ಕನಕಧಾರಾ ಸ್ತೋತ್ರ

Share Button

Shankaracharya

 

-ಶಂಕರಾಚಾರ್ಯವಿರಚಿತ  ಕನಕಧಾರಾ ಸ್ತೋತ್ರ-{ಶಂಕರ ಜಯಂತಿ ಸಂದರ್ಭಕ್ಕಾಗಿ}

ಶಂಕರಾಚಾರ್ಯರ ಬಾಲ್ಯ ಜೀವನದ ಶಿಕ್ಷಣ ದಿನಗಳಲ್ಲಿ ಗುರುಕುಲ ಪದ್ಧತಿಯಂತೆ ವಿದ್ಯಾರ್ಥಿಗಳು ಊಟಕ್ಕೆ ಬಿಕ್ಷೆ ಬೇಡಿ ತರಬೇಕಾಗಿತ್ತು.ಹೀಗೊಂದುದಿನ ಪುಟ್ಟ ಶಂಕರ ಒಂದು ಮನೆಯ ಮುಂದೆ ನಿಂತು “ಭವತಿ ಭಿಕ್ಷಾಂದೇಹಿ” ಎಂದ. ಮನೆಯಾಕೆ ಕಡು ಬಡವಳು. ಎರಡುದಿನದಿಂದ ಊಟಮಾಡದೆ ನಿಶ್ಯಕ್ತಳಾಗಿದ್ದಳು.”ಬಾಲಕ ಶಂಕರಾ, ನಿನ್ನಂತಹ ವಟುಗಳನ್ನು ಬರಿಗೈಲಿ ಕಳುಹಿಸಬಾರದು. ನನ್ನ ಮನೆಯೊಳಗೆ ಗಿಡದಿಂದ ಕೊಯಿದಿಟ್ಟ ಒಂದು ನೆಲ್ಲಿಕಾಯಿ ಮಾತ್ರವೇ ಇದೆ. ಅದನ್ನಾದರೂ ನಿನಗೆ ಭಿಕ್ಷೆನೀಡುತ್ತೇನೆ” . ಎಂದು ಶಂಕರನಿಗೆ ನೀಡಿದಳು.ಭಿಕ್ಷೆ ಪಡೆದ ಶಂಕರನ ಮನಸ್ಸು ನೊಂದಿತು. ಎಂತಹ ದುಸ್ಥಿತಿ ಈಕೆಯದು. ಮನೆಯೋ ಮುರುಕು ಗುಡಿಸಲು!. ಮನಸ್ಸೋ ನಿರ್ಮಲ ಸೌಧ!!.ಈಕೆಯನ್ನು ಹೇಗಾದರೂ ಮಾಡಿ ಉದ್ಧರಿಸಬೇಕೆಂದು ಮಹಾಲಕ್ಷ್ಮಿಗೆ ಮೊರೆಯಿಟ್ಟು ಸ್ತುತಿಸಿದ. ಸ್ವತಃ ಶ್ಲೋಕ ರಚಿಸಿ ಮಹಾಲಕ್ಷ್ಮಿಯನ್ನು ಅನನ್ಯ ಬೇಡಿಕೊಂಡ.ಏನಾಶ್ಚರ್ಯ! ಲಕ್ಷ್ಮಿ ಪ್ರತ್ಯಕ್ಷಳಾಗಿ ಆ ಬಡವಿಯ ಮನೆಗೆ ಬಂಗಾರದ ನೆಲ್ಲಿಕಾಯಿಯನ್ನು ಸುರಿಸಿದಳು. ಈ ಸ್ತೋತ್ರಕ್ಕೆ ಕನಕಧಾರ ಸ್ತೋತ್ರ ಎಂದು ಹೆಸರಾಯಿತು.

{ಈ ಸ್ತೋತ್ರವನ್ನು ಹೇಳಿದರೆ, ಬಡತನ ನೀಗುವುದಂತೆ}

Bala Shankara

ಕನಕಧಾರಾ ಸ್ತೋತ್ರ-

ಅಂಗಹರೇಃ ಪುಲಕಭೂಷಣ ಮಾಶ್ರಯಂತೀ|

ಭೃಂಗಾಂಗನೇವ ಮುಕುಲಾಭರಣಂ ತಮಾಲಂ||

ಅಂಗೀಕೃತಾಖಿಲವಿಭೂತಿರ ಪಾಂಗ ಲೀಲಾ|

ಮಂಗಳ್ಯದಾಸ್ತು ಮಮ ಮಂಗಳ ದೇವತಾಯಾಃ||೧||

 

