ಕೈಗಾದಲ್ಲಿ ಕಥಾಯಾನ
ಕಾಳೀನದಿ ತೀರದಲಿ
ತುಂಬು ಹಸಿರು ಮಡಿಲಿನಲಿ
ಕವಿಹೃದಯ ಕವಿನಮನ
ನಡೆಯಿತದೊ “ಕಥಾಯಾನ”
ಸುರಿಯುತಿರೆ ಮಳೆಯ ಹನಿ
ಎಡೆಬಿಡದೆ ಸ್ಫೂರ್ತಿ ಹನಿ
ಸಾಗಿಬರೆ ಶಿಬಿರದಲಿ
ಆತ್ಮಬಲ ತುಂಬುತಲಿ
ಸಂಪನ್ಮೂಲ ವ್ಯಕ್ತಿಗಳು
ಸತ್ಪಥಕೆ ಸೊಡರುಗಳು
ದೃಶ್ಯ ಕಾವ್ಯಗಳ ಸೊಗಸು
ತುಂಬಿತವು ನಮ ಮನಸು
ಪರಮಾಣು ಶಕ್ತಿಯದು..
ಮಾನವನ ಯುಕ್ತಿಯದು..
ಮೇಳೈಸೆ ಕೈಗಾದಲಿ
ಅಣುವಿದ್ಯುತ್ ಸ್ಥಾವರದಲಿ
ವಿವಿಧ ಜೀವಿಗಳ ಉಳಿವು
ಪಕ್ಷಿಸಂಕುಲಗಳ ನೆಲೆಯು
ಮನುಜಕುಲಕುಪಯೋಗ
ಅಭಿವೃದ್ಧಿಪಥ..ಮಹಾಯಾಗ!
-ಶಂಕರಿ ಶರ್ಮ, ಪುತ್ತೂರು.
Samayochitawada sundara Kavana, Dhanyawada,
ಧನ್ಯವಾದಗಳು ಸರ್.
ಭಗಿನಿ ಶ್ರೀಮತಿ ಶಂಕರಿ ಶರ್ಮರವರೇ ನಿಮ್ಮ ಕವನ ಅದ್ಭುತವಾಗಿ ಮೂಡಿಬಂದಿದೆ. ಶುಭವಾಗಲಿ.
ಉತ್ತಮ ಕವನ