Author: Vijaya Subrahmanya
ಹಲಸಿನಕಾಯಿಗಳು ಧಾರಾಳವಾಗಿ ಲಭ್ಯವಿರುವ ಕರಾವಳಿ ಪ್ರದೇಶದಲ್ಲಿ, ಹಲಸಿನಕಾಯಿಯ ಸೊಳೆಗಳ ಬೀಜ ಬೇರ್ಪಡಿಸಿ ಉಪ್ಪುನೀರಿನಲ್ಲಿ ಶೇಖರಿಸಿಡುವ ಪದ್ಧತಿಯಿದೆ. ಇದಕ್ಕೆ ‘ಉಪ್ಪು ಸೊಳೆ’ ಎಂದು ಹೆಸರು.ಹೀಗೆ ಶೇಖರಿಸಿದ ಸೊಳೆಗಳು ೬-೭ ತಿಂಗಳ ವರೆಗೂ ಕೆಡುವುದಿಲ್ಲ. ಉಪ್ಪುಸೊಳೆಯನ್ನು ತರಕಾರಿಯಂತೆ ಪಲ್ಯ, ಹುಳಿ ಇತ್ಯಾದಿ ಅಡುಗೆಗಳನ್ನೂ ಹಲವಾರು ರುಚಿಕರ ಖಾದ್ಯಗಳನ್ನೂ ತಯಾರಿಸಲು...
-ಶಂಕರಾಚಾರ್ಯವಿರಚಿತ ಕನಕಧಾರಾ ಸ್ತೋತ್ರ-{ಶಂಕರ ಜಯಂತಿ ಸಂದರ್ಭಕ್ಕಾಗಿ} ಶಂಕರಾಚಾರ್ಯರ ಬಾಲ್ಯ ಜೀವನದ ಶಿಕ್ಷಣ ದಿನಗಳಲ್ಲಿ ಗುರುಕುಲ ಪದ್ಧತಿಯಂತೆ ವಿದ್ಯಾರ್ಥಿಗಳು ಊಟಕ್ಕೆ ಬಿಕ್ಷೆ ಬೇಡಿ ತರಬೇಕಾಗಿತ್ತು.ಹೀಗೊಂದುದಿನ ಪುಟ್ಟ ಶಂಕರ ಒಂದು ಮನೆಯ ಮುಂದೆ ನಿಂತು “ಭವತಿ ಭಿಕ್ಷಾಂದೇಹಿ” ಎಂದ. ಮನೆಯಾಕೆ ಕಡು ಬಡವಳು. ಎರಡುದಿನದಿಂದ ಊಟಮಾಡದೆ ನಿಶ್ಯಕ್ತಳಾಗಿದ್ದಳು.”ಬಾಲಕ ಶಂಕರಾ,...
ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ- ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ.ಚೈತ್ರಮಾಸದ ಶುಕ್ಲ ಪ್ರತಿಪದೆ[ಪಾಡ್ಯ]ಯ...
ವರ್ಷದ ಕಾಲಗಣನೆ ನಮ್ಮ ಹಿಂದೂ ರೀತ್ಯ ಸೌರಮಾನ ಮತ್ತು ಚಾಂದ್ರಮಾನ ಎಂಬುದಾಗಿ ಎರಡು ರೀತಿಯಲ್ಲಿ ಪ್ರಮುಖವಾದುದು.ನಮ್ಮ ಈಗಿನ ಎಲ್ಲ ವ್ಯವಹಾರಗಳಲ್ಲೂ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಆಂಗ್ಲ ಪದ್ಧತಿ.ಆದರೆ ನಮ್ಮ ಆಚರಣೆ,ಜ್ಯೋತಿಷ್ಯಕ್ಕೆ ಸಂಬಂಧ ಪಟ್ಟಂತೆ ನಮ್ಮ ಹಿಂದೂ ರೀತ್ಯ ಉಪಯೋಗಿಸಿ ಕೊಳ್ಳುತ್ತೇವೆ.ಇದೀಗ ದೇಶದೆಲ್ಲೆಡೆ ಆಂಗ್ಲ ಪದ್ಧತಿ ಆಚರಿಸುವಾಗ,ನಮ್ಮೆಲ್ಲ...
ಹೊಸ ವರ್ಷವೆ ನೀನು ಹೊಸತಾಗಿ ಬಾ| ಹಿಂದಿನಂತಲ್ಲದೆ ಮುಂದೆ ಬದಲಾಗಿ ಬಾ|| ಮಾನಿನಿಯರ ಮಾನ ಕಾಪಾಡುವಂತೆ ಅತ್ಯಾಚಾರ ಅನಾಚಾರಕ್ಕೆ ಅಂತಿಮ ಹಾಡುವಂತೆ ಸ್ವೇಚ್ಹಾಚಾರವನು ಸದೆಬಡಿಯುವಂತೆ ಸಚ್ಹಾರಿತ್ರ್ಯವನು ನೆಲೆಗೊಳಿಸು ಬಾ ||ಹೊಸ|| ಹಿಂಡಿದ ಮನವನು ಹಿಗ್ಗಿಸು ಮೊದಲಾಗಿ ಭ್ರಷ್ಟಾಚಾರವ ಬಡಿದೋಡಿಸು ಕಾರ್ಯವಾಗಿ ದುಷ್ಟ-ದುರ್ಜನರ ದೂರೀಕರಿಸು ಬಾ ಧರ್ಮ-ಸಂಸ್ಕಾರವನು ಉಳಿಸಿ,...
ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮ; ಶ್ರೀ ಗುರುಗಳಲ್ಲಿ ಬ್ರಹ್ಮನನ್ನೂ,ವಿಷ್ಣುವನ್ನೂ,ಮಹೇಶ್ವರನನ್ನೂ ಕಾಣುವುದರೊಂದಿಗೆ ಗುರುವಿಗೆ ಶಾಶ್ವತವಾದ [ಪರಬ್ರಹ್ಮ] ಸ್ಥಾನವನ್ನೂ ಸ್ಥಾಪಿಸಿದ ಸುಸಂಸ್ಕೃತಿ ನಮ್ಮದು. ತ್ರಿಮೂರ್ತಿಗಳಿಗಾದರೋ ಅವರವರಿಗೆ ನಿಯಮಿತವಾದ ಸೃಷ್ಟಿ, ಸ್ಥಿತಿ,ಲಯಗಳ ಕೆಲಸವಾದರೆ, ಶ್ರೀಗುರುವು ಮೂವರು ದೇವರ್ಕಳ ಕೆಲಸವನ್ನೂ ಮಾಡಬೇಕಾಗುತ್ತದೆ. ಒಳ್ಳೆಯ...
ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ ನಡೆಯುತ್ತದೆ.ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವಂತೆ. ರಾಮಾಯಣವೆಂಬ ಕಾವ್ಯವೇ ಶ್ರೇಷ್ಠ.ಅದರಲ್ಲೊಳಗೊಂಡ ಎಲ್ಲಾ...
ನಿಮ್ಮ ಅನಿಸಿಕೆಗಳು…