ಒಂದು ಮಳೆಯ ಕಥೆ
ತಳುಕು ಬಳುಕು ತೋರಿಸಿಬಳಿಗೆ ಬಾರದಿರುವೆಯಾ..ಮಳಿಗೆ ಮೇಲೆ ನರ್ತಿಸಿಕೆಳಗಿಳಿವುದ ಮರೆತೆಯಾ.. ಏನು ಸದ್ದು ಯಾಕದು..ಹುಸಿಮುನಿಸಿನ ಗಡಿಬಿಡಿಬಾನಿನಂತಪುರದಲಿಕಸಿವಿಸಿಗಳ ದಾಂಗುಡಿ ಜಳಪಿಸುವುದದೇನನುಪುಳಕ ಪುಟಿಯುತಿರುವುದುಕರಿಯ ಬಾನ ಮರೆಯಲಿವ್ಯವಹಾರವದೇನದು?? ಮುಗಿಲು ದಿಗಿಲುಗೊಳ್ಳುತಭೋರ್ಗರೆಯುತ ಅಳುತಿದೆದುಃಖ ನಿಲ್ಲುತಿಲ್ಲವೋಸಂತೈಸುವರಿಲ್ಲದೆ… ಇಳೆಯು ನಾಚಿ ಸೂಸಿದೆಮಕರಂದದ ಘಮ ಸುಮನೊಂದು ಬೆಂದ ಬಸವಳಿಕೆನೀಗುವಂತ ಸಂಭ್ರಮ ಹೊತ್ತು ಸರಿಯುತಿದ್ದರೂಕತ್ತಲಾಟ ನಿಲ್ಲದುಪ್ರಕೃತಿಯೊಡಲ ಒಲವ ಹೂಟಮೈ ಮನವನು...
ನಿಮ್ಮ ಅನಿಸಿಕೆಗಳು…