ಸಮುದ್ರರಾಜಗೆ ವಸನ
ಭೋರ್ಗರೆವ ಕಡಲತಡಿಯು ಬಿಳಿಹಾಲ ನೊರೆ ಅಲೆಯು! ರವಿಕಿರಣದಲಿ ತೊಯ್ದು ಸಮುದ್ರರಾಜಗೆ ವಸನ ತಾನೆ ನೇಯ್ದು! ಶಕ್ತಿಯುತ ತೆರೆಗಳ ಹೊಡೆತ ಕಠಿಣ ಕರಿಬಂಡೆ ಸಹಿಸಲದು ಸತತ! ಜೀವನದೆ ಕಷ್ಟಗಳ ಅಲೆಯ ಬಡಿತ ತಡೆವ ಶಕ್ತಿಯ ನೀಡು ದೇವ ಅನವರತ! . – ಶಂಕರಿ ಶರ್ಮಾ, ಪುತ್ತೂರು +5
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಭೋರ್ಗರೆವ ಕಡಲತಡಿಯು ಬಿಳಿಹಾಲ ನೊರೆ ಅಲೆಯು! ರವಿಕಿರಣದಲಿ ತೊಯ್ದು ಸಮುದ್ರರಾಜಗೆ ವಸನ ತಾನೆ ನೇಯ್ದು! ಶಕ್ತಿಯುತ ತೆರೆಗಳ ಹೊಡೆತ ಕಠಿಣ ಕರಿಬಂಡೆ ಸಹಿಸಲದು ಸತತ! ಜೀವನದೆ ಕಷ್ಟಗಳ ಅಲೆಯ ಬಡಿತ ತಡೆವ ಶಕ್ತಿಯ ನೀಡು ದೇವ ಅನವರತ! . – ಶಂಕರಿ ಶರ್ಮಾ, ಪುತ್ತೂರು +5
ಹಾಂ.!.ಮತ್ತೊಮ್ಮೆ ಬಂದಿತು …ಹೊಸ ವರುಷ.!!.ಕ್ರಿಸ್ತಶಕೆಯಲ್ಲಿ ಜನವರಿ 1 ಹೊಸ ವರುಷ..! ಆದರೆ ಮುಂದೆ ಬರಲಿದೆಯಲ್ಲಾ ನಮ್ಮ ಚಾಂದ್ರಮಾನ, ಸೌರಮಾನ ಯುಗಾದಿಗಳು..ಹಿಂದು ಪದ್ಧತಿಯಲ್ಲಿನ ಹೊಸವರುಷ..! ಅದೇನು ಹೊಸತಾಗಿ ಬರುತ್ತಾ..ಇಲ್ಲ.. ಚಕ್ರ ತಿರುಗುವುದಷ್ಟೆ! ಒಂದು ಬಿಂದುವಿನಿಂದ ಹೊರಟ ಚಕ್ರ ಒಂದು ಸುತ್ತು ತಿರುಗಿ ಪುನಃ ಅದೇ ಬಿಂದುವಿನಿಂದ ಇನ್ನೊಂದು ಸಲ,...
ಹೌದು…ನಮ್ಮ ಕರಿಬೇವಿನ ಸೊಪ್ಪು..ಎಲ್ಲಾ ಸೊಪ್ಪುಗಳ ರಾಣಿ..! ಮನೆಗಳಲ್ಲಿ ಯಾವ ಸೊಪ್ಪು ಇಲ್ಲದಿದ್ದರೂ ಸರಿ..ಘಂ ಎಂದು ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೇ ಬೇಕು ಅಲ್ವಾ..ಒಲೆ ಮೇಲೆ ಒಗ್ಗರೆಣೆಗಿಟ್ಟು, ಮನೆಯ ಹಿತ್ತಿಲಿನಿಂದ ತಾಜಾ ಕರಿಬೇವು ತಂದು ಅದಕ್ಕೆ ಹಾಕಿ,ಚುಂಯ್ ಎಂದು ಒಗ್ಗರಣೆ ಹಾಕಿದರೆ ಆ ದಿನದ ನಳಪಾಕ ತಯಾರಾದಂತೆ..!ಅಡಿಗೆಗೆ ಮಾತ್ರವಲ್ಲದೆ ...
