ಕಾವ್ಯ ಭಾಗವತ 36 : ಭರತ

ಪಂಚಮ ಸ್ಕಂದ
ಅಧ್ಯಾಯ – 2
ಭರತ
ನಮ್ಮೆಲ್ಲರ ಜನ್ಮಭೂಮಿ
ಭರತವರ್ಷಕೆ
ತನ್ನ ಹೆಸರನ್ನು ಕೊಟ್ಟು
ಅಮರನಾದ
ಭರತ ಚಕ್ರವರ್ತಿ
ಋಷಭರಾಜನ ಪುತ್ರ
ದಶಸಹಸ್ರಾವರುಷಗಳ ಕಾಲ
ಭೂಮಂಡಲವನ್ನಾಳಿ
ಸಕಲ ಪ್ರಜಾಹಿತ, ಲೋಕಹಿತ
ಕಾರ್ಯಂಗಳು
ಭಾಗವತ ಆರಾಧನೆ
ಯೆಂದೆಣಿಸಿ
ಅಸದಳ ಭಕ್ತಿಯಿಂ
ನಾರಾಯಣ ಸ್ವರೂಪವಂ
ಸಾಕ್ಷಾತ್ಕರಿಸಿ
ವಿರಕ್ತಭಾವದಿಂ
ಸಕಲೈಶ್ವರ್ಯ, ಪತ್ನಿ, ಪುತ್ರಾದಿ
ಗಳಂ ತ್ಯಜಿಸಿ
ಪುಲಹಾಸಮವೆಂಬ
ಸಾಲಿಗ್ರಾಮ ಕ್ಷೇತ್ರದಿ
ನೆಲೆಸಿ
ಸಕಲ ಮೋಹವ ಬಿಟ್ಟು
ಭಗವಂತನಾರಾಧನೆಯಲಿ
ನೆಲೆಯಾದ
ಭರತನಿಗೂ
ಕಾಡಿದ
ಮೋಹದ ಪರಿಯೊಂದು
ಭಗತ್ ಸಂಕಲ್ಪ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42207
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ಮತ್ತೊಂದು ಸಾರಿ ಗದ್ಯರೂಪದ ಭಾಗವತ ಓದಲು ಪ್ರೇರೇಪಿಸುತ್ತಿದೆ ಸಾರ್
ಭರತ ಚಕ್ರವರ್ತಿಯ ಕುರಿತಾದ ಭಾಗವತದ ಈ ಕಾವ್ಯ ರೂಪವೂ ಸರಳವಾಗಿತ್ತು.
ಕಾವ್ಯ ಭಾಗವತದಲ್ಲಿ ಭರತನ ಕಥೆ ಚೆನ್ನಾಗಿ ಮೂಡಿಬಂದಿದೆ.
Nice