ಚಂದದ ಬಾಳಿಗೆ

ಒಂದು ಭರವಸೆಯ ಬೆಳಕು
ಬೇಕು ಚಂದದ ಬಾಳಿಗೆ
ಖುಷಿಯ ಹಂಚಿಕೊಂಡು
ಸಾಗಬೇಕು ನಾವು ನಾಳೆಗೆ
ಅನ್ಯತಾ ಕಿವಿಕೊಡಬೇಡಿ,
ಇಲ್ಲಸಲ್ಲದ ಗಾಳಿ ಮಾತಿಗೆ
ಗೌರವಿಸಿ ಆದರಿಸಿ ಅವರವರ
ಮನದ ಭಾವನೆಗಳಿಗೆ
ನಕ್ಕು ಹಗುರಾಗಿ ಬಿಡಿ
ತೊರೆದು ಮನದೊಳಗಿನ ಭಾರ
ಇಂದಿನದು ಇಂದಿಗೆ ಇರಲಿ,
ನಾಳೆ ಎಂಬುದು ನಗುನಗುತ
ಮೆಲ್ಲಗೆ ಬರಲಿ ನೆಮ್ಮದಿಯ ತರಲಿ
ಉಸಿರು ಉಸಿರಲ್ಲಿ ಬೆರೆತು ಹೋಗಲಿ
ಬೀಸಿ ಬರುವ ಮಲ್ಲಿಗೆಯ ಕಂಪು
ಸಿಕ್ಕ ಒಂದು ಸದಾವಕಾಶವನ್ನು
ಉಪಯೋಗಿಸಿಕೊಂಡು ಬಿಡಿ ಬಾಳಿಗೆ
ಮನದ ತುಂಬಾ ತುಂಬಿಕೊಳ್ಳಿ
ಪ್ರೀತಿ ಆತ್ಮೀಯತೆಯ ಕೃತಜ್ಞತೆಗೆ
ಹೆಜ್ಜೆ ಗುರುತು ಮೂಡಲಿ
ಜೀವಿತದ ಉತ್ಕಟತೆಗೆ
ಬದುಕಿನ ಭವಣೆಗಳ ಮೀರಿನಿಲ್ಲುವ
ಸಾಗಿ ಬಂದ ದಾರಿಯ ಸಾರ್ಥಕತೆಗೆ
–ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರಕನ್ನಡ.
ಬದುಕಿನ ಸಾರ್ಥಕತೆಯ ಭಾವ ವ್ಯಕ್ತವಾದ ಕವನ ..ಚೆನ್ನಾಗಿದೆ ಸರ್..
ಸಕಾರಾತ್ಮಕ ಕವನ ಚೆನ್ನಾಗಿದೆ ಸಾರ್
ಚಂದದ ಸಂದೇಶ ಹೊತ್ತ ಸುಂದರ ಕವನ.
ಉತ್ತಮ ಸಕಾರಾತ್ಮಕ ಆಶಯವನ್ನು ಹೊತ್ತ ಕವನ ಚೆನ್ನಾಗಿದೆ.
ಭರವಸೆ ತುಂಬುವ ಸುಂದರ ಕವನ
ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು