
ಖಾಲಿ ಬಿಳಿ ಹಾಳೆಯಂತೆ
ಇರಬೇಕು ನಮ್ಮ ಮನಸು
ತುಂಬಿಕೊಳ್ಳುತ್ತ ಹೋಗಬೇಕು
ಒಂದೊಂದೇ ಸೊಗಸು
ದಿಟ್ಟಿಸಿ ನೋಡುತ್ತಿರು ಆಗಸವ
ಬೆರಗು ಗೊಳಿಸುವುದು ಮೋಡ
ಹನಿ ಹನಿ ಮಳೆಯಾಗಿ ಸುರಿದು
ತಂಪಾಗಿಸುವುದು ನಮ್ಮ ಇಳೆಯ
ಮೊದಲ ಮಳೆ ಹನಿಯ ಸ್ಪರ್ಶಕ್ಕೆ
ಹಸಿರು ಅರಳಿ ನೀಡುವುದು ಖುಷಿಯ
ಎಲ್ಲೋ ಹುಟ್ಟಿ ಎಲ್ಲೋ ಹರಿದು
ಸೇರುವುದು ನದಿಯು ಸಾಗರವ
ಕೆಸರಲ್ಲಿ ಹುಟ್ಟಿದ ಕಮಲವು
ಪಡೆಯುವುದು ದೇವರ ಒಲವ
ಕಷ್ಟದ ಜಗದೊಳಗೆ ಹುಟ್ಟಿದರೂ
ಸಾಧಿಸಿ ಪಡೆಯಬೇಕು ನಾವು ಗೆಲುವ
ಕಷ್ಟಕ್ಕೆ ಹೆದರಿ ಹಿಂಜರಿಯದೆ
ತೋರಿಸಬೇಕು ನಮ್ಮ ಸಮರ್ಥ್ಯವ
ಅಂಜುತ್ತ ಕುಳಿತತೆ ಇಲ್ಲಿ ನಾವು
ಸಾಧಿಸಿ ತೋರಿಸಲಾಗದು ಏನೂ
ಕಷ್ಟ ಪಟ್ಟು ಬದುಕ ಕಟ್ಟಿಕೊಂಡಾಗ
ಬದುಕಾಗುವುದು ಹಾಲುಜೇನು
–ನಾಗರಾಜಜಿ. ಎನ್. ಬಾಡ
ಮೊದಲ ಮಳೆಯ ಸೊಗಸಂತೆ ಕವನ ಸೊಗಸಾಗಿದೆ….
ಖಾಲಿ ಬಿಳಿ ಹಾಳೆ : ಎಂಥ ರೂಪಕಾಲಂಕಾರ
ಕವಿತಾ ಆತ್ಮಗತ ; ಗತಪ್ರತ್ಯಾಗತ
ಚೆನ್ನಾಗಿದೆ, ಅಭಿನಂದನೆ ಸರ್
ನಿಷ್ಕಲ್ಮಷ ಮನಸ್ಸು ಸಾಧಿಸುವ ಛಲದ..ಅನಾವರಣ ಈ ಕವನ
ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಲೇ ಬದುಕ ಭಾವಕ್ಕೆ ಬೆಳಕು ನೀಡುವ ಚಂದದ ಕವಿತೆ.
Nice one
ತಮ್ಮೆಲ್ಲರ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು
ಮನವು ಖಾಲಿಯಾಗಿರುವ ಬಿಳಿ ಹಾಳೆಯಂತೆ ಇರಬೇಕೆಂಬ ಚೊಕ್ಕ ಸಂದೇಶವನ್ನು ನೀಡುವ ಚಂದದ ಕವನ.