ಸೆಪ್ಟೆಂಬರ ತಿಂಗಳ ಒಂದು ಮುಂಜಾವು..ಪುಟ್ಟ ತೋಟದ ದಟ್ಟ ಮರಗಳ ನಡುವಿನಲ್ಲಿನಲ್ಲಿರುವ ನಮ್ಮ ಮನೆಯ ಸುತ್ತು ಯಾವಾಗಲೂ ಹಕ್ಕಿಗಳ ಚಿಲಿಪಿಲಿ ನಿನಾದ …ಆ ದಿನ ಸ್ವಲ್ಪ ಜಾಸ್ತಿಯೇ ಇದ್ದಂತೆ ಇತ್ತು.ನಾಲ್ಕೈದು ತರಹದ ಹಕ್ಕಿಗಳಲ್ಲಿ ಗಮನ ಸೆಳೆಯುವ ಹಕ್ಕಿ ಅದಾಗಿತ್ತು. ಚಂದದ ನೀಲಿ ನವಿಲು ಬಣ್ಣದ ರೆಕ್ಕೆ..ಪುಕ್ಕ..ತುಸು ಉದ್ದನೆಯ,ಮುಂದಕ್ಕೆ ಬಾಗಿದ...
ಉತ್ಥಾನದ್ವಾದಶಿಯಲ್ಲಿ ತುಳಸಿಪೂಜೆ ಸಂಭ್ರಮ ಚೆನ್ನಾಗಿಯೇ ಇದ್ದಿರಬೇಕಲ್ಲವೇ..? ನಿಜ..ಆದರೆ ಇಂದಿನ ಗಡಿಬಿಡಿಯ ನಾಗಾಲೋಟದ ಜೀವನ ಕ್ರಮದಿಂದಾಗಿ ಈ ತರಹದ ಹಬ್ಬಗಳ ಸಂಭ್ರಮವನ್ನು ಅನುಭವಿಸಲು..ಆಸ್ವಾದಿಸಲು ಸಮಯವೇ ಇಲ್ಲದಂತಾಗಿದೆ ಅನಿಸುತ್ತದೆ ನನಗೆ. ಈಗಂತೂ ಹೆಚ್ಚಿನ ಮನೆಗಳಲ್ಲಿ ಹಬ್ಬಗಳ ಆಚರಣೆಯೇ ಇಲ್ಲವಾಗಿದೆ..! ಇರಲಿ…ಕಾಲಾಯ ತಸ್ಮೈನಮ:…ಇದನ್ನೆಲ್ಲಾ ಯೋಚಿಸುವಾಗ ನನ್ನ ಮನಸ್ಸು ಬಾಲ್ಯದಲ್ಲಿನ ತುಳಸಿಪೂಜೆಯ ಗಮ್ಮತ್ತನ್ನು...
ಹಾಂ.. ದೀಪಾವಳಿ ಹಬ್ಬ ಮತ್ತೆ ಬಂದೇ ಬಂತು..! ದೀಪಗಳ ಮಾಲೆಯಿಂದ ಝಗಝಗಿಸುವ, ಸಿಹಿತಿಂಡಿಗಳನ್ನು ಮನ:ಪೂರ್ತಿ ಹೊಟ್ಟೆಗಿಳಿಸಬಲ್ಲ ಹಬ್ಬ ಯಾರಿಗೆ ಇಷ್ಟವಿಲ್ಲ ಹೇಳಿ ? ಎಲ್ಲಾ ಹಬ್ಬಗಳಿಗಿಂತ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನ!. ಯಾಕೆಂದರೆ ಇದು ಅತೀ ಸಂಭ್ರಮದ ಹಬ್ಬ. ಹಿಂದುಗಳು ಮಾತ್ರವಲ್ಲದೆ ಸಿಖ್, ಜೈನ ಮತ್ತು ಬೌಧ್ಧ...
