ಒಂದು ನಗುವಿಗಾಗಿ
ವರುಷಗಟ್ಟಲೆ ಅತ್ತಿದ್ದಿದೆ!
ಒಂದು ಗೆಲುವಿಗಾಗಿ
ಸಾವಿರ ಸೋಲುಗಳ ಅಪ್ಪಿದ್ದಿದೆ!
ಒಂದು ಗುಲಗಂಜಿ ಮಾನಕ್ಕಾಗಿ
ಆನೆಯಷ್ಟು ಅವಮಾನ ಸಹಿಸಿದ್ದಿದೆ!
ಪ್ರತಿ ಕವಿತೆ ಬರೆಯುವಾಗಲೂ
ನನ್ನ ನಾನು ಕೊಂದು ಕೊಂಡಿದ್ದಿದೆ!
– ಕು.ಸ.ಮಧುಸೂದನ್ ರಂಗೇನಹಳ್ಳಿ