ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ
ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮರ್ಥ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ ಮಿರಾಕಲ್ ಓನ್ ವೀಲ್. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ.
ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ಈ ತಂಡದಲ್ಲಿ ಸುಮಾರು 15 ಕ್ಕೂ ಆದಿಕ ಸಂಖ್ಯೆಯ ಕಲಾವಿದರಿದ್ದು ಒಂದು ಉತ್ತಮ ಸಮಾಜಿಕ ಸಂದೇಶವುಳ್ಳ ನೃತ್ಯ ರೂಪಕವನ್ನು ವೀಕ್ಷಕರಿಗೆ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಸೈಯದ್ ಸಲ್ಲಾವುದ್ದೀನ್ ಅವರು ಭರತನಾಟ್ಯ, ಕಥಕ್ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದು ತನ್ನ ಕಲಾಸಧಕರನ್ನು ತಯಾರು ಗೊಳಿಸಲು ನೆರವಾಗಿದೆ.
ಈ ತಂಡಕ್ಕೆ ನೃತ್ಯರೂಪಕ ಎನ್ನುವುದು ಕೇವಲ ಪ್ರದರ್ಶನದ ಕಲೆಯಲ್ಲ. ದೈಹಿಕವಾಗಿ ಸಬಲರಾಗಲು ಇದು ಇವರೊಳಗಿನ ಶಕ್ತಿಯಾಗಿ ಪರಿಣಮಿಸಿದೆ. ಇದುವರೆಗೆ ಈ ತಂಡ ಸುಮಾರು ೧೦,೦೦೦ಕ್ಕೂ ಅಧಿಕ ಪ್ರದರ್ಶನ ನೀಡಿದ್ದು ಲಿಮ್ಕಾ, ಗಿನ್ನಿಸ್ ದಾಖಲೆಯಲ್ಲಿ ತಮ್ಮ ಹೆಸರು ಮೂಡಿಸಿದೆ. ಸೋಫಿ, ಯೋಗ, ದೇಶಭಕ್ತಿ ಗೀತೆ ಮತ್ತು ನೃತ್ಯ, ಪೌರಾಣಿಕ ರೂಪಕ, ಹಾಡುಗಳ ಮೂಲಕ ಜನರನ್ನು ರಂಜಿಸುವ ಈ ತಂಡಕ್ಕೆ ಕಲಾಸಕ್ತರ ಚಪ್ಪಾಳೆಯೇ ಪ್ರೀತಿಯ ಮುಕುಟ.
ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಲಕ್ಷದೀಪದಂತಾ ಆಕರ್ಷಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಾಸಾಮರ್ಥ್ಯ ಬಿಚ್ಚಿಡುವ ಈ ತಂಡ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮ ನೀಡಿದೆ. ಇವರ ಕಲಾಸಾಮರ್ಥ್ಯಕ್ಕೆ ಈಗಾಗಲೇ ಹಲವು ಪ್ರಶಸ್ತಿಗಳು ಈ ತಂಡಕ್ಕೆ ಲಭ್ಯವಾಗಿವೆ. ವಿಕಲಚೇತನರೂ ಪ್ರಕೃತಿಯ ಒಂದಂಶ ಅವರನ್ನು ಬೇರೆ ಎಂದು ಕಾಣುವುದು ಅಸಮರ್ಪಕ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಲು ಹೊರಟಿರುವ ಈ ತಂಡದ ಪ್ರತಿಭೆಗೆ ಅವಿರತ ಶ್ರಮವೇ ಸ್ಪೂರ್ತಿ.
ನೃತ್ಯದ ಮೂಲಕ ಮಹಾಭಾರತ ಕತೆಯನ್ನು ಬಿಚ್ಚಿಡುವ ಈ ತಂಡ ಸರ್ವಧರ್ಮ ಸಮನ್ವಯತೆಯ ತತ್ವವನ್ನು ಸಮಾಜಕ್ಕೆ ಸಾರುವ ರೀತಿ ಸುಂದರ. ಇಡೀ ಪ್ರದರ್ಶನದುದ್ದಕ್ಕೂ ವೀಲ್ ಚಯರ್, ಊರುಗೋಲುಗಳು ಇವರ ನೃತ್ಯ ಪರಿಕರಗಳಾಗಿ ಗೋಚರಿಸುವುದರೊಡನೆ ಆ ಉಪಕರಣಗಳ ಕುರಿತು ಸಮಾಜದ ಸಾಮಾನ್ಯ ಧೋರಣೆಯನ್ನು ಬದಲಾಯಿಸುವಂತಿರುತ್ತದೆ,
ಬರಹ: ಎನ್. ಪೂಜಾ. ಪಕ್ಕಳ, ಎಮ್.ಸಿಜೆ. ಎಸ್. ಡಿ. ಎಂ. ಕಾಲೇಜು ಉಜಿರೆ
ಚಿತ್ರ: ವಿಲ್ಸನ್ ಪಿಂಟೋ, ಎಮ್.ಸಿಜೆ. ಎಸ್. ಡಿ. ಎಂ. ಕಾಲೇಜು ಉಜಿರೆ.
ಶ್ಲಾಘನೀಯ ಪ್ರಯತ್ನ…ಅದ್ಭುತ ಪ್ರತಿಭೆ.. “ಮಿರಾಕಲ್ ಆನ್ ವೀಲ್ಸ್ ‘ ಅನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಕಣ್ಣಲ್ಲಿ ನೀರು ತುಂಬುವಷ್ಟು ನೋವಾಯ್ತು . ಇಂಥ ಪ್ರತಿಭಾನ್ವಿತರಿಗೆ ಎಲ್ಲ ಅಂಗಗಳು ಚೆನ್ನಾಗಿದ್ದರೆ ಅದೆಷ್ಟು ಮುಂದುವರೆಯುತ್ತ ಇದ್ದರು ಅನ್ನಿಸಿತು . ವೆರಿ ಗುಡ್ .
Lekhana Thumba chennagide….
ಅದ್ಘುತ ಸಾಧನೆ