1 ನಸುನಗುವ ಪುಷ್ಪವದು ಮುದನೀಡೆ ಮನಕೆ ನಲ್ಗಂಪು ಪಸರಿಸಿರೆ ಲತೆ ತಾನು ಬಳುಕೆ..! ಪೂರ್ಣತೇಜನು ಉದಿಸೆ ಉಷೆಯ ಮನ ಮಿಡುಕೆ ಪ್ರಕೃತಿದೇವಿಯ ಒಡಲು ತಾ ತುಂಬಿ ತುಳುಕೆ..! 2 ನಿಶೆಯ ನಲ್ದೋಳಿನಲಿ ನಿದ್ರಿಸಿದ ಉಷೆ ನೋಡು ಸಾಗರದ ತಂಪೆಲರು ಬೀಸೆ ಮನ ಹಾಡು..! ಉದಯಿಸಿದ ಭಾನುವದೊ ಕಣ್ಣು...
ಪರಂಜ್ಯೋತಿ ಪರಮಾತ್ಮ ನಡೆಸು ಕೈ ಹಿಡಿದು ಕಷ್ಟಗಳ ಮೆಟ್ಟಿನಿಲೆ ಧೈರ್ಯ ತುಂಬುವುದು II ಸದ್ಗುಣಗಳೇ ಬರಲಿ ಎಲ್ಲೆಡೆಯು ಹರಿದು ಸತ್ಕರ್ಮ ಸಂಪ್ರೀತಿ ವೈಮನಸು ಮುರಿದುII ನಾವೆಲ್ಲ ಬಂಧುಗಳು ಪ್ರೀತಿಯೇ ಬದುಕು ಕರುಣಾಳು ಈ ಪಥದಿ ನೀ ನೀಡು ಬೆಳಕುII . -ಶಂಕರಿ ಶರ್ಮ ಪುತ್ತೂರು. +4
1 ನೀಲಿ ಆಕಾಶದಲಿ ತಾರಾ ಲೋಕದಲಿ ಚಂದಿರನು ನಸುನಗುತ ಬಂದ ಮಬ್ಬುಗತ್ತಲಿನ ತೆರೆ ಸರಿಯೆ ನೋಡಲ್ಲಿ ಆ ಸೂರ್ಯ ಕಿರಣಗಳು ಚಂದ..! 2 ಮೂಡಿದನು ರವಿತೇಜ ಮೂಡು ಬಾನಂಗಳದಿ ಬಿಳಿ ಮೋಡಗಳೆಡೆಯಿಂದ ಮೆಲ್ಲ ಮೇಲೆ ನೋಡು ನೋಡುತ ಸರಿದ ಬಣ್ಣ ಮೇಲಿದು ಹಳದಿ ಕಣ್ತುಂಬಿಕೊಳ್ಳೆ ತಾ ಇದು...
ಪ್ರಕೃತಿಯು ಪರಮಾತ್ಮನ ನಿಗೂಢ ಚಿತ್ರ ಅದರೊಳಗೆ ನಾವೊಂದು ಹಾಸ್ಯ ಪಾತ್ರ ಪ್ರತಿಯೊಂದು ಹಂತದಲಿ ಪಾತ್ರ ವಿಚಿತ್ರ ಅದ ನಾವು ತಿಳಿದೊಡೆ ಜೀವನ ಸುಸೂತ್ರ ಶುಭ ಸುಪ್ರಭಾತ..!! ತಿಳಿಗೊಳದ ನೀರಿನಲಿ ಅಲೆಗಳೊಡಮೂಡಿರಲು ಉದಯಕಾಲದ ಹೊಂಗಿರಣಗಳ ಥಳಕು ತಿಳಿಮನದ ಕೊಳದಲ್ಲಿ ನೆನಪಿನಲೆ ಮೂಡಿರಲು ಕರಗದಿರೆ ಸವಿನೆನಪ ಮೆಲುಕು ಶುಭೋದಯ!...
ನಿಮ್ಮ ಅನಿಸಿಕೆಗಳು…