ಮುಗ್ಧಾ ಮುಹುರ್ವಿದಧತಿ ವದನೇ ಮುರಾರೇ|

ಪ್ರೇಮತ್ರ ಪಾಪ್ರಣಿಹಿತಾನಿ ಗತಾಗತಾನಿ||

ಮಾಲಾದೃಶೋರ್ಮಧುಕರೀಮಮಹೋತ್ಪಲೇಯಾ|

ಸಾ  ಮೇ ಶ್ರೀಯಂ ದಿಶತು ಸಾಗರ ಸಂಭವಾಯಾಃ||೨||

 

ಅಮೀಲಿತಾರ್ಧ ಮಧಿಗಮ್ಯ ಮುದಾಮುಕುಂದ|

ಮಾನಂದ ಮಂದ ಮನಿಮೇಷ ಮನಂಗ ತಂತ್ರಂ||

ಅಕೇರಸ್ಥಿರ ಕನೀನಕ ಪಕ್ಷ್ಮನೇತ್ರಂ|

ಭೂತ್ಯೈಭವೇನ್ನಮ ಭುಜಂಗ ಶಯಾಂಗನಾಯಾಃ||೩||

 

ಭಾಹ್ವಂತರೇ ಮಧುಜಿತಃ ಶ್ರಿತ ಕೌಸ್ತುಭೇಯಾ|

ಹಾರಾವಳೀ ಚ ಹರಿನೀಲಮಯಾ ವಿಭಾತಿ||

ಕಾಮಪ್ರದಾ ಭಗವತೋಪಿ ಕಟಾಕ್ಷಮಾಲಾ|

ಕಲ್ಯಾಣ ಮಾವಹತುಮೇ ಕಮಲಾಲಯಾಯಾ||೪||

 

ಕಾಲಾಂಬುದಾಲಿ ಲಲಿತೋರಸಿ ಕೈಟಭಾರೇಃ|

ಧಾರಾಧರೇ ಸ್ಪುರತಿ ಯಾ ತಡಿದಂಗ ನೇವ||

ಮಾತುಃ ಸಮಸ್ತ ಜಗತಾಂ ಮಹನೀಯ ಮಕ್ಷಿ|

ಭದ್ರಾಣಿ ಮೇ ದಿಶತು ಭಾರ್ಗವ ನಂದನಾಯಾಃ||೫||

 

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾ|

ನ್ಮಂಗಳ್ಯ ಭಾಜಿ  ಮಧುಮಾಥಿನಿ  ಮನ್ಮಥೇನ||

ಮಯ್ಯಾ ಪತೇತ್ತದೀಹ ಮಂಥರ ಮೀಕ್ಷಣಾರ್ಧಂ|

ಮಂದಾಲ ಸಾಕ್ಷಿ ಮಕರಾಕರ ಕನ್ಯಕಾಯಾಃ||೬||

 

ವಿಶ್ವಾಮರೇಂದ್ರ ಪದ ವಿಭ್ರಮ ದಾನ ದಕ್ಷಂ|

ಆನಂದ ಹೇತು ರಧಿಕಂ ಮಧು ವಿದ್ವಿಷೋಪಿ||

ಈಷನ್ನಿಷೀದತು ಮಯಿ ಕ್ಷಣ ಮೀಕ್ಷಣಾರ್ಧಂ|

ಇಂದೀವರೋಧರ ಸಹೋದರ ಮಿಂದಿರಾಯಾಃ||೭||

 

ಇಷ್ಟಾ ವಿಶಿಷ್ಟಮತಯೋಪಿ  ನರಯಯಾದ್ರಾಕ್ |

ಧೃಷ್ಟಾಸ್ತ್ರಿ ವಿಷ್ಟಾಪಸದಶ್ಚ ಪದಂ ಭಜಂತೆ||

ದೃಷ್ಟಿಃ ಪ್ರಹೃಷ್ಪ ಕಮಲೋದರ ದೀಪ್ತಿ ರಿಷ್ಯಾಂ|

ಪುಷ್ಪಿ ಕೃಪೀಷ್ಪ ಮಮ ಪುಷ್ಕರ ವಿಷ್ಪರಾಯಾಃ||೮||

 

ದದ್ಯಾದ್ಧ ಯಾನುಪವನೋ ದ್ರವಿಣಾಂಬುಧಾರಾ|

ಮಸ್ಮಿನ್ನ ಕಿಂಚಿನ ವಿಹಂಗಶಿಶೌ ನಿಷಣ್ಣೇ||

ದುಷ್ಕರ್ಮ ಧರ್ಮ ಮಪನೀಯ ಚಿರಾಯ ದೂರಾ|

ನ್ನಾರಾಯಣ ಪ್ರಣಯಿನೀನಯನಾಂಬುವಾಹಾಃ||೯||

 

