲಿ ಉಪದೇಶವನ್ನು ನೀಡಿ ಕಡೆಗೆ ೧೩೯೭ ರಲ್ಲಿ ಕಲಬುರಗಿ ನಗರದಲ್ಲಿ ಬಂದು ನೆಲೆಸಿದರು.

ಅವರ ಹೆಸರು ಅದ್ಬುಲ್ ಪತಾಹ (Abdul Fatah) ಹಾಗೂ ಗೋತ್ರನಾಮವು ಗೈಸು  ದರಜ (Gaisu Daraz).ಆದರೆ ಜನರು ಅವರನ್ನು ಖಾಜಾ ಬಂದೇ ನವಾಜ ಗೈಸು ದರಜ ಎಂದು ಕರೆಯುತ್ತಾರೆ. 1922 ನವೆಂಬರ್ ನಲ್ಲಿ ಅವರು ಗುಲಬರ್ಗಾ ನಗರದಲ್ಲಿ ಸಾವನ್ನಪ್ಪಿದರುಬಳಿಕ ಅವರ ಸಮಾಧಿಗೆ ಗೋಪುರವನ್ನು ನಿರ್ಮಿಸಲಾಯಿತು.ಅದುವೇ ಇಂದು ಖಾಜಾ ಬಂದೇ ನಮಾಜ ದರ್ಗಾವಾಗಿದೆ. ಪ್ರತಿ ವರ್ಷವೂ ಜಾತ್ರೆ ನಡೆಯುತ್ತದೆ.ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ದರ್ಗಾದಲ್ಲಿರುವ ಗ್ರಂಥಾಲಯದಲ್ಲಿ ಉರ್ದು, ಪರ್ಯಷಿನ್ ಮತ್ತು ಅರಬಿಕ್,ಭಾಷೆಯಲ್ಲಿ ಬರೆದಿರುವ ಇತಿಹಾಸ ಹಾಗೂ ಸಾಹಿತ್ಯದ ಬಗ್ಗೆಗಿನ 10,000 ಹೊತ್ತಿಗೆಗಳಿವೆ

 

 Image_for_the_Articleಬೌದ್ಧ ವಿಹಾರ ,ಕಲಬುರಗಿ :

ಮೊದಲು 2002 ರಲ್ಲಿ ಸಣ್ಣ ಪ್ರಮಾಣದಲ್ಲಿ ಬೌದ್ಧ ವಿಹಾರದ ನಿರ್ಮಾಣದ ಕಾರ್ಯ ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ಸಿದ್ಧಾರ್ಥ ವಿಹಾರ ಪ್ರತಿಷ್ಠಾನವು ಇದನ್ನು ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಬೌದ್ಧ ವಿಹಾರವನ್ನಾಗಿ ರೂಪಿಸಲು  ನಿರ್ಧರಿಸಿತು. ಸುಮಾರು ೧೮ ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಮುಖ್ಯ ಕಟ್ಟಡವನ್ನು ಎರಡು ಭಾಗಗಳನ್ನಾಗಿ ವಿಭಾಗಿಸಲಾಗಿದೆ. ಒಂದು  ಭಾಗ ಆಲೋಚನೆ ಕೇಂದ್ರ,ನೆಲೆ ಮನೆ ಮತ್ತು ಇನ್ನೊಂದು ಭಾಗ ಲಾರ್ಡ್ ಬೌದ್ದ ಚೈತ್ಯ (Lord Buddha chaitya).

ಬೌದ್ಧ ವಿಹಾರ ಸಂಕೀರ್ಣವು  ಬೌದ್ಧ ಧರ್ಮದ ವಾಸ್ತುಶಿಲ್ಪದಲ್ಲಿ ಕಟ್ಟಲಾಗಿದೆ. ಗೋಪುರ ವಿನ್ಯಾಸವು ತಾಜಮಹಲ್ ಮಾದರಿಯಲ್ಲಿದೆ. ಗೋಪುರವು 70 ಅಡಿ ಉದ್ದ ಮತ್ತು 59 ಅಡಿ ವ್ಯಾಸ ಹೊಂದಿದ್ದು, ಒಳಗಡೆ ಕೊನೆಯಲ್ಲಿ  ೪೮ ಅಡಿ ಉದ್ದದ ನಾಲ್ಕು ಅಶೋಕ ಸ್ತಂಭಗಳಿವೆ.ಆಲೋಚನೆ ಕೇಂದ್ರದ ಮುಖ್ಯ ಆಕರ್ಷಣೆವೆಂದರೆ ೬.೫ ಅಡಿ ಉದ್ದದ ಕಪ್ಪು ಬಣ್ಣದ ಬೌದ್ಧನ ಮೂರ್ತಿ.

ಸುಮಾರು 15,635 ಚದುರ ಅಡಿಯ, 170  ಕಂಬಗಳು ಮತ್ತು 284 ಅಡಿಗಲ್ಲುಗಳನ್ನು ಹೊಂದಿರುವ ಒಂದು ದೊಡ್ಡ ಪ್ರಾರ್ಥನೆ ಹಾಲ್ ಇದೆ. ಬೌದ್ಧ ವಿಹಾರದ ಮುಖ್ಯ ಆಕರ್ಷಣೆವೆಂದರೆ . ಅಡಿ ಎತ್ತರದ ಚಿನ್ನದಿಂದ ಆವರಿಸಿರುವ ಪಂಚಲೋಹದಿಂದ ನಿರ್ಮಿಸಿದ್ದ ಕುಳಿತಿರುವ ಬೌದ್ಧನ ವಿಗ್ರಹ. ಇದು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಎತ್ತರದ  ವಿಗ್ರಹವಾಗಿದೆ.ಇದನ್ನು ತೈಲಾನಡ (Thailand)  ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.ದಕ್ಷಿಣ ಭಾರತದಲ್ಲಿಯೇ ಬೌದ್ಧ ಧರ್ಮದ ತೀರ್ಥಯಾತ್ರಿಕರಿಗೆ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ.

 

– ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

1 Response

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: