ಮಹಿಳೆಯು ಎಂದಿಗು ಅಬಲೆಯೆ ಅಲ್ಲ
ಸ್ತ್ರೀ ಸಬಲೀಕರಣಕೆ ಬೇಕಿದೆ ಈಗ
ವಿದ್ಯಾಕಲಿಕಾನುಕೂಲತೆಯು
ಮಹಿಳೆಯು ಎಂದಿಗು ಅಬಲೆಯೆ ಅಲ್ಲ
ಬೆಳಗಲು ಅವಳಲಿ ಆತ್ಮಶಕ್ತಿಯ ಪ್ರಣತಿಯು
ಮಹಿಳಾ ದಿನವಿದು ಆಚರೆಣೆಗೆ ಮಾತ್ರವೇ?
ಸ್ತ್ರೀ ಸ್ವಾತಂತ್ರ್ಯದ ಕಡೆ ನಡೆಯಬೇಕಿದೆ
ಹೆಣ್ಣು ಮಕ್ಕಳಲಿ ಸ್ವಶಕ್ತಿಯ ತುಂಬುವ
ಸುಕಾರ್ಯವಾಗಬೇಕಿದೆ ಎಲ್ಲ ಕಡೆ!!
ಜಗದಲಿ ಮೆರೆಯಲಿ ಜನನಿಯ ಪ್ರೀತಿ
ಝಗಝಗಿಸಲಿ ಉತ್ಥಾನದ ನೀತಿ
ನಡುರಾತ್ರಿಯಲಿ ನಿರ್ಭಯದಿ ನಡೆಯುವ ನಿರ್ಭೀತಿಯ ಕಾಲ ಬರಲಿ,ಅದೆ ಸಂಕ್ರಾಂತಿ!
✍ಶಂಕರಿ ಶರ್ಮ, ಪುತ್ತೂರು.
‘ಮಹಿಳೆಯು ಎಂದಿಗು ಅಬಲೆಯೆ ಅಲ್ಲ’- ಹೌದು…ಈ ವಾಕ್ಯ ಬಹಳ ಇಷ್ಟವಾಯಿತು .
ಬಹಳ ಅರ್ಥವತ್ತಾಗಿದೆ.