ಗೀರ್ದೇವತೇತಿ ಗರುಡದ್ವಜ ಭಾಮಿನೀತಿ|

ಶಾಂಕಭರೀತಿ ಶಶಿಶೇಖರ ವಲ್ಲಭೇತಿ||

ಸೃಷ್ಟಿಸ್ಥಿತಿ ಪ್ರಳಯ ಸಿದ್ಧಿಷು ಸಂಸ್ಥಿತಾಯೈ|

ತಸ್ಮೈ ನಮಸ್ತ್ರಿಭುವನೈಕ  ಗುರೋಸ್ತರುಣೈಃ||೧೦||

 

ಶ್ರುತೈ ನಮೋಸ್ತು ಶುಭಕರ್ಮಫಲಪ್ರಸೂತೈ|

ರತ್ನೈ ನಮೋಸ್ತು ರಮಣೀಯ ಗುಣಾಶ್ರಯಾಯೈ||

ಶಕ್ತೈ ನಮೋಸ್ತು ಶತಪತ್ರ ನಿಕೇತನಾಯೈ|

ಪುಷ್ಪೈ ನಮೋಸ್ತು ಪುರುಷೋತ್ತಮ ವಲ್ಲಭಾಯೈ||೧೧||

 

ನಮೋಸ್ತು ನಾಲೀಕ ವಿಭಾವನಾಯೈ|

ನಮೋಸ್ತು ದುಗ್ದೋದಧಿ ಜನ್ಮಭೂತ್ಯೈ||

ನಮೋಸ್ತು ಸೋಮಾಮೃತ ಸೋದರಾಯೈ|

ನಮೋಸ್ತು ಅರಾಯಣ ವಲ್ಲಭಾಯೈ||೧೨||

 

ನಮೋಸ್ತು ಹೇಮಾಂಬುಜ ಪೀಠಕಾಯೈ|

ನಮೋಸ್ತು ಭೂಮಂಡಲ ನಾಯಿಕಾಯೈ||

ನಮೋಸ್ತು ದೇವಾದಿ ದಯಾಪರಾಯೈ|

ನಮೋಸ್ತು ಶಾಙಾನಯುಧ ವಲ್ಲಭಾಯೈ||೧೩||

 

ನಮೋಸ್ತು ದೇವೈ ಭೃಗುನಂದನಾಯೈ|

ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ||

ನಮೋಸ್ತು ಲಕ್ಷ್ಮಿಯೈ ಕಮಲಾಲಯಾಯೈ|

ನಮೋಸ್ತು ದಾಮೋದರ ವಲ್ಲಭಾಯೈ||೧೪||

 

ನಮೋಸ್ತು ಕಾಂತೈ ಕಮಲೇಕ್ಷಣಾಯೈ|

ನಮೋಸ್ತು ಭೂತೈ ಭುವನ ಪ್ರಸೂತೈ||

ನಮೋಸ್ತು ದೇವಾದಿಭಿರರ್ಚಿತಾಯೈ|

ನಮೋಸ್ತು ನಂದಾತ್ಮ ಜವಲ್ಲಭಾಯೈ||೧೫||

ಸ್ತುವಂತಿಯೇ ಸ್ತುತಿಭಿರ ಮೂಭಿರನ್ವಹಂ|

 

ತ್ರಯೀ ಮಯೀಂ ತ್ರಿಭುವನ ಮಾತರಂ ರಮಾಂ||

ಗುಣಾಧಿಕಾ ಗುರುಧನ ಭಾಗ್ಯ ಭಾಗಿನೋ|

ಭವಂತಿ ತೇ ಭವಮನು ಭಾವತಾಶಯಾಃ||೧೬||

 

{ಇತೀ ಶ್ರೀಮಚ್ಛಂಕರಾಚಾರ್ಯ ವಿರಚಿತಃ ಕನಕಧಾರಾಸ್ತೋತ್ರ ಸಂಪೂರ್ಣಂ}

 

 – ವಿಜಯಾಸುಬ್ರಹ್ಮಣ್ಯ,ಕುಂಬಳೆ

 

 

1 Response

  1. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಕನಕಧಾರಾ ಸ್ತೋತ್ರ ಓದಿ ಮೆಚ್ಚಿದವರಿಗೆ ಧನ್ಯವಾದಗಳು .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: